ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾನ್-ಆಧಾರ್ ಜೋಡಣೆಗೆ ಗಡುವು ನಿಗದಿ ಮಾಡಿಲ್ಲ : ಜೇಟ್ಲಿ

|
Google Oneindia Kannada News

ನವದೆಹಲಿ, ಆ, 11 : ಪ್ಯಾನ್ ಕಾರ್ಡ್‌ಗೆ ಆಧಾರ್ ನಂಬರ್ ಜೋಡಣೆ ಮಾಡಲು ಯಾವುದೇ ಸಮಯ ನಿಗದಿ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ಯಾನ್‌ಗೆ ಆಧಾರ್ ಜೋಡಣೆ ಮಾಡದಿದ್ದರೆ ಪ್ಯಾನ್ ಅಸಿಂಧುವಾಗುತ್ತದೆ.

ಪ್ಯಾನ್ ಕಾರ್ಡ್ ಸರಿಯಾಗಿದೆಯೇ ಚೆಕ್ ಮಾಡಲು ಹೀಗೆ ಮಾಡಿಪ್ಯಾನ್ ಕಾರ್ಡ್ ಸರಿಯಾಗಿದೆಯೇ ಚೆಕ್ ಮಾಡಲು ಹೀಗೆ ಮಾಡಿ

ಶುಕ್ರವಾರ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಕುರಿತು ಹೇಳಿಕೆ ನೀಡಿದರು. ಸಂಸದರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, 'ಪ್ಯಾನ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಯಾವುದೇ ಗಡುವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿಲ್ಲ' ಎಂದು ಹೇಳಿದರು.

Aadhaar link to PAN : No time-frame fixed to complete linkage

'ಜೂನ್ 28ರ ವೇಳೆಗೆ 25 ಕೋಟಿ ಮಂದಿ ಪ್ಯಾನ್ ಕಾರ್ಡ್ ಹೊಂದಿದ್ದು, 111 ಕೋಟಿ ಮಂದಿಗೆ ಆಧಾರ್ ಸಂಖ್ಯೆಯನ್ನು ವಿತರಣೆ ಮಾಡಲಾಗಿದೆ. ಪ್ಯಾನ್‌ಗೆ ಆಧಾರ್ ಲಿಂಕ್ ಮಾಡಲು ಆಗಸ್ಟ್‌ 31 ಕೊನೆಯ ದಿನಾಂಕ ಎಂದು ನಿಗದಿ ಮಾಡಲಾಗಿತ್ತು. ಆದರೆ, ಈಗ ಯಾವುದೇ ಸಮಯ ನಿಗದಿ ಮಾಡಿಲ್ಲ' ಎಂದು ಸಚಿವರು ಸ್ಪಷ್ಟನೆ ನೀಡಿದರು.

ನೆನಪಿಡಿ, ಆಧಾರ್ ಗೆ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದುನೆನಪಿಡಿ, ಆಧಾರ್ ಗೆ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದು

ತೆರಿಗೆ ತಪ್ಪಿಸಲು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದುವುದನ್ನು ತಪ್ಪಿಸಲು ಪ್ಯಾನ್‌ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಲಿಂಕ್ ಮಾಡದಿದ್ದರೆ. ಪ್ಯಾನ್ ಅಸಿಂಧುವಾಗುತ್ತದೆ.

English summary
Finance Minister Arun Jaitley on Friday informed the Lok Sabha that the government has not fixed any time-frame to complete the linking of Aadhaar with PAN.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X