ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಜೂನ್ 30: ಸರ್ಕಾರಿ ನೌಕರರಿಗೆ ನರೇಂದ್ರ ಮೋದಿ ಸರ್ಕಾರದಿಂದ ಬಂಪರ್ ಕೊಡುಗೆ ಸಿಕ್ಕಿದೆ. 7ನೇ ವೇತನ ಆಯೋಗದ ಶಿಫಾರಸ್ಸಿಗೆ ಬುಧವಾರ (ಜೂನ್ 29) ದಂದು ಎನ್ ಡಿಎ ಕ್ಯಾಬಿನೆಟ್ ಸಮ್ಮತಿಸಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಶೇ 23.55 ರಷ್ಟು ವೇತನ ಹಾಗೂ ಭತ್ಯೆ ಹೆಚ್ಚಳ ಸಿಗಲಿದೆ. ಏನಿದು ವೇತನ ಆಯೋಗ? ಹೇಗೆ ಲೆಕ್ಕಾಚಾರ ಹಾಕಲಾಗುತ್ತದೆ? ಮುಂದೆ ಓದಿ...

ಸಂಪುಟ ಕಾರ್ಯದರ್ಶಿ ಪಿ.ಕೆ ಸಿನ್ಹಾ ನೇತೃತ್ವದ ಕಾರ್ಯದರ್ಶಿಗಳ ಸಮಿತಿಯು ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಶೀಲಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿ ಆಧಾರಿಸಿ ವಿತ್ತ ಸಚಿವಾಲಯವು ಸಂಪುಟಕ್ಕೆ ತನ್ನ ಟಿಪ್ಪಣಿ ನೀಡಿದೆ.

ಇದಕ್ಕೆ ಮೋದಿ ನೇತೃತ್ವದ ಸಚಿವ ಸಂಪುಟ ಸಭೆ ಸಹಮತ ವ್ಯಕ್ತಪಡಿಸಿದೆ. ಇದರಿಂದಾಗಿ ಸುಮಾರು 47 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 58 ಲಕ್ಷಕ್ಕೂ ಅಧಿಕ ಮಂದಿ ಪಿಂಚಣಿದಾರರಿಗೆ ಹೆಚ್ಚುವರಿ ವೇತನ, ಭತ್ಯೆ ಸಿಗಲಿದೆ.[ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಏರಿಕೆ ಬಂಪರ್!]

ಏಳನೇ ವೇತನ ಆಯೋಗ:
ಕೇಂದ್ರ ಸರ್ಕಾರ ತನ್ನ ನೌಕರರ ವೇತನ, ಪಿಂಚಣಿ ಹಾಗೂ ಭತ್ಯೆಗಳನ್ನು ಪರಿಷ್ಕರಿಸಲು ಪ್ರತಿ ಹತ್ತು ವರ್ಷಕ್ಕೊಮ್ಮೆ ರಚಿಸುವ ಸಮಿತಿ ಇಅದಾಗಿದೆ. ಈಗ ಚಾಲ್ತಿಯಲ್ಲಿರುವ ಏಳನೇ ವೇತನ ಆಯೋಗ ರಚನೆಯಾಗಿದ್ದು ಯುಪಿಎ ಸರ್ಕಾರದ ಕಾಲದಲ್ಲಿ. ಜಸ್ಟೀಸ್ ಎ.ಕೆ ಮಾಥೂರ್ ಅವರು ಇದರ ಮುಖ್ಯಸ್ಥರು. [ಸಂಸದರ ತಿಂಗಳ ವೇತನ ಡಬ್ಬಲ್, ಝಣ ಝಣ ಕಾಂಚಾಣ]

* ಸಮಿತಿಯ ಇತರೆ ಸದಸ್ಯರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿವೇರ್ ರಾಯಿ, ಆರ್ಥಿಕ ತಜ್ಞ ರಾಥಿನ್ ರಾಯ್, ಆಯೋಗದ ಕಾರ್ಯದರ್ಶಿ ಮೀನಾ ಆಗರವಾಲ್ ಅವರಿದ್ದಾರೆ.
* ಆಯೋಗ ನೀಡಿದ ಶಿಫಾರಸುಗಳಿಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿರುವುದರಿಂದ ಜನವರಿ 1, 2016ರಿಂದ ಪೂರ್ವನ್ವಯವಾಗುವಂತೆ ಶಿಫಾರಸು ಜಾರಿಗೊಳ್ಳಲಿದೆ.

Seventh Pay Commission Salary Hike for Government Employees : Things You Should Know

* 2014ರ ಗಣತಿಯಂತೆ ಒಟ್ಟಾರೆ 48 ಲಕ್ಷ (ಈಗ 50 ದಾಟಿದೆ) ಕೇಂದ್ರ ಸರಕಾರಿ ನೌಕರರು (ಭಾರತೀಯ ರೈಲ್ವೆಯಲ್ಲೇ 13 ಲಕ್ಷ, ಗೃಹ ಇಲಾಖೆಯಲ್ಲಿ 9.80 ಲಕ್ಷ, ರಕ್ಷಣಾ ಇಲಾಖೆಯಲ್ಲಿ 3.98 ಲಕ್ಷ ಸೇರಿದ್ದಾರೆ) 14 ಲಕ್ಷಕ್ಕೂ ಅಧಿಕ ಮಂದಿಯನ್ನು ಹೊಂದಿರುವ ಭಾರತೀಯ ಸಶಸ್ತ್ರ ಪಡೆಯನ್ನು ನಾಗರಿಕ ಸೇವೆ ವಿಭಾಗಕ್ಕೆ ಸೇರಿಸಿಲ್ಲ.
* 58 ಲಕ್ಷಕ್ಕೂ ಅಧಿಕ ಪಿಂಚಣಿ ದಾರರಿಗೂ ಜನವರಿ 1ರಂತೆ ಪಿಂಚಣಿ ಪರಿಷ್ಕರಣೆಗೊಳ್ಳಲಿದೆ. ಇವರಲ್ಲಿ ಶೇ 36ರಷ್ಟು ಸಶಸ್ತ್ರಪಡೆಗೆ ಸೇರಿದವರು ಹಾಗೂ ಶೇ 25ರಷ್ಟು ರೈಲ್ವೆ ಇಲಾಖೆಗೆ ಸೇರಿದ ಪಿಂಚಣಿದಾರರು.[ಐಟಿ ಫ್ರೆಶರ್ಸ್ ಗೆ ಈಗ ಕೆಟ್ಟ ಕಾಲ, ಸಂಬಳ ಏರಿಕೆ ಆಗೋದಿಲ್ಲ!]

