ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಸರಕಾರದ ವಿರುದ್ದ ವಿಷ ಕಕ್ಕಿದ ಆಮ್ ಆದ್ಮಿ ಶಾಸಕ

|
Google Oneindia Kannada News

ರಾಜಕೀಯ ಎಂದ ಮೇಲೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪ ಸಹಜ. ಆದರೆ, ಚುನಾಯಿತ ಸರಕಾರದ ನೇತೃತ್ವ ವಹಿಸಿದ ಪ್ರಧಾನಮಂತ್ರಿಯ ಮೇಲೆ ಹರಾಮಿ ಎನ್ನುವ ಪದಪ್ರಯೋಗ ಎಷ್ಟು ಸರಿ?

ಹರಾಮ್ ಖೋರ್ ಮೋದಿ ಸರಕಾರ, ಗೃಹ ಸಚಿವರ ಮನೆ ಮೇಲೆ ದಾಳಿ ನಡೆಸಿ, ಕೇಂದ್ರ ಸರಕಾರಕ್ಕೆ ತಾಕತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್, ಫೆಬ್ರವರಿ 16ರಂದು ನಡೆಸಿದ್ದ 'ಹೇಟ್ ಸ್ಪೀಚ್' ಈಗ ಸಾಮಾಜಿಕ ತಾಣದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಭಾಷಣದ ವಿಡಿಯೋ ಲಿಂಕ್ ಇಲ್ಲಿದೆ (Oneindia.com do not vouch for the authenticity of this video)

ಉತ್ತರಕನ್ನಡದ ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆ, ಎಲ್ಲಿಯವರೆಗೆ ಇಸ್ಲಾಂ ಇರುತ್ತೋ, ಅಲ್ಲಿಯವರೆಗೆ ಉಗ್ರ ಚಟುವಟಿಕೆ ಮುಂದುವರಿಯುತ್ತೆ ಎನ್ನುವ ವಿವಾದಾತ್ಮಕ ಹೇಳಿಕೆ ಭಾರೀ ವಿವಾದಕ್ಕೆ ಒಳಗಾಗಿತ್ತು. (ಎಲ್ಲಿ ತನಕ ಇಸ್ಲಾಂ ಇರುತ್ತೆ ಅಲ್ಲಿವರೆಗೆ ಭಯೋತ್ಪಾದನೆ ಇರುತ್ತೆ)

ಮೋದಿ ಸರಕಾರದ ವಿರುದ್ದ ಪ್ರಚೋದನಕಾರಿ ಭಾಷಣ ಮಾಡಿದ್ದು ಹೌದು, ಬಳಸಿದ ಪದದಲ್ಲಿ ಯಾವುದೇ ತಪ್ಪಿಲ್ಲ, ಹಿಂದಕ್ಕೂ ಪಡೆಯುವುದಿಲ್ಲ ಎಂದು ಆಪ್ ಶಾಸಕ ಅಮಾನತುಲ್ಲಾ ಖಾನ್, ತನ್ನ ಭಾಷಣವನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಧಾನಿ ವಿರುದ್ದ ವೈಯಕ್ತಿಕ ದಾಳಿ ತಪ್ಪು, ಆದರೆ ಮುಫ್ತಿ ಸಾಮಿ ವಿಚಾರದಲ್ಲಿ ಅಮಾನತುಲ್ಲಾ ಖಾನ್ ನೀಡಿದ ಹೇಳಿಕೆಯಲ್ಲಿ ಯಾವುದೇ ಸುಳ್ಳಿಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖಂಡರು, ತನ್ನ ಶಾಸಕನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮುಂದೆ ಓದಿ..

