ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮಾ ಗಾಂಧೀಜಿ ಪತ್ರಗಳ ಬಹಿರಂಗಕ್ಕೆ ಆಶ್ರಮ ಸಿದ್ಧ

By Mahesh
|
Google Oneindia Kannada News

ಅಹಮದಾಬಾದ್, ನ. 30: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರಿಗೆ ಬಂದ ಪತ್ರಗಳನ್ನು ಸಾರ್ವಜನಿಕರ ಮುಂದಿಡಲು ಇಲ್ಲಿನ ಸಬರಮತಿ ಆಶ್ರಮ ಸಿದ್ಧತೆ ನಡೆಸಿದೆ. ಗಾಂಧೀಜಿ ಅವರು ವಿನಿಮಯ ಮಾಡಿಕೊಂಡ ಸುಮಾರು 8,500ಕ್ಕೂ ಅಧಿಕ ಪತ್ರಗಳ ಆಂತರ್ಯ ಎಲ್ಲರ ಮುಂದಿಡಲಾಗುತ್ತದೆ.[ಮಹಾತ್ಮ ಮತ್ತು ಮನುಬೆನ್ : ಬೆಚ್ಚಿಬೀಳಿಸುವ ನಗ್ನ ಸತ್ಯಗಳು]

ಈಗಾಗಲೇ ಗಾಂಧೀಜಿ ಅವರ ಸಮಗ್ರ ಪತ್ರ ವಿನಿಮಯಗಳ ಸಂಗ್ರಹವಾದ Collected Works of Mahatma Gandhi (CWMG) ನಲ್ಲಿ ಸುಮಾರು 31,000ಕ್ಕೂ ಅಧಿಕ ದಾಖಲೆಗಳು ಲಭ್ಯವಿದೆ. ಅದರೆ, ಗಾಂಧೀಜಿ ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪತ್ರಗಳಿಗೆ ಉತ್ತರ ಬರೆದಿದ್ದರು. ಈ ಪತ್ರ ವಿನಿಮಯವನ್ನು ದಾಖಲೀಕರಣ ಮಾಡಿ ಜನರ ಮುಂದಿಡಲು ಸಬರಮತಿ ಆಶ್ರಮ ಸಜ್ಜಾಗಿದೆ.[ಸುಭಾಷ್ ಚಂದ್ರ ಬೋಸ್ ಸಂಬಂಧಿಸಿದ 64 ರಹಸ್ಯ ಫೈಲ್ಸ್ ಬಹಿರಂಗ]

8,500 letters received by Mahatma Gandhi to be published
ಗಾಂಧೀಜಿ ಅವರು ಅನೇಕ ಪತ್ರಗಳಿಗೆ ಉತ್ತರಿಸುತ್ತಿದ್ದರು. ಈ ಎಲ್ಲಾ ಸಂಗ್ರಹವನ್ನು ಜನರ ಮುಂದಿಡುವುದರಿಂದ ಜನರ ಸಮಸ್ಯೆ, ಅಳಲು, ನೋವಿನ ಒಂದು ಮುಖ ಹಾಗೂ ಇದಕ್ಕೆ ಗಾಂಧೀಜಿ ನೀಡುತ್ತಿದ್ದ ಸಾಂತ್ವನ, ಪರಿಹಾರ ಹಾಗೂ ಉತ್ತರ ಇನ್ನೊಂದು ಮುಖ ಸಿಗಲಿದೆ. ಹೀಗಾಗಿ ಈ ವಿಚಾರ ಧಾರೆಯನ್ನು ಎಲ್ಲೆಡೆ ಹರಿಸಬೇಕಿದೆ ಎಂದು ಆಶ್ರಮದ ನಿರ್ದೇಶಕ ತ್ರಿದಿಪ್ ಶಾರುದ್ ಹೇಳಿದ್ದಾರೆ.[ಮಗನ ರೇಪ್ ಬಗ್ಗೆ ಗಾಂಧೀಜಿ ಬರೆದ ಪತ್ರ ಮಾರಾಟಕ್ಕೆ!]

ಸುಮಾರು 38 ವರ್ಷಗಳ ಕಾಲದಲ್ಲಿ 31,000 ಪತ್ರಗಳನ್ನು ಡಿಜಲೀಕರಣ ಮಾಡಲಾಗಿದೆ. 100 ಸಂಪುಟದಲ್ಲಿ ಇದನ್ನು ಹೊರ ತರಲಾಗಿದೆ. ರೋಮಾನಿಯನ್ ರೋಲ್ಯಾಂಡ್, ರವೀಂದ್ರನಾಥ್ ಠಾಗೋರ್, ಜವಹರ ಲಾಲ್ ನೆಹರೂ, ಸರೋಜಿನಿ ನಾಯ್ಡು, ಮೆಡೆಲೈನೆ ಸ್ಲಾಡೆ (ಮೀರಾಬೇನ್) ಹಾಗೂ ಈಸ್ತರ್ ಫಯಿರಿನ್ ಮುಂತಾದವರಿಗೆ ಪತ್ರ ವ್ಯವಹಾರ ನಡೆಸಿದ್ದು ದಾಖಲಾಗಿದೆ. [ಬಾಪೂ ಇನ್ನೂ ಸತ್ತಿಲ್ಲ, ಇಲ್ಲೊಂದು ಪತ್ರ ಬರೆದಿದ್ದಾರೆ ಓದಿ!](ಪಿಟಿಐ)

English summary
In an effort to provide greater insight into Mahatma Gandhi's exchange of views with the greats of his time, Sabarmati Ashram here has taken up a mammoth task to transcribe and publish over 8,500 letters received by him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X