ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಫ್ ಪಿಂಚಣಿ ಪಡೆಯಲು ಆಧಾರ್ ಕಾರ್ಡ್ ಬೇಕಿಲ್ಲ!

ಉದ್ಯೋಗಿಗಳ ಪಿಂಚಣಿ ಯೋಜನೆಯಡಿಯಲ್ಲಿ ಭವಿಷ್ಯ ನಿಧಿ(ಪಿಎಫ್ ) ವಿಥ್ ಡ್ರಾ ಮಾಡುವಾಗ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು ಎಂಬ ನಿಯಮವನ್ನು ಸಡಿಲಿಸಲಾಗಿದೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮಂಗಳವಾರ ಪ್ರಕಟಿಸಿದೆ.

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 01: ಉದ್ಯೋಗಿಗಳ ಪಿಂಚಣಿ ಯೋಜನೆಯಡಿಯಲ್ಲಿ ಭವಿಷ್ಯ ನಿಧಿ(ಪಿಎಫ್ ) ವಿಥ್ ಡ್ರಾ ಮಾಡುವಾಗ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು ಎಂಬ ನಿಯಮವನ್ನು ಸಡಿಲಿಸಲಾಗಿದೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮಂಗಳವಾರ ಪ್ರಕಟಿಸಿದೆ.

ಹೀಗಾಗಿ ಇನ್ಮುಂದೆ ನಿವೃತ್ತ ಚಂದಾದರರು ತಮ್ಮ ಉಳಿತಾಯ ಖಾತೆಯಲ್ಲಿರುವ ಪಿಂಚಣಿ ಮೊತ್ತ ಪಡೆಯಲು ಆಧಾರ್ ಕಾರ್ಡ್ ಬಳಸಬೇಕಾಗಿಲ್ಲ.

ಸೇವಾವಧಿಯುದ್ದಕ್ಕೂ ವೇತನದಲ್ಲಿ ಉಳಿಸಿದ ಮೊತ್ತ ವಾಪಸು ಪಡೆಯಲು ಆಧಾರ್ ಕಡ್ಡಾಯಗೊಳಿಸಿರುವುದು ಸರಿಯಲ್ಲ ಎಂದು ಆಕ್ಷೇಪ ಕೇಳಿ ಬಂದಿತ್ತು. ಹೀಗಾಗಿ ಈ ನಿಯಮವನ್ನು ಸಡಿಲಗೊಳಿಸಲಾಗಿದೆ.

Aadhaar not mandatory for withdrawals under EPS : EPFO

10 ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿರುವ ಸದಸ್ಯರು 10 ಸಿ ಫಾರ್ಮ್ ಭರ್ತಿ ಮಾಡಿ, ಭವಿಷ್ಯ ನಿಧಿ ಖಾತೆಯಲ್ಲಿರುವ ಪಿಂಚಣಿ ಹಣವನ್ನು ಹಿಂಪಡೆದುಕೊಳ್ಳಬಹುದು. ಆದರೆ, 10 ಡಿ ಅರ್ಜಿ ಸಲ್ಲಿಸುವ ಚಂದಾದರರು ಕಡ್ಡಾಯವಾಗಿ ಆಧಾರ್ ಕಾರ್ಡ್ ತೋರಿಸಬೇಕಾಗುತ್ತದೆ.

ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ (ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಈ ಯೋಜನೆಗೆ ಕೇಂದ್ರದಿಂದ ಶೇ 1.16ರಷ್ಟು, ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ.

English summary
The Employees’ Provident Fund Organisation on Tuesday said Aadhaar was no longer compulsory for withdrawal claims under the Employees Pension Scheme, PTI reported.However, members submitting claims for pensions using form 10D will still be required to submit their UID details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X