ಪಾಕ್ ನ 7 ಸೈನಿಕರ ಸಾವು ಅಂದಿದೆ ಬಿಎಸ್ ಎಫ್, ಇಲ್ಲ ಅಂತಿದೆ ಪಾಕ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ನವದೆಹಲಿ, ಅಕ್ಟೋಬರ್ 22: ಕದನ ವಿರಾಮವನ್ನು ಪದೇಪದೇ ಉಲ್ಲಂಘಿಸುತ್ತಿದ್ದ ಪಾಕ್ ಗೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ. ಈ ವೇಳೆ ಪಾಕಿಸ್ತಾನದ ಕನಿಷ್ಠ ಏಳು ಯೋಧರು ಹಾಗೂ ಒಬ್ಬ ಉಗ್ರ ಸಾವನ್ನಪ್ಪಿದ್ದಾನೆ. ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಹೀರಾ ವಲಯದಲ್ಲಿ ಮೂರು ದಿನದಿಂದ ಪಾಕ್ ಗುಂಡಿನ ದಾಳಿ ನಡೆಸುತ್ತಿತ್ತು.

ಈ ಅಪ್ರಚೋದಿತ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವಂತೆ ದೊರೆತ ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಎದುರೇಟು ನೀಡಿದೆ. ಶುಕ್ರವಾರ ಬೆಳಗ್ಗೆ ಪಾಕ್ ಸೇನೆಯ ದಾಳಿಯಲ್ಲಿ ಬಿಎಸ್ ಎಫ್ ಯೋಧ ಗುರುನಾಮ್ ಸಿಂಗ್ ಎಂಬುವರು ಗಾಯಗೊಂಡಿದ್ದರು. ಆ ನಂತರ ಭಾರತೀಯ ಸೇನೆಯಿಂದ ಪ್ರತಿ ದಾಳಿ ಆರಂಭವಾಯಿತು.['ಪಾಕ್ ಸೇನಾ ನೆರವು ನೀಡಿದರೆ ಉಪಖಂಡದ ನಕ್ಷೆಯೇ ಬದಲು']

BSF

ಇದರಿಂದ ಪಾಕ್ ಸೇನೆಯ ಹಲವು ಗಡಿ ಠಾಣೆಗಳನ್ನು ಧ್ವಂಸವಾಗಿವೆ. ಜತೆಗೆ ಉಗ್ರರ ತಾತ್ಕಾಲಿಕ ಶಿಬಿರಗಳು ನೆಲಕಚ್ಚಿವೆ. ಜತೆಗೆ ಪಾಕ್ ನ ಏಳು ಸೈನಿಕರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಆ ನಂತರ ಪಾಕ್ ಕಡೆಯಿಂದ ದಾಳಿ ಪ್ರಮಾಣ ಕಡಿಮೆಯಾಗಿದೆ ಎಂದು ಬಿಎಸ್ ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.[ಸೇನೆಯ ಭಾರೀ ಕಾರ್ಯಾಚರಣೆ: 44 ಶಂಕಿತ ಲಷ್ಕರ್ ಉಗ್ರರ ಬಂಧನ]

ಭಾರತ ಹೇಳಿಕೊಂಡಿರುವಂತೆ ಶುಕ್ರವಾರ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪಾಕ್ ಸೇನೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಬಿಎಸ್ ಎಫ್ ಹೇಳಿಕೊಂಡಿರುವುದು ಬರೀ ಸುಳ್ಳು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

English summary
The BSF on Friday claimed to have killed at least seven Pakistan Rangers personnel in Hiranagar, Jammu, in retaliation for a sniper attack that injured one of their men.
Please Wait while comments are loading...