2.30 ಕೋಟಿ ಮೌಲ್ಯದ 8.3 ಕೆ.ಜಿ. ಚಿನ್ನ ವಶಕ್ಕೆ

Posted By:
Subscribe to Oneindia Kannada

ರಾಮೇಶ್ವರಂ, ಜನವರಿ 1: ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಭಾನುವಾರ 8.3 ಕೆ.ಜಿ. ಚಿನ್ನದ ಬಿಸ್ಕತ್ ಗಳನ್ನು ಭಾನುವಾರ ವಶಪಡಿಸಿಕೊಂಡಿದ್ದಾರೆ. 2.30 ಕೋಟಿ ರುಪಾಯಿ ಮೌಲ್ಯದ ಚಿನ್ನವನ್ನು ಶ್ರೀಲಂಕಾದಿಂದ ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಮದುರೈ-ರಾಮೇಶ್ವರಂ ಹೆದ್ದಾರಿಯಲ್ಲಿ ಚಿನ್ನದ ಕಳ್ಳಸಾಗಣೆ ನಡೆಯುತ್ತಿದೆ ಎಂದು ಖಚಿತ ಮಾಹಿತಿಯನ್ನು ಆಧರಿಸಿದ ಅಧಿಕಾರಿಗಳು, ನಾಗಚಿ ಎಂಬಲ್ಲಿ ಕಾರನ್ನು ತಪಾಸಣೆ ಮಾಡಿ, ಚಿನ್ನದ ಬಿಸ್ಕತ್ ವಶಕ್ಕೆ ಪಡೆದಿದ್ದಾರೆ. ಮುಜ್ಬುರ್ ರೆಹಮಾನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.[98 ಕೋಟಿ ರುಪಾಯಿಗೆ ನಕಲಿ ರಸೀದಿ ಸೃಷ್ಟಿಸಿ ಸಿಕ್ಕಿಬಿದ್ದ ವ್ಯಾಪಾರಿ]

8.3 Kg Gold Biscuits Seized in Tamil Nadu

ಕಾರಿನಲ್ಲಿ ಆತ ಒಬ್ಬನೇ ಇದ್ದ. ಆ ಕಾರು ಉಚಿಪುಲಿಯ ಎನ್ಮನಂಕೊಂಡಂ ಹಳ್ಳಿಯಿಂದ ಬರುತ್ತಿತ್ತು. ಶ್ರೀಲಂಕಾದಿಂದ ಕಳ್ಳಸಾಗಣೆ ಮಾಡಿದ ಚಿನ್ನವನ್ನು ತಿರುಚಿರಾಪಲ್ಲಿಗೆ ಸಾಗಿಸಲಾಗುತ್ತಿತ್ತು. ಆ ವೇಲೆ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.[ಸಿಬಿಐ ಅಧಿಕಾರಿಗಳ ಸೋಗಿನಲ್ಲಿ 45 ಕೆ.ಜಿ. ಚಿನ್ನ ದೋಚಿ ಪರಾರಿ]

ಕಾರಿನಲ್ಲಿ ಚಿನ್ನದ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ನಂತರ ಹೆಚ್ಚಿನ ವಿಚಾರಣೆಗಾಗಿ ಟುಟಿಕೊರೀನ್ ಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

English summary
Directorate of Revenue Intelligence officials on Sunday seized 8.3 kg of gold biscuits, worth ₹2.30 crore in Madurai-Rameswaram highway at Nagatchi. Allegedly smuggled from Sri Lanka, and detained one person in this connection near here.
Please Wait while comments are loading...