ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಲೆಬ್ರಿಟಿಗಳನ್ನು ಸುತ್ತಿಕೊಂಡ ರಾಷ್ಟ್ರಗೀತೆ ವಿವಾದ

By Madhusoodhan
|
Google Oneindia Kannada News

ಬೆಂಗಳೂರು, ಜುಲೈ, 23: ರಾಷ್ಟ್ರಗೀತೆಗೂ ವಿವಾದ ಅಂಟಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯ ಎಂಬಂತೆ ಆಗಿಹೋಗಿದೆ. ಪ್ರೋ ಕಬಡ್ಡಿ ಪಂದ್ಯಾವಳಿ ವೇಳೆ ರಾಷ್ಟ್ರಗೀತೆ ಹಾಡಿದ ಬಾಲಿವುಡ್ ನಟಿ ಸನ್ನಿ ಲಿಯೋನ್ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.

ಬೇಕು ಅಂತಲೋ, ಅಥವಾ ಕಾರಣವಿಲ್ಲದೆಯೇ ವಿವಾದಕ್ಕೆ ಸಿಲುಕಿಕೊಳ್ಳುತ್ತಾರೋ ಹೇಳಲು ಸಾಧ್ಯವಿಲ್ಲ. ಸ್ವಲ್ಪ ಹಿಂದಕ್ಕೆ ಹೋದರೆ ರಾಷ್ಟ್ರಗೀತೆ ವಿವಾದದಲ್ಲಿ ಸಿಲಿಕಿಕೊಂಡ ಹಲವರ ಹೆಸರನ್ನು ಉಲ್ಲೇಖ ಮಾಡಬಹುದು. ಅದೇ ಸಾಲಿಗೆ ಹೊಸ ಸೇರ್ಪಡೆ ಸನ್ನಿ ಲಿಯೋನ್.[ರಾಷ್ಟ್ರಗೀತೆಯನ್ನು ಸುತ್ತಿಕೊಂಡಿರುವ ವಿವಾದ ಒಂದೆ ಎರಡೆ?]

ಇನ್ಫೋಸಿಸ್ ನಾರಾಯಣ ಮೂರ್ತಿ, ಬಿಗ್ ಬಿ ಅಮಿತಾಬ್ ಬಚ್ಚನ್, ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ, ಉಪರಾಷ್ಟ್ರತಿ ಹಮೀದ್ ಅನ್ಸಾರಿ ಹೀಗೆ ಹೆಸರುಗಳನ್ನು ಪಟ್ಟಿ ಮಾಡುತ್ತ ಹೋಗಬಹುದು...

ಇನ್ಫೋಸಿಸ್ ನಾರಾಯಣ ಮೂರ್ತಿ

ಇನ್ಫೋಸಿಸ್ ನಾರಾಯಣ ಮೂರ್ತಿ

2007 ರಲ್ಲಿ ಅಂದಿನ ರಾಷ್ಟ್ರಪತಿ ಅಬ್ದುಲ್‌ ಕಲಾಂ ಮೈಸೂರಿನ ಇನ್ಫೋಸಿಸ್‌ ಸಂಸ್ಥೆಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ, ವಾದ್ಯಗಳ ಮೂಲಕ ರಾಷ್ಟ್ರಗೀತೆ ನುಡಿಸಲಾಗಿತ್ತು. ಈ ಘಟನೆಯನ್ನು ಸಮರ್ಥಿಸಿಕೊಂಡಿದ್ದ ನಾರಾಯಣಮೂರ್ತಿ, ಸಂಸ್ಥೆಯಲ್ಲಿ ವಿದೇಶಿಯರೂ ಇದ್ದಾರೆ. ಹೀಗಾಗಿ ಮುಜುಗರ ತಪ್ಪಿಸಲು ವಾದ್ಯ ಸಂಗೀತ ಹಾಡಲಾಯಿತು ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದರು.

ಕ್ಷಮೆ ಕೇಳಿದ್ದ ಮೂರ್ತಿ

ಕ್ಷಮೆ ಕೇಳಿದ್ದ ಮೂರ್ತಿ

ಈ ಘಟನೆಯನ್ನು ಕನ್ನಡ ಸಂಘಟನೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಖಂಡಿಸಿದ್ದವು. ನಂತರ ಒತ್ತಡಕ್ಕೆ ಮಣಿದ ನಾರಾಯಣಮೂರ್ತಿ ಕ್ಷಮೆ ಯಾಚಿಸಿದ್ದರು.