ಸಂಬಳ ಏರಿಕೆ ಲೆಕ್ಕಾಚಾರ
* ಹಣದುಬ್ಬರ ದರ(ಜಿಡಿಪಿ)ದ ಏರಿಳಿತದ ಆಧಾರದ ಮೇಲೆ ವೇತನ ಪರಿಷ್ಕರಣೆ ಶಿಫಾರಸು ಮಾಡಲಾಗುತ್ತದೆ. ಇದರಲ್ಲಿ ಗ್ರಾಹಕ ದರ ಸ್ಯೂಚಂಕ(consumer price index) ಸೇರಿರುತ್ತದೆ.
* ಇದು ಕೂಡಾ ಉದ್ಯೋಗಿಗಳ ತುಟ್ಟಿ ಭತ್ಯೆ ಹೆಚ್ಚಳದ ಲೆಕ್ಕಾಚಾರದಂತೆ ನಡೆಯಲಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ.[ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಕೊಡುಗೆ]

7ನೇ ವೇತನ ಆಯೋಗಸ ಶಿಫಾರಸುಗಳೇನು?
* ಸುಮಾರು 18 ಹಂತದ ವೇತನ ಮ್ಯಾಟ್ರಿಕ್ ಹೊಂದಿರುವ ಈ ಶಿಫಾರಸ್ಸಿನ ಮೂಲಕ ಹಳೆ ಪಿಂಚಣಿದಾರರು ಹಾಗೂ ಈಗಷ್ಟೇ ನಿವೃತ್ತಿಯಾದ ಪಿಂಚಣಿದಾರರ ನಡುವಿನ ವೇತನ ತಾರತಮ್ಯವನ್ನು ಸರಿಪಡಿಸಲಾಗಿದೆ.
* ಕನಿಷ್ಠ ವೇತನ 7,000 ರು ನಿಂದ 18,000 ರು ಗೇರಿಸಲಾಗಿದೆ. ಕ್ಲಾಸ್ 1 ಅಧಿಕಾರಿಗೆ 56,100 ರು ನಷ್ಟಿರಲಿದೆ. ಗರಿಷ್ಠ ಮೊತ್ತ 2.25 ಲಕ್ಷ ರು ನಷ್ಟಿದೆ.
* ಒಟ್ಟಾರೆ ಶೇ 23.55ರಷ್ಟು ವೇತನ ಏರಿಕೆ ಸಿಕ್ಕಿದೆ.ವೇತನ ಶೇ 16, ಭತ್ಯೆ ಶೇ 63ರಷ್ಟು ಹಾಗೂ ಪಿಂಚಣಿ ಸುಮಾರು ಶೇ 24ರಷ್ಟು ಏರಿಕೆಯಾಗಲಿದೆ.
* ಇದರ ಜೊತೆಗೆ ವೇತನ ಆಯೋಗ ಶೇ 3ರಷ್ಟು ವಾರ್ಷಿಕ ಇಂಕ್ರೀಮೆಂಟ್ ಹಾಗೂ ಪಿಂಚಣಿಯಲ್ಲಿ ಶೇ 24ರಷ್ಟು ಏರಿಕೆಗೆ ಶಿಫಾರಸು ಮಾಡಿದೆ.

ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆ:
7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಿರುವುದರಿಂದ ಕೇಂದ್ರ ಸರ್ಕಾರಕ್ಕೆ 2016-17ರ ಆರ್ಥಿಕ ವರ್ಷದಲ್ಲಿ ಹೆಚ್ಚುವರಿಯಾಗಿ ಲಕ್ಷ ಕೋಟಿ ರು ಹೊರೆ ಬೀಳಲಿದೆ. ಇದರಲ್ಲಿ ವೇತನಕ್ಕೆ ಶೇ 36(39,100 ಕೋಟಿ ರು), ಭತ್ಯೆ ಶೇ 29 (29,300 ಕೋಟಿ ರು), ಪಿಂಚಣಿ ಶೇ 33 (33,700 ಕೋಟಿ ರು)

ಯಾರಿಗೆ ಅನ್ವಯವಾಗುವುದಿಲ್ಲ: ಸಾರ್ವಜನಿಕ ವಲಯದ ಉದ್ಯಮ(ಪಿಎಸ್ ಯು), ಸ್ವಾಯುತ್ತ ಸಂಸ್ಥೆ, ಗ್ರಾಮೀಣ ಅಂಚೆ ಸೇವಕರಿಗೆ ಈ ಶಿಫಾರಸು ಅನ್ವಯವಾಗುವುದಿಲ್ಲ.

English summary
The Centre on Wednesday (June 29) okayed the 7th Pay Commission's recommendations as a result of which the salaries of government employees and pensions for retired personnel would go up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X