ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ್ ಧನ್ ಗೆ 87 ಸಾವಿರ ಕೋಟಿ, ಥಂಡಾ ಹೊಡೆದ ಐಟಿ ಅಧಿಕಾರಿಗಳು

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜನವರಿ 2: ಜನ್ ಧನ್ ಖಾತೆಗೆ ಜಮೆಯಾಗಿರುವ ಮೊತ್ತದ ಬಗ್ಗೆ ತನಿಖೆ ನಡೆಸುವಷ್ಟರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೈರಾಣಾಗಲಿದ್ದಾರೆ. ಏಕೆಂದರೆ ನವೆಂಬರ್ 8ರ ನೋಟು ನಿಷೇಧ ಘೋಷಣೆ ನಂತರ 87 ಸಾವಿರ ಕೋಟಿ ರುಪಾಯಿ ಜನ್ ಧನ್ ಖಾತೆಗಳಲ್ಲಿ ಜಮೆಯಾಗಿದೆ. 48 ಲಕ್ಷಕ್ಕೂ ಹೆಚ್ಚು ಜನ್ ಧನ್ ಖಾತೆಗಳ ಪರಿಶೀಲನೆ ನಡೆಯುತ್ತಿದೆ.

ಅಪನಗದೀಕರಣ ಘೋಷಣೆಯಾದ ಆರಂಭದಲ್ಲಿ ಜಮೆ ಮಾಡಿದ ಹಣದಲ್ಲಿ ವಿಪರೀತ ಹೆಚ್ಚಳವಾಗಿತ್ತು. ಆದರೆ ಆ ನಂತರ ಇಳಿಕೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾತೆಗಳ ಪರಿಶೀಲನೆ ವೇಳೆ ಮೂವತ್ತರಿಂದ ಐವತ್ತು ಸಾವಿರದವರೆಗೆ ಜಮೆಯಾದ 4.8 ಲಕ್ಷ ಖಾತೆಗಳ ಒಟ್ಟು ಮೊತ್ತ 2 ಸಾವಿರ ಕೋಟಿ ರುಪಾಯಿ ಆಗುತ್ತದೆ.[ಮೋದಿ ಎಫೆಕ್ಟ್: ಎಸ್ಬಿಐ ಸಾಲದ ಮೇಲಿನ ಬಡ್ಡಿದರ ಇಳಿಕೆ]

87,000 crore deposits into Jan Dhan accounts

ಈ ಖಾತೆಗಳಿಗೆ ನವೆಂಬರ್ 8ರ ನಂತರದ ಮೊದಲ ವಾರದಲ್ಲಿ ಹೆಚ್ಚಿನ ಹಣ ಹರಿದುಬಂದಿದೆ. ಮೊದಲ ವಾರದಲ್ಲೇ 20,224 ಕೋಟು ರುಪಾಯಿ ಜನ್ ಧನ್ ಖಾತೆಗಳಲ್ಲಿ ಜಮೆಯಾಗಿದೆ. ಇದೀಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಒಂದೊಂದೇ ಜನ್ ಧನ್ ಖಾತೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಪರಿಶೀಲಿಸಬೇಕಾಗಿದೆ.[ಮೀರತ್ ಮಹಿಳೆ ಜನ್ ಧನ್ ಖಾತೆಯಲ್ಲಿ 100 ಕೋಟಿ ರು ಹೆಂಗೆ ಬಂತು?]

ಜಮೆ ಮಾಡಿದ ಎಲ್ಲ ಹಣವೂ ನಂಬಲರ್ಹ ಎನ್ನುವಂತಿಲ್ಲ. ಕೆಲವು ಜಮಾ ಮೊತ್ತವಂತೂ ವಿಪರೀತ ಹೆಚ್ಚು. ಇದರಿಂದ ಒಂದಂತೂ ಸ್ಪಷ್ಟ: ಇಂಥ ಖಾತೆಗಳನ್ನು ಕಪ್ಪು ಹಣ ಇರುವವರು ಬಳಸಿಕೊಂಡಿದ್ದಾರೆ. ಇಂಥ ಹಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಒಂದು ವೇಳೆ ಖಾತೆ ಯಾರದೋ, ಹಣ ಯಾರದೋ ಎಂದಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
The taxman has his work cut out with deposits into Jan Dhan accounts touching Rs 87,000 crore following the November 8 2016 decision on demonetisation. There are over 48 lakh accounts that are under scrutiny.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X