ಅಮಿತಾಬ್ ಬಚ್ಚನ್

ಅಮಿತಾಬ್ ಬಚ್ಚನ್

ಕೋಲ್ಕತಾ ಈಡನ್ ಗಾರ್ಡರ್ನ್ಸ್ ಮೈದಾನದಲ್ಲಿ ನಡೆದ ಇಂಡೋ-ಪಾಕ್ ವಿಶ್ವ ಟಿ20 ಕ್ರಿಕೆಟ್ ಹೈವೋಲೇಜ್ ಪಂದ್ಯಕ್ಕೂ ಮುನ್ನ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ರಾಷ್ಟ್ರಗೀತೆ ಹಾಡಿದ್ದರು. ಇದಕ್ಕಾಗಿ 4 ಕೋಟಿ ರು ಮೊತ್ತ ಪಡೆದ್ದಾರೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ವದಂತಿ ಹಬ್ಬಿ ವಿವಾದ ಎದ್ದಿತ್ತು.

ಅಗೌರವ ತೋರಿದ್ದ ಅನ್ಸಾರಿ

ಅಗೌರವ ತೋರಿದ್ದ ಅನ್ಸಾರಿ

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬಂದಾಗ ರಾಷ್ಟ್ರಗೀತೆ ಹಾಡುವಾಗ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಸೆಲ್ಯೂಟ್ ಮಾಡದೆ ಅಗೌರವ ತೋರಿಸಿದ್ದರು.ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿತ್ತು.

ಪಿವಿಆರ್ ಗಲಾಟೆ

ಪಿವಿಆರ್ ಗಲಾಟೆ

ಮುಂಬೈನ ಕುರ್ಲಾದ ಪಿವಿಆರ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಹಿಂದಿಯ "ತಮಾಷಾ" ಚಿತ್ರ ನೋಡಲು ಬಂದ ಚಿತ್ರಕ್ಕೂ ಮುನ್ನ ರಾಷ್ಟ್ರಗೀತೆಗೆ ಆರಂಭವಾದಾಗ ಎದ್ದು ನಿಲ್ಲದೇ ಅಗೌರವ ತೋರಿಸಿತ್ತು. ಇದಾದ ಮೇಲೆ ಜನರೇ ಕುಟುಂವನ್ನು ಥಿಯೇಟರಿನಿಂದ ಹೊರಹಾಕಿದ್ದರು.

ಕರ್ನಾಟಕದ ರಾಜ್ಯಪಾಲ

ಕರ್ನಾಟಕದ ರಾಜ್ಯಪಾಲ

ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ನುಡಿಸುವ ವೇಳೆ ವೇದಿಕೆಯಿಂದ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರು ಕೆಳಗಿಳಿದು ಹೋಗಿದ್ದರು. ಹೈಕೋರ್ಟ್ ನ್ಯಾಯಮೂರ್ತಿಗಳ ಪ್ರಮಾಣ ವಚನ ಸಮಾರಂಭದ ವೇಳೆ ವಾಲಾ ಪ್ರಮಾದ ಎಸಗಿದ್ದರು.

ಸನ್ನಿ ಲಿಯೋನ್

ಸನ್ನಿ ಲಿಯೋನ್

ಸನ್ನಿ ಲಿಯೋನ್ ಅವರದ್ದು ಸದ್ಯದ ವಿವಾದ. ಪ್ರೋ ಕಬಡ್ಡಿ ಪಂದ್ಯಾವಳಿ ವೇಳೆ ರಾಷ್ಟ್ರಗೀತೆ ಹಾಡಿದ ಬಾಲಿವುಡ್ ನಟಿ ಸನ್ನಿ ಲಿಯೋನ್ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಅವರ ವಿರುದ್ಧ ಪೊಲೀಸ್ ದೂರು ಸಹ ದಾಖಲಾಗಿದೆ.

.

English summary
Controversies surrounding Indian National Anthem still continues after actress Sunny Leone for singing the national anthem incorrectly. Here is the Brief look of Controversies Surrounding Indian National Anthem
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X