ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಟಿವಿಯಲ್ಲೇ ಮಿಡ್ ನೈಟ್ ಮಸಾಲ ನೋಡ್ಬಹುದಂತೆ!

By Mahesh
|
Google Oneindia Kannada News

ಮುಂಬೈ, ಅ.11: ವಯಸ್ಕರ ಚಿತ್ರಗಳ ಮೇಲಿದ್ದ ನಿರ್ಬಂಧ, ನಿಷೇಧವನ್ನು ಹಿಂಪಡೆಯಲು ಸೆನ್ಸಾರ್ ಮಂಡಳಿ ನಿರ್ಧರಿಸಿದೆ. ಹೀಗಾಗಿ ಮನೆಯಲ್ಲೇ ಮಿಡ್ ನೈಟ್ ಮಸಾಲ ಚಿತ್ರಗಳು ಇನ್ಮುಂದೆ 'ಪಿಜಿ' ಎಂಬ ಟ್ಯಾಗ್ ನೊಂದಿಗೆ ಪ್ರಸಾರವಾಗಬಹುದು.

ಟಿವಿಗಳಲ್ಲಿ ವಯಸ್ಕರ ಚಿತ್ರಗಳ ಪ್ರಸಾರದ ಮೇಲಿದ್ದ ನಿಷೇಧವನ್ನು ಸೆನ್ಸಾರ್ ಮಂಡಳಿ(ಸಿಬಿಎಫ್ ಸಿ) ತೆರವುಗೊಳಿಸಿದೆ. ಕಳೆದ 10 ತಿಂಗಳಿಂದ ಟಿವಿಗಳಲ್ಲಿ ವಯಸ್ಕರ ಚಿತ್ರಗಳ ಪ್ರಸಾರ ಕುರಿತು ನಿರ್ಬಂಧ ವಿಧಿಸಲಾಗಿತ್ತು. ಇದೀಗ ಚಿತ್ರರಂಗದವರು, ಬ್ರಾಡ್ ಕಾಸ್ಟರ್ ಗಳ ಒತ್ತಡ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ತಲೆ ಬಾಗಿದೆ. ಕಳೆದ ಜನವರಿ ತಿಂಗಳಿನಿಂದ ಸೆನ್ಸಾರ್ ಮಂಡಳಿ ಮೇಲೆ ಒತ್ತಡ ಹೇರಲಾಗಿತ್ತು.[ಪೋರ್ನ್ ಬ್ಯಾನ್ ಮಾಡಿದರೆ ಅನಾಹುತ: ಆರ್ ಜಿವಿ]

Adult films will be back on TV soon

ಕೇಂದ್ರ ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹ್ಲಾನಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಕೆಲ ಷರತ್ತುಗಳೊಂದಿಗೆ ವಯಸ್ಕರ ಚಿತ್ರಗಳನ್ನು ಪ್ರಸಾರ ಮಾಡಲು ಸೆನ್ಸಾರ್ ಮಂಡಳಿ ಅನುಮತಿ ನೀಡಿದೆ. 'ಎ' ಸರ್ಟಿಫಿಕೇಟ್ ಚಿತ್ರಗಳಲ್ಲಿನ ಆಕ್ಷೇಪಾರ್ಹ ದೃಶ್ಯ, ಡೈಲಾಗ್‌ಗಳಿಗೆ ಕತ್ತರಿ ಪ್ರಯೋಗಿಸಲು ನಿರ್ಮಾಪಕರಿಗೆ ಸೂಚಿಸಲಿದೆ. [ಬೆತ್ತಲೆ ಚಿತ್ರ ಮಾರಿದರೆ ಪರಿಸರ ಉಳಿಯುತ್ತಾ?]

ಜೊತೆಗೆ ಯು/ಎ ಎಂಬ ಪ್ರಮಾಣ ಪತ್ರಕ್ಕೆ ಅರ್ಹವಾದ ಮೇಲೆ ಪ್ರಸಾರ ಮಾಡಲು ಸೂಚಿಸಲಾಗಿದೆ. ಕಡ್ಡಾಯವಾಗಿ 'ಪೇರೆಂಟ್ ಗೈಡ್' ಪ್ರಮಾಣದೊಂದಿಗೆ ಮನೆ ಮಂದಿಯೆಲ್ಲ ಕುಳಿತು ನೋಡುವಂತೆ ಚಿತ್ರವನ್ನು ರೂಪಿಸಿ ಪ್ರದರ್ಶಿಸಬಹುದು.[ಮನೆಯಲ್ಲಿ ಕುಳಿತು ಅಶ್ಲೀಲ ಚಿತ್ರ ನೋಡೋದು ಅಪರಾಧವೆ?]

ಅಷ್ಟಿಷ್ಟು ಕತ್ತರಿ ಪ್ರಯೋಗಗಳೊಂದಿಗೆ ಎ ಸರ್ಟಿಫಿಕೇಟ್ ಸಿನಿಮಾಗಳು ಯುಎ ಸರ್ಟಿಫಿಕೇಟ್ ಸಿನಿಮಾಗಳಾಗಿ ಟಿವಿಗಳಲ್ಲಿ ಪ್ರಸಾರ ಮಾಡಲು ಅನುಮತಿ ಇದ್ದರೂ ಪ್ರದರ್ಶಕರು ಹಾಗೂ ನಿರ್ಮಾಪಕರು ತೃಪ್ತರಾಗಿಲ್ಲ. [ಪೋರ್ನ್ ಪ್ರಿಯ ಭಾರತೀಯರು ಭಲೇ ರಸಿಕರು]

ಯು/ಎ ಸರ್ಟಿಫಿಕೆಟ್ ಇದ್ದರೆ ಸ್ಯಾಟಲೈಟ್ ಟಿವಿ ಹಕ್ಕು ಸಿಗುವುದು ಕಷ್ಟವಾಗಲಿದೆ. 'ಯು' ಸರ್ಟಿಫಿಕೆಟ್ ಇದ್ದರೆ ದೂರದರ್ಶನ ಸೇರಿದಂತೆ ಎಲ್ಲೆಡೆ ಪ್ರಸಾರಯೋಗ್ಯವಾಗಲಿದೆ (ಒನ್ ಇಂಡಿಯಾ ಸುದ್ದಿ)

English summary
Soon, viewers would be able to watch adult films on their TV set as producers have been allowed to modify 'A' rated Films to 'UA'. Reportedly the Central Board Of Film Certification(CBFC) has lifted a 10-month ban and has decided to let producers voluntarily cut their films to make it suitable for family viewing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X