ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ: ಮೋದಿಗೆ ಹಿನ್ನಡೆ, ನಿತೀಶ್ ಲಾಲೂ ಬಣಕ್ಕೆ ಮುನ್ನಡೆ

By Mahesh
|
Google Oneindia Kannada News

ಪಾಟ್ನ, ಜುಲೈ 25: ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎಗೆ ಹಿನ್ನಡೆಯಾಗಲಿದೆ. ನಿತೀಶ್ ಹಾಗೂ ಲಾಲೂ ಪ್ರಸಾದ್ ಬಣಕ್ಕೆ ಸ್ವಲ್ಪಮಟ್ಟಿಗೆ ಮುನ್ನಡೆ ಸಿಗಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳುತ್ತಿದೆ.

ಎಬಿಪಿ ನೀಲ್ಸನ್ ಸಮೀಕ್ಷೆ ಪ್ರಕಾರ ಐಎನ್ ಸಿ-ಜೆಡಿಯು-ಆರ್ ಜೆಡಿ ಮೈತ್ರಿಕೂಟ ಸುಮಾರು 129 ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಿದೆ ಶೇ 43 ರಷ್ಟು ಮತಗಳ ಪಾಲು ಹೊಂದಲಿದೆ. ಇದರಿಂದ ಬಹುಮತ ಸಾಧಿಸಲಿದೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ- ಎಲ್ ಜೆಪಿ-ಆರ್ ಎಲ್ ಎಸ್ ಪಿ ಮೈತ್ರಿಕೂಟ ಸುಮಾರು 112 ಸ್ಥಾನಗಳನ್ನು ಪಡೆಯಲಿದ್ದು, ಶೇ 32ರಷ್ಟು ಮಾತ್ರ ಮತ ಪಾಲು ಹೊಂದಲಿದೆ.

ABP News-Nielsen opinion poll

ಕಳೆದ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಸಲಾದ ಸಮೀಕ್ಷೆಯಲ್ಲೂ ಐಎನ್ ಸಿ-ಜೆಡಿಯು-ಆರ್ ಜೆಡಿ ಮೈತ್ರಿಕೂಟಕ್ಕೆ ಶೇ 42 ಮತ ಪಾಲಿನೊಂದಿಗೆ 127 ಸ್ಥಾನ ಸಿಗಲಿದೆ ಎಂಬ ಫಲಿತಾಂಶ ಸಿಕ್ಕಿತ್ತು.

ಬಿಹಾರದಲ್ಲಿ ಜನಪ್ರಿಯ ನಾಯಕರ ಬಗ್ಗೆ ನಡೆಸಲಾದ ಸಮೀಕ್ಷೆಯಲ್ಲಿ ಮೋದಿಗಿಂತ ನಿತೀಶ್ ಕುಮಾರ್ ಅವರ ಪರ ಮತದಾರನ ಒಲವು ಹೆಚ್ಚಾಗುತ್ತಿದೆ. ಶೇ 52 ರಷ್ಟು ಜನ ಬಿಹಾರ ಸಿಎಂ ನಿತೀಶ್ ಕುಮಾರ್ ಪರ ನಿಂತರೆ ಶೇ 45ರಷ್ಟು ಮಂದಿ ಪ್ರಧಾನಿ ಮೋದಿಗೆ ಮತ ಹಾಕಿದ್ದಾರೆ. ಬಿಜೆಪಿಯ ಸುಶೀಲ್ ಮೋದಿಗೆ ಶೇ 24ರಷ್ಟು ಮತಗಳು ಹಾಗೂ ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರಿಗೆ ಶೇ 13ರಷ್ಟು ವೋಟ್ ಬಿದ್ದಿದೆ.

English summary
ABP News-Nielsen opinion poll: JD(U)-RJD-Congress alliance to win, Nitish Kumar’s wave gaining momentum in Bihar and he his popular than Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X