ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದೊಳಗಿನ ವಿಮಾನ ಯಾನಕ್ಕೆ ಆಧಾರ್ ಕಡ್ಡಾಯಗೊಳಿಸಲು ಸಿದ್ಧತೆ

ವಿಮಾನ ಪ್ರಯಾಣದ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಪ್ರಯಾಣಿಕರನ್ನು ಗುರುತಿಸಲು ಆಧಾರ್ ಸಂಖ್ಯೆ ಮತ್ತು ಪಾಸ್‌ಪೋರ್ಟ್‌ ನೆರವಾಗಲಿದೆ ಎಂಬ ಲೆಕ್ಕಾಚಾರದಿಂದ ದೇಶದೊಳಗಿನ ವಿಮಾನ ಯಾನಕ್ಕೆ ಆಧಾರ್ ಕಡ್ಡಾಯಗೊಳಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಸಿದ್ಧ

|
Google Oneindia Kannada News

ನವದೆಹಲಿ, ಏಪ್ರಿಲ್ 10 : ದೇಶದೊಳಗಿನ ವಿಮಾನ ಯಾನಕ್ಕೆ ಟಿಕೆಟ್ ಕಾದಿರಿಸಲು ಪಾಸ್‌ಪೋರ್ಟ್‌ ಅಥವಾ ಆಧಾರ್ ಕಡ್ಡಾಯಗೊಳಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಸಿದ್ಧತೆ ನಡೆಸಿದೆ.

ವಿಮಾನಯಾನ ಸಂಸ್ಥೆಗಳ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವವರಿಗೆ ವಿಮಾನಯಾನಕ್ಕೆ ಶಾಶ್ವತವಾಗಿ ನಿಷೇಧ ಹೇರುವ ಉದ್ದೇಶದಿಂದ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಲು ಯೋಜಿಸುತ್ತಿರುವುದರ ನಡುವೆಯೇ ವಿಮಾನಯಾನ ಸಚಿವಾಲಯ ಈ ಪ್ರಕ್ರಿಯೆಗೆ ಚಾಲನೆ ನೀಡಿದೆ.[ಐಟಿ ರಿಟರ್ನ್ಸ್, ಪಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯ]

Aadhaar card or passport may soon become mandatory for domestic flight travel

ವಿಮಾನ ಪ್ರಯಾಣದ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಪ್ರಯಾಣಿಕರನ್ನು ಗುರುತಿಸಲು ಆಧಾರ್ ಸಂಖ್ಯೆ ಮತ್ತು ಪಾಸ್‌ಪೋರ್ಟ್‌ ನೆರವಾಗಲಿದೆ ಎಂಬುದು ಸಚಿವಾಲಯದ ಲೆಕ್ಕಾಚಾರವಾಗಿದೆ.

'ಹೊಸ ನಾಗರಿಕ ವಿಮಾನಯಾನ ನಿಯಮಗಳನ್ನು (ಸಿಆರ್ ಎ) ರೂಪಿಸುವ ಪ್ರಕ್ರಿಯೆಗೆ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ವಾರ ಚಾಲನೆ ನೀಡಲಿದೆ' ಎಂದು ಸಚಿವಾಲಯದ ಕಾರ್ಯದರ್ಶಿ ಆರ್‌.ಎನ್‌. ಚೌಬೆ ಹೇಳಿದ್ದಾರೆ.

ಮುಂದಿನ ವಾರದ ಒಳಗಾಗಿ ಸಿಆರ್ ಎ ಕರಡು ಸಿದ್ಧಪಡಿಸುವಂತೆ ಸಚಿವಾಲಯ ಡಿಜಿಸಿಎಗೆ ಸೂಚಿಸಿದೆ.

English summary
The government is mulling to make Aadhaar number or passport mandatory for booking domestic flight tickets amid its plans to create a no-fly list to deal with unruly passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X