ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಬಾಡಿಗೆ ಭತ್ಯೆ ಹೆಚ್ಚಳ? ಕೇಂದ್ರ ನೌಕರರಿಗೆ ಬಂಪರ್ ಕೊಡುಗೆ

X ದರ್ಜೆಯ ನಗರಗಳಲ್ಲಿ ವಾಸಿಸುವ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 24ರಷ್ಟು ಹೆಚ್ಚಿನ ಭತ್ಯೆ ಸಿಗಲಿದ್ದು, Y ದರ್ಜೆಯ ನಗರಗಳಲ್ಲಿ ವಾಸಿರುವವರಿಗೆ ಶೇ. 16 ಹಾಗೂ Z ದರ್ಜೆಯ ನಗರಗಳಲ್ಲಿ ವಾಸಿಸುವವರಿಗೆ ಶೇ. 8ರಷ್ಟು ಭತ್ಯೆ ಸಿಗಲಿದೆ.

|
Google Oneindia Kannada News

ನವದೆಹಲಿ, ಏಪ್ರಿಲ್ 25: ಏಳನೇ ವೇತನ ಆಯೋಗದ ಶಿಫಾರಸು ಸದ್ಯದಲ್ಲೇ ಜಾರಿಗೊಳ್ಳಲಿದ್ದು, ಶಿಫಾರಸುಗಳಲ್ಲಿ ಕೇಂದ್ರ ಸರ್ಕಾರಿ ನೌಕರರು ವಾಸಿಸುವ ನಗರಗಳ ಶ್ರೇಣಿಯ ಆಧಾರದಲ್ಲಿ ಮನೆ ಬಾಡಿಗೆ ಭತ್ಯೆಯನ್ನು (ಪ್ರತಿ ತಿಂಗಳ ಆಧಾರದಲ್ಲಿ) ಗಣನೀಯವಾಗಿ ಹೆಚ್ಚಿಸುವ ಅಂಶವೂ ಸೇರಿದೆ ಎಂದು ಹೇಳಲಾಗಿದೆ.[ವಿಚ್ಛೇದಿತ ಪತ್ನಿಗೆ ಪತಿಯ ವೇತನದ ಶೇ.25ರಷ್ಟು ಜೀವನಾಂಶ: ಸುಪ್ರೀಂ]

X ದರ್ಜೆಯ ನಗರಗಳಲ್ಲಿ ವಾಸಿಸುವ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 24ರಷ್ಟು ಹೆಚ್ಚಿನ ಭತ್ಯೆ ಸಿಗಲಿದ್ದು, Y ದರ್ಜೆಯ ನಗರಗಳಲ್ಲಿ ವಾಸಿರುವವರಿಗೆ ಶೇ. 16 ಹಾಗೂ Z ದರ್ಜೆಯ ನಗರಗಳಲ್ಲಿ ವಾಸಿಸುವವರಿಗೆ ಶೇ. 8ರಷ್ಟು ಭತ್ಯೆ ಸಿಗಲಿದೆ.['ಬೇಕೆಂತಲೇ ಹೊಸಬರಿಗೆ ಕಡಿಮೆ ಸಂಬಳ ಕೊಡುತ್ತಿವೆ ಐಟಿ ಕಂಪೆನಿಗಳು']

7th Pay Commission's recommendations include house rent allowance rise upto 24 percent

ಸಂಪುಟ ಕಾರ್ಯದರ್ಶಿಗೆ ಬಂಪರ್
ಏಳನೇ ವೇತನ ಆಯೋಗದ ಶಿಫಾರಸುಗಳು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಯಾವ ರೀತಿ ಬೆನಿಫಿಟ್ ಎಂಬುದಕ್ಕೆ ಇದು ಸಾಕ್ಷಿ. ಕೇಂದ್ರ ಸಚಿವ ಸಂಪುಟದ ಕಾರ್ಯದರ್ಶಿಯವರಿಗೆ ಸದ್ಯಕ್ಕೆ 90 ಸಾವಿರ ರು. ವೇತನ ಸಿಗುತ್ತಿದೆ. ಏಳನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದರೆ, ಕಾರ್ಯದರ್ಶಿಯ ವೇತನ 2.5 ಲಕ್ಷ ರು.ಗಳಿಗೆ ಏರುತ್ತದೆ. ಇದರಲ್ಲಿ ಮನೆ ಬಾಡಿಗೆ ಭತ್ಯೆಯೇ ಸುಮಾರು 60 ಸಾವಿರ ರು. ಹೆಚ್ಚು ಆಗಲಿದೆ. ಸಂಪುಟ ಕಾರ್ಯದರ್ಶಿ ಎಂದರೆ ಅವರು ದಿಲ್ಲಿಯಲ್ಲಿ ಇರುವವರು ಅಲ್ಲವೇ ಹಾಗಾಗಿ, ಅವರಿಗೆ ಇದರ ಪ್ರಯೋಜನ ಜಾಸ್ತಿ.
English summary
The 7th Pay Commission had earlier proposed the rate of House Rent Allowance at 24 percent, 16 percent and 8 percent of the Basic Pay for Class X, Y and Z cities respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X