ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಜಿಸಿ ಸ್ಕಾಲರ್‌ಶಿಪ್ ಪಡೆಯಲು ಆಧಾರ್ ಕಡ್ಡಾಯ

|
Google Oneindia Kannada News

ನವದೆಹಲಿ, ಜುಲೈ, 21: ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯಕ್ಕೆ ಸಂಬಂಧಿಸಿ ದಿಟ್ಟ ಹೆಜ್ಜೆ ಇಟ್ಟಂತೆ ದೇವಾಲಯಗಳು, ವಿಶ್ವವಿದ್ಯಾಲಯಗಳು, ತೆರಿಗೆ ಇಲಾಖೆ ಸಹ ಅದನ್ನೇ ಪಾಲಿಸುತ್ತ ಬಂದಿವೆ.

ವಿದ್ಯಾರ್ಥಿಗಳಿಗೆ ಈ ಸುದ್ದಿ ಬಹಳ ಪ್ರಮುಖವಾಗುತ್ತದೆ. ಯುಜಿಸಿ ಸ್ಕಾಲರ್‌ಶಿಪ್ ಅಥವಾ ಫೆಲೋಶಿಪ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಬೇಕು. ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಸಮಯದಲ್ಲೇ ಆಧಾರ್ ಹಾಜರುಪಡಿಸಬೇಕು ಎಂಬ ಮಾತನ್ನು ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್(ಯುಜಿಸಿ) ಹೇಳಿದೆ.[ತಿರುಪತಿಯಲ್ಲಿ ಉರುಳು ಸೇವೆ ಮಾಡಲು ಆಧಾರ್ ಬೇಕು!]

Aadhaar must for getting UGC fellowship or scholarship

ಬುಧವಾರ ಪ್ರಕಟಣೆ ಹೊರಡಿಸಿರುವ ಯುಜಿಸಿ ಅರ್ಜಿ ಸಲ್ಲಿಸುವಾಗ ಆಧಾರ್ ನ್ನು ಗುರುತಿನ ದಾಖಲೆಯಾಗಿ ನೀಡಬೇಕು ಎಂದು ಹೇಳಿದೆ. ಒಂದು ವೇಳೆ 2017-18ರ ಸಾಲಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದರೂ ಸಹ ಆಧಾರ್ ನಂಬರ್ ನೀಡುವಂತೆ ಕೋರಲಾಗಿದೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಆದಾಯ ತೆರಿಗೆ ಸಲ್ಲಿಕೆ, ಬ್ಯಾಂಕ್ ಖಾತೆ ಸೇರಿದಂತೆ ಎಲ್ಲ ಕಡೆಗೂ ನಿಧಾನವಾಗಿ ಆಧಾರ್ ವ್ಯಾಪಿಸುತ್ತಿದೆ. ತಿರುಪತಿ ತಿರುಮಲ ದೇವಾಲಯದಲ್ಲಿ ಉರುಳು ಸೇವೆ ಮಾಡಲು ಇನ್ನು ಆಧಾರ್ ಕಾರ್ಡ್ ನೀಡಬೇಕು. ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ಸಭೆ ಮಂಗಳಾವರ ಈ ತೀರ್ಮಾನ ತೆಗೆದುಕೊಂಡಿತ್ತು.

English summary
New Delhi: The University Grants Commission has asked applicants to provide Aadhaar number while applying for any UGC fellowship or scholarship. In a Public Notice UGC said that 'Aadhaar will be used as an identifier for availing benefits of the UGC scholarship/fellowship schemes'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X