ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಜೊತೆ ವಿದೇಶ ಪ್ರವಾಸದಲ್ಲಿರುವ ಖಾಯಂ ವ್ಯಕ್ತಿ ಯಾರು?

|
Google Oneindia Kannada News

ತನ್ನ ಅಸಾಧಾರಣ ವಾಕ್ಚಾತುರ್ಯದಿಂದ ಹೋದಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಜನರನ್ನು ತನ್ನತ್ತ ಆಕರ್ಷಿಸಿ ಕೊಳ್ಳುತ್ತಿರುವುದು ಹೊಸದೇನಲ್ಲ. ಅದು ದೇಶೀಯ ಮಾರುಕಟ್ಟೆಯಾಗಿರಲಿ ಅಥವಾ ವಿದೇಶಿ ನೆಲದಲ್ಲಾಗಿರಲಿ.

ಪ್ರಧಾನಿ ವಿದೇಶಕ್ಕೆ ಹೋದಲೆಲ್ಲಾ ಅಲ್ಲಿ ಹಬ್ಬದ ವಾತಾವಾರಣ, ಅದಕ್ಕೆ ಪ್ರಧಾನಿಯ ಈಗಿನ ಫ್ರಾನ್ಸ್, ಕೆನಡಾ ಪ್ರವಾಸವೂ ಹೊಸ ಸೇರ್ಪಡೆ. ದೇಶವನ್ನು ಮೋದಿ ಪ್ರಗತಿಪಥದತ್ತ ಕೊಂಡೊಯ್ಯುತ್ತಾರೆ ಎನ್ನುವ ಅನಿವಾಸಿ ಭಾರತೀಯರ ದೇಶಪ್ರೇಮ ಇದಕ್ಕೆ ಕಾರಣ ಇದ್ದರೂ ಇರಬಹುದು.

ಜನರ ನಂಬಿಕೆಗೆ ಮೋದಿ ಸರಕಾರ ಪೂರಕವಾಗಿ ನಡೆದುಕೊಳ್ಳುತ್ತಿದೆಯೋ ಇಲ್ಲವೋ ಎನ್ನುವುದು ಈ ಲೇಖನದಲ್ಲಿ ಅಪ್ರಸ್ತುತ. (ಕೆನಡಾದಲ್ಲಿ ಮೋದಿ ಭಾಷಣದ ಮುಖ್ಯಾಂಶಗಳು)

ಆದರೆ, ಪ್ರಧಾನಿ ವಿದೇಶ ಪ್ರವಾಸಕ್ಕೆ ಹೋದಾಗಲೆಲ್ಲಾ ವಾಣಿಜ್ಯೋದ್ಯಮಿಯೊಬ್ಬರು ಹೆಚ್ಚುಕಮ್ಮಿ ಮಿಸ್ ಇಲ್ಲದೇ ಮೋದಿ ಜೊತೆ ಪ್ರವಾಸಗೈಯುತ್ತಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಮೋದಿಯವರ ಈ ಹಿಂದಿನ ಅಮೆರಿಕಾ, ಜಪಾನ್, ಬ್ರೆಜಿಲ್ ಅಥವಾ ಈಗಿನ ವಿದೇಶ ಪ್ರವಾಸದಲ್ಲಿ ಕೂಡಾ ಮೋದಿ ಜೊತೆ ಖಾಯಂ ಆಗಿ ಪ್ರವಾಸ ಮಾಡಿದ ಪ್ರಭಾವಿ ವಾಣಿಜ್ಯೋದ್ಯಮಿ ಯಾರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ರಿಲಯನ್ಸ್ ನಷ್ಟು ದೊಡ್ಡ ಸಂಸ್ಥೆಯಲ್ಲ

ರಿಲಯನ್ಸ್ ನಷ್ಟು ದೊಡ್ಡ ಸಂಸ್ಥೆಯಲ್ಲ

ಮೋದಿ ಜೊತೆ ಹೆಚ್ಚಾಗಿ ವಿದೇಶ ಪ್ರವಾಸ ಮಾಡುವ ಈ ವಾಣಿಜ್ಯೋದ್ಯಮಿಯ ಸಂಸ್ಥೆಗಳ ವಾರ್ಷಿಕ ಟರ್ನ್ ಓವರ್ (ಇದುವರೆಗಿನ ಲೆಕ್ಕಾಚಾರದ ಪ್ರಕಾರ) ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ವಾರ್ಷಿಕ ಟರ್ನ್ ಓವರಿನ ಹತ್ತಿರಕ್ಕೂ ಬರುವುದಿಲ್ಲ. , ಮುಖೇಶ್ ಮತ್ತು ಅನಿಲ್ ಅಂಬಾನಿ ಪ್ರಧಾನಿ ಮೋದಿ ಜೊತೆಗೆ ಆಪ್ತರಾಗಿದ್ದರೂ ಅವರಿಗಿಂತ ಪರಮಾಪ್ತ ಈ ವಾಣಿಜ್ಯೋದ್ಯಮಿ.