ಒಖಾಲ ಕ್ಷೇತ್ರದ ಶಾಸಕ ಅಮಾನತುಲ್ಲಾ ಖಾನ್

ಒಖಾಲ ಕ್ಷೇತ್ರದ ಶಾಸಕ ಅಮಾನತುಲ್ಲಾ ಖಾನ್

ದೆಹಲಿಯ ಒಖಾಲ ಕ್ಷೇತ್ರದ ಶಾಸಕ ಅಮಾನತುಲ್ಲಾ ಖಾನ್, ಮುಸ್ಲಿಂ ನಾಯಕ ಮೌಲಾನಾ ಮುಫ್ತಿ ಅಬ್ಬಾಸ್ ಸಾಮಿ ಖ್ವಾಸ್ಮಿ ಅವರನ್ನು ದೇಶ ದ್ರೋಹಿ ಚಟುವಟಿಕೆಯ ಆರೋಪದಲ್ಲಿ ಬಂಧಿಸಿದ್ದಕ್ಕೆ ಮೋದಿ ಸರ್ಕಾರ ವಿರುದ್ಧ ಖಾನ್ ಕಿಡಿ ಕಾರಿದ್ದಾರೆ.

ಹರಾಮ್ ಕೋರ್ ಮೋದಿ ಸರಕಾರ

ಹರಾಮ್ ಕೋರ್ ಮೋದಿ ಸರಕಾರ

ಮುಫ್ತಿ ಅಬ್ಬಾಸ್ ಅವರ ಮನೆಗೆ ಹೋಗಿದ್ದೆ. ಈ ಹರಾಮ್ ಖೋರ್ ಮೋದಿ ಸರಕಾರ, ಅವರನ್ನು ಬಂಧಿಸಿದೆ. ದೆಹಲಿಯಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿಯಿದೆ. ನಾವು ನಮ್ಮ ತಾಕತ್ತನ್ನು ಪ್ರದರ್ಶಿಸಬೇಕಾಗಿದೆ. ಎಲ್ಲಾ ಸೇರಿ ಗೃಹ ಸಚಿವರ ಮನೆ ಮೇಲೆ ದಾಳಿ ಮಾಡಬೇಕು ಎಂದು ಅಮಾನತುಲ್ಲಾ ಖಾನ್ ಭಾಷಣ ಮಾಡಿದ್ದಾರೆ.

ನಮ್ಮ ಮಕ್ಕಳ ತಂಟೆಗೆ ಬರುವುದಿಲ್ಲ

ನಮ್ಮ ಮಕ್ಕಳ ತಂಟೆಗೆ ಬರುವುದಿಲ್ಲ

ಮುಫ್ತಿ ಸಾಮಿ ಮೇಲಿನ ಆರೋಪ ಸಾಬೀತು ಪಡಿಸಲು ದೆಹಲಿ ಪೊಲೀಸರ ಬಳಿ ಸಾಕ್ಷ್ಯವಿಲ್ಲ. ವಿನಾ ಕಾರಣ ಬಂಧಿಸಿ ಭಯದ ವಾತಾವರಣವನ್ನು ಸೃಷ್ಟಿಸುವುದು ಇವರ ಉದ್ದೇಶ. ಇದರ ವಿರುದ್ಧ ನಾವು ಹೋರಾಡಿದರೆ, ನಮ್ಮ ಮಕ್ಕಳ ತಂಟೆಗೆ ಇವರು ಮುಂದಿನ ದಿನಗಳಲ್ಲಿ ಬರುವುದಿಲ್ಲ ಎಂದು ಅಮನಾತುಲ್ಲಾ ಖಾನ್ ಕರೆ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಆಮ್ ಆದ್ಮಿ ಶಾಸಕ ಟ್ರೆಂಡಿಂಗ್

ನೈಜ ದೇಶಭಕ್ತರು ಆಮ್ ಆದ್ಮಿ ಶಾಸಕನ ಬಂಧನಕ್ಕೆ ಆಗ್ರಹಿಸುತ್ತಾರಾ?

ಆಮ್ ಆದ್ಮಿ ಶಾಸಕನ ಹೇಟ್ ಸ್ಪೀಚ್

ಮೋದಿ ಸರಕಾರದ ವಿರುದ್ದ ಆಮ್ ಆದ್ಮಿ ಶಾಸಕನ ಹೇಟ್ ಸ್ಪೀಚ್

English summary
Aam Aadmi party MLA from Okhala constituency, Delhi Amanatullah Khan uses derogatory language against Narendra Modi government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X