ಅಮೇಥಿ: ಅಖಾಲ್ ತಕ್ತ್ ರೈಲು ಸ್ಫೋಟ ವಿಫಲ

By: ವಿಕಾಸ್ ನಂಜಪ್ಪ
Subscribe to Oneindia Kannada

ಅಮೇಥಿ (ಉತ್ತರಪ್ರದೇಶ), ಆಗಸ್ಟ್ 10: ಉತ್ತರ ಪ್ರದೇಶದ ಅಮೇಥಿ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ಸ್ಫೋಟಗೊಳಿಸಲು ಉಗ್ರರು ಹೂಡಿದ್ದ ಸಂಚು ವಿಫಲಗೊಂಡಿದೆ.

ಅಮೃತ್ ಸರ್ ಗೆ ತೆರಳುತ್ತಿದ್ದ ಅಕಾಲಿ ತಖ್ತ್ ಎಕ್ಸ್ ಪ್ರೆಸ್ ರೈಲಿನಲ್ಲಿ ನಿನ್ನೆ ರಾತ್ರಿ ಶಂಕಿತ ವಸ್ತುವೊಂದು ಪತ್ತೆಯಾಗಿ ತೀವ್ರ ಆತಂಕಕ್ಕೆ ಕಾರಣವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಬೋಗಿಗಳಲ್ಲಿನ ಜನರನ್ನು ಕೆಳಗಿಳಿಸಲಾಗಿದೆ. ಭದ್ರತಾ ಸಿಬ್ಬಂದಿ ಈ ಕುರಿತು ಪರಿಶೀಲನೆ ನಡೆಸಿದ್ದಾರೆ.

Plot to blow up Akhal-Takht Express in Amethi foiled


ಪತ್ತೆಯಾದ ವಸ್ತುವಿನೊಂದಿಗೆ ಒಂದು ಪತ್ರವೂ ಪತ್ತೆಯಾಗಿದ್ದು, ಆಗಸ್ಟ್ 1ರಂದು ನಡೆದ ಎನ್‍ಕೌಂಟರ್‍ನಲ್ಲಿ ಲಷ್ಕರ್-ಎ-ತೈಬಾ (ಎಲ್‍ಇಟಿ) ಪ್ರಾದೇಶಿಕ ಕಮ್ಯಾಂಡರ್ ಅಬು ದುಜಾನಾನನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಬಾಂಬ್ ಇಡಲಾಗಿದೆ ಎಂದು ತಿಳಿದುಬಂದಿದೆ.

ದುಜಾನಾ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಈ ಸ್ಫೋಟಕವನ್ನು ಇರಿಸಲಾಗಿದೆ ಎಂದೂ ಕೂಡ ಪತ್ರದಲ್ಲಿ ತಿಳಿಸಲಾಗಿದೆ. ಪತ್ತೆಯಾದ ವಸ್ತುವಿನಲ್ಲಿ ಪುಡಿ ಮಾದರಿಯ ಸಾಮಗ್ರಿ ಪತ್ತೆಯಾಗಿದ್ದು, ಕಡಿಮೆ ತೀವ್ರತೆಯ ಇದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೌಮಿತ್ರಾ ಯಾದವ್ ತಿಳಿಸಿದ್ದಾರೆ.

Chennai - Mangalore express train derailed at Mangaluru

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A plot to blow up the Akhal-Takht Express in Amethi, Uttar Pradesh was foiled by the police. A suspicious object was reported on the train late last night following which passengers from two compartments had to be evacuated.
Please Wait while comments are loading...