ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಯೋಜನೆಗೆ ಆಧಾರ್ ಕಡ್ಡಾಯ ಬೇಡ: ಸುಪ್ರೀಂ

ಸರ್ಕಾರದ ತನ್ನ ಜನಪ್ರಿಯ ಕಲ್ಯಾಣ ಯೋಜನೆಗಳಿಗೆ ಆಧಾರ್ ಕಾರ್ಡ್ ಬಳಕೆ ಕಡ್ಡಾಯಗೊಳಿಸಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಆಧಾರ್ ಕಡ್ಡಾಯಗೊಳಿಸಿದೇಕೆ ಎಂದು ಕೋರ್ಟ್ ಪ್ರಶ್ನಿಸಿದೆ.

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 27: ಸರ್ಕಾರಿ ಯೋಜನೆಗಳ ಫಲಾನುಭವ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸುವುದೇಕೆ? ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಬೆಳಗ್ಗೆ ಪ್ರಶ್ನಿಸಿದೆ. ಆದರೆ, ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಜೋಡಣೆ ಕ್ರಮವನ್ನು ಮುಂದುವರೆಸಲು ಸೂಚಿಸಿದೆ.

ಸರ್ಕಾರದ ತನ್ನ ಜನಪ್ರಿಯ ಕಲ್ಯಾಣ ಯೋಜನೆಗಳಿಗೆ ಆಧಾರ್ ಕಾರ್ಡ್ ಬಳಕೆ ಕಡ್ಡಾಯಗೊಳಿಸಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

Aadhaar can't be mandatory for government schemes; SC

ಏಳು ಮಂದಿ ಜಡ್ಜ್ ಗಳುಳ್ಳ ನ್ಯಾಯಪೀಠವು ಆಧಾರ್ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳುವುದಕ್ಕೂ ಮೊದಲು ಇಂಥದ್ದೊಂದು ಹಿನ್ನಡೆ ಸರ್ಕಾರಕ್ಕೆ ಉಂಟಾಗಿದೆ. ಆಧಾರ್ ಕಾರ್ಡ್ ಇಲ್ಲದಿದ್ದರೆ ಯೋಜನೆಗಳ ಫಲಾನುಭವಿಗಳಿಗೆ ಕಷ್ಟ ಎಂಬ ಮಾಹಿತಿಯನ್ನು ಕೋರ್ಟಿಗೆ ಕೇಂದ್ರ ಸರ್ಕಾರ ನೀಡಿದೆ.

ಆಧಾರ್ ಇಲ್ಲದವರು ಬೇರೆ ಗುರುತಿನ ಚೀಟಿ ನೀಡಿ ಯೋಜನೆಗಳ ಲಾಭ ಪಡೆಯಬಹುದು. ಆಧಾರ್ ಕಾಯ್ದೆ 2016 ಅನ್ವಯ ಎಲ್ಲರಿಗೂ ಆಧಾರ್ ನೀಡುವ ಬಗ್ಗೆ ಇಲಾಖೆಗಳು ಕಾರ್ಯಗತವಾಗಿವೆ ಎಂದು ಸರ್ಕಾರ ಹೇಳಿದೆ.

ಎಂನರೇಗಾ, ಪಿಂಚಣಿ ಸೇರಿದಂತೆ ಅನೇಕ ಕಲ್ಯಾಣ ಯೋಜನೆಗಳ ಲಾಭ ಪಡೆಯಲು ಇದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ಅಕ್ಟೋಬರ್ 15, 2015ರಂದು ತೆಗೆದು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Aadhaar card cannot be made mandatory by the government to give out benefits from its welfare schemes, the Supreme Court has observed. The court however added that the government cannot be stopped from making it mandatory for opening bank accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X