ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'500 ರು ಇಟ್ಕೊಂಡು ಕಾಶಿ ಕದನ ಗೆಲ್ಲಬಲ್ಲೆ' : ಕೇಜ್ರಿ

By Mahesh
|
Google Oneindia Kannada News

ವಾರಣಾಸಿ, ಎ.23: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧೆಗಿಳಿದಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಬುಧವಾರ ನಾಮಪತ್ರ ಸಲ್ಲಿಸಿದರು. ವಾರಾಣಸಿ ಗೆಲುವಿಗಾಗಿ ಭಾರಿ ಪೈಪೋಟಿ ಆರಂಭವಾಗಿದ್ದು, ಅಜಯ್ ರಾಯ್ ಹಾಗೂ ನರೇಂದ್ರ ಮೋದಿ ಕಣದಲ್ಲಿರುವ ಇನ್ನಿಬ್ಬರು ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ರೋಡ್ ಶೋ ನಡೆಸಿ ಭಾರಿ ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿದರು. ಈ ವೇಳೆ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.2014ರ ಚುನಾವಣೆ ಬಡತನ ಮತ್ತು ಭ್ರಷ್ಟಾಚಾರದ ನಡುವಿನ ಹೋರಾಟ ಎಂದು ಕೇಜ್ರಿವಾಲ್ ಹೇಳಿದರು.

ಚುನಾವಣೆಗೆ ಖರ್ಚು ಮಾಡಲು ನನ್ನ ಬಳಿ ಹಣ ಇಲ್ಲ. ನನ್ನ ಪರ್ಸಿನಲ್ಲಿ ಕೇವಲ 500 ರುಪಾಯಿ ಮತ್ತು ಒಂದು ಹಳೆ ಜೀಪ್ ಇದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಕೋಟಿ ಕೋಟಿ ಖರ್ಚು ಮಾಡುತ್ತಾರೆ ಮತ್ತು ಕೇವಲ ಹೆಲಿಕಾಪ್ಟರ್ ‌ನಲ್ಲಿ ಬಂದು ಕೈ ಬೀಸಿ ಹೋಗುತ್ತಾರೆ. ಇವರ ಬಗ್ಗೆ ನೀವು ಎಚ್ಚರಿಕೆ ವಹಿಸಬೇಕು. ಏಕೆಂದರೆ ಇವರನ್ನು ನೀವು ಕೇವಲ ಹೆಲಿಕಾಪ್ಟರ್ ‌ನಲ್ಲಿ ಮಾತ್ರ ನೋಡಬಹುದು. ಯಾವುದೇ ಕಾರಣಕ್ಕೂ ನೀವು ಅವರನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆ ಹೇಳಿಕೊಳ್ಳಲು ಆಗುವುದಿಲ್ಲ. ಅವರು ನಿಮ್ಮ ಕೈಗೆ ಸಿಗುವುದೂ ಇಲ್ಲ. ಆದರೆ ನಾನು ನಿಮ್ಮೊಂದಿಗೆ ಇದ್ದು ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದರು. (ಪಿಟಿಐ)

ಗಂಗಾ ನದಿ ಉಳಿಸಿ ಆಂದೋಲನ

ಗಂಗಾ ನದಿ ಉಳಿಸಿ ಆಂದೋಲನ

ಭ್ರಷ್ಟಾಚಾರ ವಿರೋಧಿ ಆಂದೋಲನ ಮುಂದುವರೆಯಲಿದೆ. ವಾರಣಾಸಿಯ ಪಾವಿತ್ರ್ಯತೆ ಉಳಿಸಲು ಹೋರಾಟ ಮಾಡಬೇಕಿದೆ. ಗಂಗಾ ನದಿ ಸ್ವಚ್ಛಗೊಳಿಸಬೇಕಿದೆ. ಸಮಾಜದ ಶುದ್ಧೀಕರಣವೂ ಆಗಬೇಕಿದೆ. ವಾರಣಾಸಿಯಲ್ಲಿ ಬಡತನ ಅಳಿಸಬೇಕಿದೆ ಎಂದು ಅರವಿಂದ್ ಭಾಷಣ