ಗೌತಮ್ ಅದಾನಿ

ಗೌತಮ್ ಅದಾನಿ

ವಾರ್ಷಿಕ ಸುಮಾರು 56 ಸಾವಿರ ಕೋಟಿ ವಹಿವಾಟಿನ, ಗುಜರಾತ್ ಮೂಲದ ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಪ್ರಧಾನಿ ಮೋದಿ ಜೊತೆಗಿನ ವಿದೇಶ ಪ್ರವಾಸದಲ್ಲಿ ಹೆಚ್ಚುಕಮ್ಮಿ ಖಾಯಂ ಸದಸ್ಯರಲ್ಲಿ ಪ್ರಮುಖರು.

ಸ್ಟೀಲ್ ಪ್ಲಾಂಟ್

ಸ್ಟೀಲ್ ಪ್ಲಾಂಟ್

72 ಸಾವಿರ ಕೋಟಿ ಸಾಲ ಹೊಂದಿದ್ದರೂ ಅದಾನಿ ಒರಿಸ್ಸಾದ ಎರಡು ಸ್ಟೀಲ್ ಪ್ಲಾಂಟ್ ಮತ್ತು ಒಂದು ಬಂದರನ್ನು ಇತ್ತೀಚೆಗೆ ಖರೀದಿಸಿದ್ದಾರೆ. ಉಡುಪಿಯಲ್ಲಿನ ಉಷ್ಣ ವಿದ್ಯುತ್ ಸ್ಥಾವರವನ್ನು ಕೂಡಾ ಅದಾನಿ ಗ್ರೂಪ್ ಖರೀದಿಸಲು ಮುಂದಾಗಿತ್ತು. ಆದರೆ, ಲ್ಯಾನ್ಕೋ ಇನ್ಫ್ರಾಟೆಕ್ ಜತೆಗಿನ ವ್ಯವಹಾರ ಇನ್ನೂ ಸರಿಯಾಗಿ ಕುದುರಲಿಲ್ಲ.

ಗಣ್ಯಾತಿಗಣ್ಯರ ಪಟ್ಟಿಯಲ್ಲಿ ಅದಾನಿ

ಗಣ್ಯಾತಿಗಣ್ಯರ ಪಟ್ಟಿಯಲ್ಲಿ ಅದಾನಿ

ಮೋದಿ ಫ್ರಾನ್ಸ್ ನಲ್ಲಿ ಯುನೆಸ್ಕೋ ಸಭೆಯನ್ನು ಉದ್ದೇಶಿಸಿ ಮಾತನಾಡಿದಾಗಲೂ ಗೌತಮ್ ಅದಾನಿ ಗಣ್ಯಾತಿಗಣ್ಯರ ಸ್ಥಾನದಲ್ಲಿ ಆಸೀನರಾಗಿದ್ದರು. ಇಂಡೋ - ಫ್ರೆಂಚ್ CEO ಸಭೆಯಲ್ಲಿ ಭಾಗವಹಿಸುವ ಭಾರತದ ಗಣ್ಯರ ಪಟ್ಟಿಯಲ್ಲಿ ಅನಿಲ್ ಅಂಬಾನಿ ಹೆಸರಿಗಿಂತ ಮೊದಲು ಅದಾನಿ ಹೆಸರಿತ್ತು ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಕೆನಡಾದಲ್ಲೂ ಅದಾನಿ

ಕೆನಡಾದಲ್ಲೂ ಅದಾನಿ

ಈಗ ಗೌತಮ್ ಅದಾನಿ ವಿದ್ಯುತ್ ಕ್ಷೇತ್ರದಲ್ಲಿ ತನ್ನ ಬ್ಯುಸಿನೆಸ್ ವಿಸ್ತರಿಸುವ ಸಲುವಾಗಿ ಕೆನಡಾದಲ್ಲಿದ್ದಾರೆ. ಪ್ರಧಾನಿ ಮೋದಿ ಕೂಡಾ ಕೆನಡಾ ಪ್ರವಾಸದಲ್ಲಿದ್ದಾರೆ. ಆದರೆ ಮೋದಿ ವಿದೇಶ ಪ್ರವಾಸದ ವೇಳೆ ಅದಾನಿ ಕೂಡಾ ಹಾಜರಿರುವುದಕ್ಕೂ ಸರಕಾರಕ್ಕೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದಾನಿ ಯಾವ ದೇಶಕ್ಕಾದರೂ ಖಾಸಗಿ ಭೇಟಿ ನೀಡಬಹುದು, ಅದು ಅವರ ಇಷ್ಟ ಎಂದು ಸರಕಾರೀ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

English summary
Adani Group owner Gautam Adani, Prime Minister Narendra Modi's constant companion on overseas trips.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X