ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಫಿಯಾಗಳ ಪೈಶಾಚಿಕ ಕೃತ್ಯಕ್ಕೆ ಮತ್ತೊಬ್ಬ ಪತ್ರಕರ್ತ ಬಲಿ

By Mahesh
|
Google Oneindia Kannada News

ಭೋಪಾಲ್, ಹೂ.22: ಸಮಾಜವಾದಿ ಪಕ್ಷದ ಶಾಸಕ ರಾಮಮೂರ್ತಿ ವರ್ಮ ವಿರುದ್ಧ ಫೇಸ್​ಬುಕ್​ನಲ್ಲಿ ಬರೆದ ತಪ್ಪಿಗೆ ಪತ್ರಕರ್ತನೊಬ್ಬನನ್ನು ಸಜೀವ ದಹನ ಮಾಡಿದ ಘಟನೆ ಬೆನ್ನಲ್ಲೆ ಮಧ್ಯಪ್ರದೇಶದಲ್ಲಿ ಮರಳು ಮಾಫಿಯಾದವರು ಪತ್ರಕರ್ತನೊಬ್ಬನನ್ನು ಬಲಿ ತೆಗೆದುಕೊಂಡಿದ್ದಾರೆ.

ರಿಯಲ್ ಎಸ್ಟೇಟ್ ದಂಧೆ, ಮರಳು ಮಾಫಿಯಾ, ಭೂ ಹಗರಣ ವಿರುದ್ಧ ಕೋರ್ಟ್ ಕೇಸೊಂದನ್ನು ಹಿಂಪಡೆಯಲು ಪತ್ರಕರ್ತ 40 ವರ್ಷದ ಸಂದೀಪ್ ಕೊಥಾರಿ ನಿರಾಕರಿಸಿದ್ದಕ್ಕೆ ಅವರ ಪ್ರಾಣಕ್ಕೆ ಎರವಾಗಿದೆ. [ಶಾಸಕನ ವಿರುದ್ಧ ದನಿ ಎತ್ತಿದ ಪತ್ರಕರ್ತನ ಸುಟ್ಟು ಕೊಂದರೇ?]

ಹಿಂದಿ ಪತ್ರಿಕೆಯೊಂದರ ವರದಿಗಾರರಾಗಿರುವ ಸಂದೀಪ್​ರನ್ನು ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಕಟಂಗಿ ಎಂಬಲ್ಲಿಂದ ಶುಕ್ರವಾರ ಅಪಹರಿಸಲಾಗಿತ್ತು. ಇದಾದ ಎರಡು ದಿನಗಳಲ್ಲಿ ಮಹಾರಾಷ್ಟ್ರದ ನಾಗ್ಪುರದ ಬುಟಿಬೊರಿ ಅರಣ್ಯ ಪ್ರದೇಶದ ಬಳಿ ಇರುವ ರೈಲ್ವೆ ಹಳಿಗಳ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

MP Journo burnt alive over property deal

ಸಂದೀಪ್ ಅವರ ದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಾದ ವಿಶಾಲ್ ತಂಡಿ, ಬ್ರಿಜೇಶ್ ದುಹರ್ವಾಲ್, ರಾಕೇಶ್ ನರ್ಸವಾಣಿ ಅವರು ಚಿಟ್ ಫಂಡ್ ಕಂಪನಿಗಳನ್ನು ನಡೆಸುತ್ತಿದ್ದು, ಅಕ್ರಮ ಮರಳು ದಂಧೆಯಲ್ಲೂ ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಇತ್ತೀಚೆಗಷ್ಟೇ ಪತ್ರಕರ್ತ ಜಗೇಂದ್ರ ಸಿಂಗ್​ರನ್ನು ಸಜೀವವಾಗಿ ದಹಿಸಿ ಹತ್ಯೆ ಮಾಡಲಾಗಿತ್ತು. ಶಾಸಕ ರಾಮಮೂರ್ತಿ ಅಕ್ರಮ ಗಣಿಗಾರಿಕೆ, ಭೂ ಕಬಳಿಕೆಗಳ ಮುಂತಾದ ಭ್ರಷ್ಟಾಚಾರ ಕೃತ್ಯಗಳನ್ನು ನಡೆಸಿದ ಆರೋಪವಿದೆ.

ಈ ಬಗ್ಗೆ ಪತ್ರಿಕೆಗಳಿಗೆ ಜಗೇಂದ್ರ ಸಿಂಗ್ ವರದಿ ಮಾಡಿದ ತಪ್ಪಿಗೆ ಅವರನ್ನು ಕೊಲ್ಲಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಿತ್ತು.ಈಗ ಪೆಸ್ ಕ್ಲಬ್ ಆಫ್ ಇಂಡಿಯಾ ಮನವಿ ಸ್ವೀಕರಿಸಿದ ಸುಪ್ರೀಂಕೋರ್ಟ್, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

English summary
A 35-year old journalist in Madhya Pradesh was burnt alive by three people who kidnapped him when he refused to give away the details of a land deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X