ಹಣ ಸುರಿದು ಚುನಾವಣೆ ಗೆಲ್ಲಲಾರೆ

ಹಣ ಸುರಿದು ಚುನಾವಣೆ ಗೆಲ್ಲಲಾರೆ

ಮೋದಿ ಅವರದ್ದು ಹೆಲಿಕಾಪ್ಟರ್ ರಾಜಕೀಯ. ಉದ್ಯಮಿಗಳಿಂದ ಹಣ ಪಡೆದು ಪ್ರಚಾರ ನಡೆಸುತ್ತಾರೆ. ಸುಮಾರು 5 ಸಾವಿರ ಕೋಟಿ ರು ಸುರಿದು ಮೋದಿ ಬ್ರ್ಯಾಂಡ್ ಬೆಳೆಸಲಾಗುತ್ತಿದೆ. ರಾಹುಲ್ ಅವರು ಕೂಡಾ ಮಾಧ್ಯಮಗಳಲ್ಲಿ ಹೂಡಿಕೆ ಮಾಡಿ ಪ್ರಚಾರ ಪಡೆಯುತ್ತಿದ್ದಾರೆ.

ನನ್ನ ಬಳಿ ಕಪ್ಪು ಹಣವಿಲ್ಲ, ಜಾಹೀರಾತಿಗೆ ದುಡ್ಡು ಸುರಿಯಲು ಆಗುವುದಿಲ್ಲ. ಮೋದಿ ಅಧಿಕಾರಕ್ಕೆ ಬಂದರೆ 5 ಲಕ್ಷ ಕೋಟಿ ವ್ಯವಹಾರ ಅದಲು ಬದಲಾಗುತ್ತದೆ ಎಂಬ ಮಾಹಿತಿ ಇದೆ ಎಂದರು.

ಪ್ರಜಾಪ್ರಭುತ್ವ ಉಳಿಸಲು ಹೋರಾಟ

ಪ್ರಜಾಪ್ರಭುತ್ವ ಉಳಿಸಲು ಹೋರಾಟ

ನಾಮಪತ್ರ ಸಲ್ಲಿಕೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ರೋಡ್ ಶೋ ನಡೆಸಿ ಭಾರಿ ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿದರು. ಈ ವೇಳೆ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು

ಮೋದಿ ಏ.24ರಂದು ನಾಮಪತ್ರ ಸಲ್ಲಿಕೆ

ಮೋದಿ ಏ.24ರಂದು ನಾಮಪತ್ರ ಸಲ್ಲಿಕೆ

ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಏ.24ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಮೇ.12ರಂದು ಮತದಾನ ನಡೆಯಲಿರುವ ವಾರಣಾಸಿಯಲ್ಲಿ ಮೋದಿ ಅವರಿಗೆ ಅಜಯ್ ರಾಯ್ ಹಾಗೂ ಅರವಿಂದ್ ನೇರ ಸವಾಲೊಡ್ಡಿದ್ದಾರೆ.

ಕೇಜ್ರಿವಾಲ್ 500 ರು ಮಾತ್ರನಾ ಇರೋದು

ಕೇಜ್ರಿವಾಲ್ 500 ರು ಮಾತ್ರನಾ ಇರೋದು ಇದೇನು ಹೊಸ ಐಡಿಯಾನಾ ದೇಣಿಗೆ ಪಡೆಯಲು

ಕೇಜ್ರಿವಾಲ್ ನಾಮಪತ್ರ ಬಗ್ಗೆ ಮತ್ತೊಂದು ಟ್ವೀಟ್

ಕೇಜ್ರಿವಾಲ್ ಆಸ್ತಿ ಘೋಷಣೆ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ ನಡೆದಿದೆ.

English summary
AAP leader Arvind Kejriwal on Wednesday filed his nomination for high-profile Varanasi Lok Sabha seat and accused Narendra Modi and Rahul Gandhi of spending huge sums of money in the ongoing electoral battle which, he said, was all about eliminating corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X