ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷಯ ರೋಗಿಗಳಿಗೆ ಆಧಾರ್ ಜೋಡಣೆಗೆ ಆಗಸ್ಟ್ 30 ಕೊನೆಯ ದಿನ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 22: ಟಿಬಿ (ಟ್ಯೂಬರ್ ಕುಲೋಸಿಸ್) ಅಥವಾ ಕ್ಷಯರೋಗಿಗಳಿಗೆ ಕೇಂದ್ರ ಸರಕಾರದಿಂದ ಸಿಗುವ ನೆರವು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಆಧಾರ್ ಕಾರ್ಡ್ ಜತೆ ನೋಂದಣಿ ಮಾಡಿಕೊಳ್ಳಲು ಕ್ಷಯ ರೋಗಿಗಳಿಗೆ ಆಗಸ್ಟ್ 31ರ ಗಡುವು ನೀಡಲಾಗಿದೆ.

ಜೂನ್ 16ರಂದು ಕೇಂದ್ರ ಸರಕಾರ ಹೊಸ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ಕ್ಷಯರೋಗಿಗಳಿಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.

 Aadhaar mandatory for TB patients availing cash benefits

ಕೇಂದ್ರ ಸರಕಾರ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಯೋಜನೆಯಡಿ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು ಇದರ ಪ್ರಕಾರ ಕೇಂದ್ರ ಸರಕಾರ ನೀಡುವ ನಗದು ನೆರವು ಪಡೆದುಕೊಳ್ಳಲು ಆಧಾರ್ ನೀಡುವುದು ಕಡ್ಡಾಯವಾಗಿದೆ. ಆದರೆ ಆರೋಗ್ಯ ಸೇವೆ ಪಡೆಯಲು ಆಧಾರ್ ಕಡ್ಡಾಯವಲ್ಲ.

ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ರೋಗಿಗಳಿಗೆ ವೈದ್ಯಕೀಯ ನೆರವು ನಿರಾಕರಿಸುವಂತಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಕೇಂದ್ರ ಸರಕಾರ ನೀಡುವ ನೆರವು ಪಡೆದುಕೊಳ್ಳಲು ರೋಗಿಗಳು ವಂಚಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಆಧಾರ್ ನೀತಿಯನ್ನು ಸರಕಾರ ಜಾರಿಗೆ ತರಲು ಹೊರಟಿದೆ.

English summary
TB or tuberculosis patients availing cash assistance from the government would need to register with the Aadhaar data base by August 31. On June 16 a gazette notification was issued in which it was said that an individual eligible to receive the benefit under the Scheme is, hereby, required to furnish proof of possession of Aadhaar number or undergo Aadhaar authentication.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X