ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣ್ಮಕ್ಕಳ ಬದ್ಧ ವೈರಿ ಜಿರಳೆ ಬಗ್ಗೆ ಗೊತ್ತಿರದ 6 ಸಂಗತಿಗಳು

By Madhusoodhan
|
Google Oneindia Kannada News

ನಿಮಗೆ ಗೊತ್ತಿರುವ ಗುಟ್ಟೊಂದನ್ನು ಹೇಳುತ್ತೇನೆ. ಈ ಹೆಣ್ಣು ಮಕ್ಕಳಿಗೆ ಅಪ್ಪ- ಅಮ್ಮನನ್ನು, ಗಂಡನನ್ನು ಕಂಡರೆ ಭಯ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಜಿರಳೆಗಳನ್ನು ಕಂಡರೆ ಖಂಡಿತ ಹುಡುಗಿಯರು ಹೌಹಾರಿ ಮಾರು ದೂರ ಓಡುವುದು ಖಾತ್ರಿ.

ಮನೆಯಲ್ಲಿ ಜಿರಳೆಗಳು ನಮ್ಮ ಜತೆ ಸಂಸಾರ ಮಾಡಿಕೊಂಡೆ ಇರುತ್ತವೆ. ಯಾವುದನ್ನು ತಂದು ಹಿಟ್ ಮಾಡಿದರೂ ಸಂಪೂರ್ಣವಾಗಿ ನಿರ್ಮೂಲನ ಮಾಡಲು ಸಾಧ್ಯವಿಲ್ಲ. ಪುಸ್ತಕದ ರಾಶಿ, ಬಟ್ಟೆ ಗಂಟು ಜಿರಲೆಗಳ ನೆಚ್ಚಿನ ವಾಸಸ್ಥಾನ.[ಇಳಿವಯಸ್ಸೇ ತಲೆತಗ್ಗಿಸುತ್ತೆ ಕಬ್ಬಿನ ಜೂಸ್ ಮಾಮನ ಎದುರು]

ಹೌದು.. ಅಸಹ್ಯಕ್ಕೆ ಹೆಸರಾಗಿರುವ ಜಿರಳೆ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳನ್ನು ನಾವು ಹೇಳುತ್ತೇವೆ. ಹಾಂ.. ನೆನಪಿರಲಿ ಜಿರಳೆಗಳು ಮಾನವನ ಆರೋಗ್ಯದ ಮೇಲೆ ಬೀಳುವ ಪರಿಣಾಮವನ್ನು ಲೆಕ್ಕ ಹಾಕಲೇಬೇಕಾಗುತ್ತದೆ... ಜಿರಳೆಗಳ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳನ್ನು ನೊಡಿಕೊಂಡು ಬನ್ನಿ...

4 ಸಾವಿರ ಬಗೆಯ ಜಿರಳೆಗಲಿವೆ

4 ಸಾವಿರ ಬಗೆಯ ಜಿರಳೆಗಲಿವೆ

ಪ್ರಪಂಚದಲ್ಲಿ ಒಟ್ಟು 4 ಸಾವಿರ ಜಾತಿಯ ಜಿರಳೆಗಲಿವೆ. ಅರಣ್ಯದ ಆರೋಗ್ಯ ಕಾಪಾಡುವುದರಲ್ಲೂ ಜಿರಳೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ನಂಬಲೇಬೇಕು.

ಪರಮಾಣು ಸ್ಫೋಟ ತಡೆಯುತ್ತವೆ!

ಪರಮಾಣು ಸ್ಫೋಟ ತಡೆಯುತ್ತವೆ!

ಹೌದು ಇದನ್ನು ನಂಬಲೇಬೇಕು. ವಿಜ್ಞಾನಿಗಳು ಹೇಳುವಂತೆ ಜಿರಳೆಗಳು ಪರಮಾಣು ಸ್ಫೋಟಕ್ಕೆ ತಡೆ ಒಡ್ಡುತ್ತವೆಯಂತೆ. ರೆಡಿಯೇಶನ್ ಗೆ ತಡೆ ಒಡ್ಡುತ್ತವೆ ಎಂದು ಕೆಲ ಸಂಶೋಧನೆಗಳು ಹೇಳಿವೆ.

ಪುರಾತನ ಜೀವಿ

ಪುರಾತನ ಜೀವಿ

ಪ್ರಪಂಚದಲ್ಲಿ ಯಾವೂದಾದರೂ ಪುರಾತನ ಜೀವಿ ಇದ್ದರೆ ಅದು ಜಿರಲೆ ಮಾತ್ರ. ಜಿರಲೆಗೆ 360 ಮಿಲಿಯನ್ ವರ್ಷದ ಇರಿಹಾಸವಿದೆ. ಮಾನವನಿಗಿಂತಲೂ ಇವು ಹಿರಿಯರು!

ತಲೆ ಇಲ್ಲದೆಯೂ ಬದುಕಬಲ್ಲವು

ತಲೆ ಇಲ್ಲದೆಯೂ ಬದುಕಬಲ್ಲವು

ಜಿರಲೆಗಳು ಸಹ ಕೆಲ ಮಾನವರಂತೆ ತಲೆ ಇಲ್ಲದೆಯೇ ಬದುಕಬಲ್ಲವು! ಹೌದು ತಲೆ ಕಳೆದುಕೊಂಡ ಜಿರಲೆ ಸಹ ಕೆಲ ದಿನಗಳ ಕಾಲ ಆರಾಮವಾಗಿ ಬದುಕುತ್ತದೆ.

ಜಿರಳೆ ಸಾಕಣೆ ಮಾಡ್ತಾರೆ!

ಜಿರಳೆ ಸಾಕಣೆ ಮಾಡ್ತಾರೆ!

ಹೌದು.. ಚೀನಾದಲ್ಲಿ ಜಿರಳೆ ಸಾಕಣೆ ಒಂದು ಉದ್ಯಮ. ಔಷಧಗಳ ತಯಾರಿಕೆಯಲ್ಲೂ ಜಿರಲೆಯನ್ನು ಹೇರಳವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

 ಸಂಶೋಧನೆಯ ಭಂಡಾರ

ಸಂಶೋಧನೆಯ ಭಂಡಾರ

ವಿಜ್ಞಾನಿಗಳಿಗೆ ಜಿರಲೆಯೊಂದು ಸಂಶೋಧನೆಯ ದೊಡ್ಡ ಭಂಡಾರ. ವಿಜ್ಞಾನಿಗಳ ನಿರಂತರ ಪ್ರಯೋಗ ಮತ್ತು ಸಂಶೋಧನೆಗಳು ಜಿರಲೆ ಮೇಲೆ ನಡೆಯುತ್ತಲೇ ಇದೆ.

English summary
Scientists are mulling creating a milk protein found in cockroaches for food supplements. Don't worry, they won't extract it from the insects. Cool is generally not what cockroaches are associated with. But scientists recently found one more cool thing about the brown, smelly insect with whiskers. Here's six other cool facts about the cockroach
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X