ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ರಾಷ್ಟ್ರಗೀತೆಯಲ್ಲಿರುವ 'ಅಧಿನಾಯಕ' ಪದ ಬದಲಿಸಿ"

By Mahesh
|
Google Oneindia Kannada News

ಜೈಪುರ, ಜುಲೈ 08: ಭಾರತದ ರಾಷ್ಟ್ರಗೀತೆ 'ಜನ ಗಣ ಮನ..'ದಲ್ಲಿರುವ 'ಅಧಿನಾಯಕ' ಪದವನ್ನು ಬದಲಾಯಿಸಿ 'ಮಂಗಳ' ಎಂಬ ಪದ ಬಳಸಬೇಕೆಂದು ಬಿಜೆಪಿ ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ರಾಜಸ್ಥಾನ ಗವರ್ನರ್ ಕಲ್ಯಾಣ್ ಸಿಂಗ್ ಆಗ್ರಹಿಸಿದ್ದಾರೆ.

''ಜನಗಣಮನ ಅಧಿನಾಯಕ ಜಯಹೇ.. ಎಂಬ ಸಾಲಿನಲ್ಲಿ 'ಅಧಿನಾಯಕ' ಎಂಬ ಪದ ಅಂದಿನ ಬ್ರಿಟಿಷ್ ಸಾಮ್ರಾಜ್ಯವನ್ನು ಹೊಗಳಲು ಬಳಸಲಾಗಿದೆ. ಹೀಗಾಗಿ ಈ ಪದವನ್ನು ಕೈ ಬಿಟ್ಟು ಬದಲಿಯಾಗಿ ಮಂಗಳ ಎಂಬ ಪದವನ್ನು ಬಳಸಬೇಕು'' ಎಂದು ಕಲ್ಯಾಣ್ ಸಿಂಗ್ ಅವರು ರಾಜಸ್ಥಾನ ವಿವಿಯ 26ನೇ ಘಟಿಕೋತ್ಸವದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.[ಕಾಲೇಜುಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ]

''ರವೀಂದ್ರನಾಥ್ ಠ್ಯಾಗೋರ್ ಅವರ ಬಗ್ಗೆ ನನಗೆ ಗೌರವ ಇದೆ. ಅವರು ರಚಿಸಿರುವ ರಾಷ್ಟ್ರಗೀತೆಯಲ್ಲಿರುವ 'ಅಧಿನಾಯಕ' ಎಂಬ ಶಬ್ದದ ಬಗ್ಗೆ ಮಾತ್ರ ನನಗೆ ತಕರಾರಿದೆ, ಇದನ್ನು ತೆಗೆದು ಹಾಕುವುದು ಒಳ್ಳೆಯದು'' ಎಂದು ಸಿಂಗ್ ಹೇಳಿದ್ದಾರೆ.

Kalyan Singh

ಮಹಾಮಹಿಮ್ ಬಳಸಬೇಡಿ: ಬ್ರಿಟಿಷರ ಕಾಲದಲ್ಲಿ ಗವರ್ನರ್‌ ಗಳಿಗೆ ಮರ್ಯಾದೆ ಕೊಡಲು 'ಮಹಾಮಹಿಮ್' ಎಂಬ ವಿಶೇಷಣ ಬಳಸುತ್ತಿದ್ದರು. ಈಗ ಈ ಪದ ಪ್ರಯೋಗ ಅಷ್ಟು ಸಮಂಜಸವಲ್ಲ, ಮಹಾಮಹಿಮ್ ಬದಲಾಗಿ 'ಸನ್ಮಾನ್ಯ' ಎಂಬ ಪದ ಬಳಸುವುದು ಸೂಕ್ತ' ಎಂದು ಕಲ್ಯಾಣ್ ಸಿಂಗ್ ತಿಳಿಸಿದರು. [ನಾಡಗೀತೆ ಕತ್ತರಿ ಪ್ರಯೋಗಕ್ಕೆ ಭುಗಿಲೆದ್ದ ಆಕ್ರೋಶ]

ರಾಣಾ ಪ್ರತಾಪ ಗ್ರೇಟ್: ''ಅಕ್ಬರ್ ಹೊರಗಿನಿಂದ ಬಂದವ. ಆತ ದೇಶಕ್ಕಾಗಿ ಯಾವುದೇ ಸೇವೆ ನೀಡಿದವನಲ್ಲ; ಅಕ್ಬರ್ ಗೆ ಹೋಲಿಸಿದರೆ ರಾಣಾ ಪ್ರತಾಪ ಸಿಂಹನೇ ನಿಜವಾದ ಅರ್ಥದಲ್ಲಿ ಗ್ರೇಟ್ ಎನಿಸಿಕೊಳ್ಳುತ್ತಾನೆ. ಅಕ್ಬರ್ ಹೆಸರಿನ ಮೊದಲಿರುವ 'ಗ್ರೇಟ್' ಎಂಬ ವಿಶೇಷಣವನ್ನು ಕೈಬಿಡುವುದೇ ಸೂಕ್ತ,'' ಎಂದು ಸಿಂಗ್ ಹೇಳಿದರು.

ರಾಷ್ಟ್ರಗೀತೆ: 27 ಡಿಸೆಂಬರ್ 1911 ರಂದು ಪ್ರಥಮ ಬಾರಿಗೆ ಕೋಲ್ಕೊತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಗುರುದೇವ ರವೀಂದ್ರನಾಥ ಠಾಗೂರ್ ಅವರ ಗೀತಾಂಜಲಿ ಕೃತಿಯ 'ಬ್ರಹ್ಮೋ ಮಂತ್ರ' ಕವನದ ಮೊದಲಭಾಗ ಹಾಡಲಾಯಿತು, 1950ರ ಜನವರಿ 24ರಂದು ಈ ಗೀತೆಗೆ ರಾಷ್ಟ್ರಗೀತೆಯ ಮಾನ್ಯತೆಯನ್ನು ಸಂವಿಧಾನ ನೀಡಿತು. 52 ಸೆಕೆಂಡ್‌ಗಳಲ್ಲಿ ಹಾಡಿ ಮುಗಿಸಬೇಕಾಗಿರುವ ರಾಷ್ಟ್ರಗೀತೆ ಬಗ್ಗೆ ಈ ಹಿಂದೆ ಕೂಡಾ ಅನೇಕ ಬಾರಿ ಅಪಸ್ವರಗಳು ಕೇಳಿ ಬಂದಿತ್ತು. (ಪಿಟಿಐ)

English summary
In yet another controversial remark,Rajasthan governor, BJP leader and former chief minister of Uttar Pradesh has said that word 'adhinayaka' in the national anthem should be replaced. Giving reason that adhinayaka' word in the national anthem praises British rule, Rajasthan Governor said that it should be replaced with 'mangal'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X