ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದನೆ ಮಾತ್ರ ಮರಣದಂಡನೆ, ಕಾನೂನು ಆಯೋಗದ ಶಿಫಾರಸ್ಸು

ಎಲ್ಲಾ ಅಪರಾಧ ಚಟುವಟಿಕೆಗಳಲ್ಲೂ ಮರಣದಂಡನೆಯನ್ನು ರದ್ದುಗೊಳಿಸುವಂತೆ ಕಾನೂನು ಆಯೋಗ ಶಿಫಾರಸ್ಸು ಮಾಡಿದೆ. ಆದರೆ ಭಯೋತ್ಪಾದನೆ ಕೃತ್ಯಗಳಿಗೆ ಮರಣದಂಡನೆ ಇರಬೇಕು ಎಂದು ಆಯೋಗ ಹೇಳಿದೆ.

By Sachhidananda Acharya
|
Google Oneindia Kannada News

ನವದೆಹಲಿ, ಮಾರ್ಚ್ 22: ಎಲ್ಲಾ ಅಪರಾಧ ಚಟುವಟಿಕೆಗಳಲ್ಲೂ ಮರಣದಂಡನೆಯನ್ನು ರದ್ದುಗೊಳಿಸುವಂತೆ ಕಾನೂನು ಆಯೋಗ ಶಿಫಾರಸ್ಸು ಮಾಡಿದೆ. ಆದರೆ ಭಯೋತ್ಪಾದನೆ ಕೃತ್ಯಗಳಿಗೆ ಮರಣದಂಡನೆ ಇರಬೇಕು ಎಂದು ಆಯೋಗ ಹೇಳಿದೆ.

ಈ ಮಾಹಿತಿಯನ್ನು ಗೃಹ ಇಲಾಖೆ ರಾಜ್ಯ ಸಚಿವ ಹನ್ಸರಾಜ್ ಅಹಿರ್ ಇಂದು ರಾಜ್ಯಸಭೆಯಲ್ಲಿ ನೀಡಿದ್ದಾರೆ.[ಎಸ್ಸೆಸ್ಸೆಲ್ಸಿ ಪರೀಕ್ಷೆ, ಜಾಗೃತದಳದವರಿಗೂ ಮೊಬೈಲ್ ಫೋನ್ ನಿಷೇಧ]

Abolish death penalty except in terror cases says Law Commission

ಆಯೋಗ ಹೇಳಿದ್ದೇನು?

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರಲ್ಲಿರುವ ಮರಣದಂಡನೆಯನ್ನು ಭಯೋತ್ಪಾದನೆ ಹೊರಟು ಪಡಿಸಿ ಉಳಿದೆಲ್ಲಾ ಅಪರಾಧಗಳಿಗೂ ತೆಗೆದು ಹಾಕಬೇಕು ಎಂದು ಆಯೋಗ ಹೇಳಿದೆ. ಆದರೆ ದೇಶದ ವಿರುದ್ಧ ಯುದ್ಧ ಸಾರುವ ಹಾಗೂ ಭಯೋತ್ಪಾದನೆ ಕೃತ್ಯಗಳಿಗೆ ಮಾತ್ರ ಮರಣದಂಡನೆ ಇರಬೇಕು ಎಂದು ಆಯೋಗ ಹೇಳಲಾಗಿದೆ.[ಮಹಾರಾಷ್ಟ್ರ: ಗದ್ದಲವೆಬ್ಬಿಸಿದ 19 ವಿಪಕ್ಷ ಶಾಸಕರು ಸಸ್ಪೆಂಡ್]

ಶಿಫಾರಸ್ಸು ಮಾಡುವ ವೇಳೆ ಪ್ರಮುಖ ಹೇಳಿಕೆಯೊಂದನ್ನು ಕಾನೂನು ಆಯೋಗ ಉಲ್ಲೇಖಿಸಿದೆ. ಭಯೋತ್ಪಾದನೆಯನ್ನು ಮಾತ್ರ ಮರಣದಂಡನೆ ಶಿಕ್ಷೆಯೊಳಗೆ ಸೇರಿಸಲು ಯಾವುದೇ ಗಟ್ಟಿಯಾದ ಕಾರಣಗಳಿಲ್ಲ. ಆದರೆ ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗಲಿದೆ ಎಂಬ ಒಂದೇ ಕಾರಣಕ್ಕೆ ಭಯೋತ್ಪಾದನಾ ಕೃತ್ಯಗಳಿಗೆ ಮಾತ್ರ ಮರಣದಂಡನೆ ಶಿಕ್ಷೆ ಇರಲಿ ಎಂದು ಕಾನೂನು ಆಯೋಗ ಹೇಳಿದೆ.

English summary
The Law Commission has recommended that death penalty be abolished for all crimes. The commission however recommended that death penalty must remain for cases of terrorism. The same was informed by Hansraj Ahir, the Union Minister of State for Home Affairs in the Rajya Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X