ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಯಾಗಿ 3 ವರ್ಷಗಳ ನಂತರವೂ ಮೋದಿ ಜನಪ್ರಿಯತೆ ಸೂಪರ್!

ಸಮೀಕ್ಷೆಯ ವರದಿಯ ಪ್ರಕಾರ, 2013ರಲ್ಲಿ ಮೋದಿಯವರನ್ನು ಶೇ. 29ರಷ್ಟು ಜನರು ಮೆಚ್ಚಿಕೊಂಡಿದ್ದರು. 2016ರಲ್ಲಿ ಶೇ. 65ಕ್ಕೆ ಹೆಚ್ಚಾದ ಈ ಜನಪ್ರಿಯತೆ ಇದೀಗ ಶೇ. 81ಕ್ಕೆ ಬಂದು ನಿಂತಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮೇ 26: ಪ್ರಧಾನಿಯಾಗಿ ನರೇಂದ್ರ ಮೋದಿಯವರು ಮೂರು ವರ್ಷ ಪೂರೈಸಿದ ನಂತರವೂ ಅವರ ಜನಪ್ರಿಯತೆ ಮೇಲ್ಮಟ್ಟದಲ್ಲೇ ಇದೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ.

2017ರಲ್ಲಿ ಮೋದಿಯವರ ಜನಪ್ರಿಯತೆಯು ಶೇ. 81ರಷ್ಟಿದೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದ್ದು, ಈ ಬಗೆಗಿನ ಮಾಹಿತಿ ಮೋದಿಯವರ ಆ್ಯಪ್ ಹಾಗೂ ಅವರ ಅಧಿಕೃತ ಜಾಲತಾಣ 'narendramodi.in' ನಲ್ಲಿ ನೋಡಬಹುದಾಗಿದೆ. ಅವರ ಅಧಿಕೃತ ಆ್ಯಪ್ ಹಾಗೂ ಜಾಲತಾಣಗಳಲ್ಲಿ ಹಲವಾರು ದಿನಗಳಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಜನರನ್ನು ಆಹ್ವಾನಿಸಲಾಗಿತ್ತು. ಇದೀಗ ಅದರ ವರದಿಯನ್ನು ಮೋದಿ ಸರ್ಕಾರ ಮೂರು ವರ್ಷ ಪೂರೈಸಿದ ದಿನದಂದು ಬಿಡುಗಡೆ ಮಾಡಲಾಗಿದೆ.[ಮೋದಿ ಸರ್ಕಾರಕ್ಕೆ ಮೂರು ವರ್ಷ: ಫಲ ನೀಡಿದ ಟಾಪ್ 20 ಯೋಜನೆಗಳು]

81 percent people support PM Narendra Modi government: Survey

ಸಮೀಕ್ಷೆಯ ವರದಿಯ ಪ್ರಕಾರ, 2013ರಲ್ಲಿ ಮೋದಿಯವರನ್ನು ಶೇ. 29ರಷ್ಟು ಜನರು ಮೆಚ್ಚಿಕೊಂಡಿದ್ದರು. 2016ರಲ್ಲಿ ಶೇ. 65ಕ್ಕೆ ಹೆಚ್ಚಾದ ಈ ಜನಪ್ರಿಯತೆ ಇದೀಗ ಶೇ. 81ಕ್ಕೆ ಬಂದು ನಿಂತಿದೆ.

ಮೇಕ್ ಇನ್ ಇಂಡಿಯಾ, ಪ್ರವಾಸೋದ್ಯ, ಮೂಲ ಸೌಕರ್ಯ ಅಭಿವೃದ್ಧಿ, ಸ್ವಚ್ಛ ಭಾರತ, ಕೃಷಿ, ಮೊಬೈಲ್ ಬ್ಯಾಂಕಿಂಗ್, ಸೌರ ಶಕ್ತಿ, ಎಲ್ ಇಡಿ ಬಲ್ಬುಗಳ ವಿತರಣೆ ಮುಂತಾದ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ನೀಡಿರುವ ಕೊಡುಗೆಗಳನ್ನು ಆಧರಿಸಿ ಈ ಸಮೀಕ್ಷ ನಡೆಸಲಾಗಿದೆ.[ಅನ್ನದಾತನ ಕೈಹಿಡಿದಿರುವ ಮಹತ್ವಾಕಾಂಕ್ಷಿ ಯೋಜನೆಗಳು]

ಸಮೀಕ್ಷೆಯಲ್ಲಿದ್ದ ಶಾಲಾ ಮಕ್ಕಳಲ್ಲಿ ಶೇ. 79ರಷ್ಟು, ಪ್ರೌಢ ಶಾಲಾ ಮಕ್ಕಳಲ್ಲಿ ಶೇ. 88ರಷ್ಟು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಶೇ. 90ರಷ್ಟು ಜನರು ಮೇದಿಯವರನ್ನು ಮೆಚ್ಚಿದ್ದಾರೆ.

ಇನ್ನು, ಶೇ. 85ರಷ್ಟು ಪುರುಷರು ಹಾಗೂ ಶೇ. 77ರಷ್ಟು ಮಹಿಳೆಯರು ಮೋದಿ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ.

ಇನ್ನು, ನಗರ ಪ್ರದೇಶದಲ್ಲಿ ಶೇ. 82ರಷ್ಟು, ಗ್ರಾಮೀಣ ಪ್ರದೇಶದಲ್ಲಿ ಶೇ. 80ರಷ್ಟು ಜನರು ಮೋದಿ ಆಡಳಿತವನ್ನು ಒಪ್ಪಿಕೊಂಡಿದ್ದಾರೆ. ಒಟ್ಟಾರೆಯಾಗಿ, ಶೇ. 81ರಷ್ಟು ಜನರು ಮೋದಿಯವರನ್ನು ಹಾಗೂ ಅವರ ಆಡಳಿತ ವೈಖರಿಯನ್ನು ಒಪ್ಪಿಕೊಂಡಿದ್ದಾರೆಂದು ಸಮೀಕ್ಷಾ ವರದಿ ಹೇಳಿದೆ.

English summary
The Prime Minister today put out the statistics on his NarendraModi App to show comparisons between 2014 and now. The Prime Minister also invited the people to participate in a survey about the government's performance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X