ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಅಫ್ಜಲ್ ಗುರು ಮಗನಿಂದ ಸಕತ್ ಮಾರ್ಕ್ಸ್ ಗಳಿಕೆ

By Mahesh
|
Google Oneindia Kannada News

ಶ್ರೀನಗರ, ಜ. 11: ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸಿದ ನೇಣುಗಂಬ ಏರಿದ ಉಗ್ರ ಅಫ್ಜಲ್ ಗುರುವಿನ ಮಗ ವಿದ್ಯಾಭ್ಯಾಸದಲ್ಲಿ ಸಕತ್ ಚೂಟಿಯಾಗಿದ್ದಾನೆ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ 95ರಷ್ಟು ಅಂಕ ಪಡೆದಿದ್ದಾನೆ ಎಂಬ ಸುದ್ದಿ ಬಂದಿದೆ.

ಜಮ್ಮು ಮತ್ತು ಕಾಶ್ಮೀರ ಪರೀಕ್ಷಾ ಶಿಕ್ಷಣ ಮಂಡಳಿ ನಡೆಸಿದ ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶ ಭಾನುವಾರ (ಜನವರಿ 10) ಹೊರ ಬಂದಿದೆ. ಅಫ್ಜಲ್ ಗುರುವಿನ ಮಗ ಗಾಲೀಬ್ ಗುರು 500 ಅಂಕಗಳಿಗೆ 475 (ಶೇ.95)ರಷ್ಟು ಅಂಕ ಪಡೆಯುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. [ಉಂಡ ಮನೆಗೆ 2 ಬಗೆದಿದ್ದ ಅಫ್ಜಲ್ ಗುರು ಟೈಂ ಲೈನ್]

ಗಾಲೀಬ್ 5 ವಿಷಯಗಳಲ್ಲಿ 90ಕ್ಕಿಂತಲೂ ಹೆಚ್ಚು ಅಂಕ ಪಡೆದು A1 ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆಂದು ಪರೀಕ್ಷಾ ಮಂಡಳಿ ತಿಳಿಸಿದೆ. ಈತನ ಈ ಸಾಧನೆಗೆ ಸ್ಥಳೀಯ ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಕುಟುಂಬ ವರ್ಗದವರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.

Afzal Guru's son scores 95% marks in 10th

ಆವಂತಿಪುರ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಗಾಲೀಬ್ ಗುರು, ಇಡೀ ಶಾಲೆಯಲ್ಲೇ ಅತಿ ಹೆಚ್ಚು ಅಂಕ ಪಡೆದ ಮೊದಲ ವಿದ್ಯಾರ್ಥಿ. ವಿಶೇಷವೆಂದರೆ ಈ ವರೆಗೂ ಈ ಶಾಲೆಯಲ್ಲಿ ಬಾಲಕಿಯರೇ ಪ್ರತೀ ಪರೀಕ್ಷೆಯಲ್ಲೂ ಮೇಲುಗೈ ಸಾಧಿಸುತ್ತಿದ್ದರು. ಆದರೆ ಈ ಬಾರಿ ಈ ದಾಖಲೆಯನ್ನು ಮೀರಿ ಗಾಲೀಬ್ ಗುರು ಹೆಚ್ಚು ಅಂಕ ಪಡೆದು ದಾಖಲೆ ಬರೆದಿದ್ದಾರೆ.

ಉಳಿದಂತೆ, ಪುಲ್ವಾಮಾ ಜಿಲ್ಲಾ ಮಟ್ಟದಲ್ಲಿ ತಬೀಷ್ ಮಂಜೂರ್ ಖಾನ್ 500 ಅಂಕಗಳಿಗೆ 498 ಅಂಕ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಅನೀಷಾ ಹಲೀಮ್ ಮತ್ತು ಹೀಬಾ ಇಂತಿಕಾಬ್ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. 475 ಅಂಕ ಪಡೆದಿರುವ ಗಾಲೀಬ್ ಗುರು 4ನೇ ಸ್ಥಾನ ಪಡೆದಿದ್ದಾನೆ.

ಸಂಸತ್ತಿನ ಮೇಲೆ ಪಾಕಿಸ್ಥಾನ ಮೂಲದ ಜೈಷ್-ಎ-ಮೊಹಮದ್ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯ ಸೂತ್ರದಾರನೇ ಅಫ್ಜಲ್ ಗುರು ಎಂಬುದು ತನಿಖೆಯಿಂದ ತಿಳಿದು ಬಂದಿತ್ತು. ನಂತರ ಪೊಲೀಸರು ಈತನನ್ನು ಬಂಧಿಸಿದ್ದರು. ಸುದೀರ್ಘ ವಿಚಾರಣೆಯ ನಂತರ ಅಫ್ಜಲ್ ಗುರು ಸಂಸತ್ ದಾಳಿಗೆ ಪ್ರಮುಖ ರೂವಾರಿ ಎಂಬುದು ಸಾಬೀತಾಗಿತ್ತು. 2013 ಫೆ.9 ರಂದು ಆತನಿಗೆ ಮರಣ ದಂಡನೆಯನ್ನು ಜಾರಿ ಮಾಡಲಾಗಿತ್ತು. (ಪಿಟಿಐ)

English summary
Ghalib Guru, son of Parliament attack convict Mohammad Afzal Guru who was hanged three years back, has scored an impressive 95 per cent marks in the 10th standard examinations conducted by the Jammu & Kashmir Board of School Examination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X