'ಪಾಕಿಸ್ತಾನದಲ್ಲಿರುವ ಎಲ್ಲ ಉಗ್ರ ನೆಲೆಗಳನ್ನು ಧ್ವಂಸ ಮಾಡಿ'!

Written by: ಒನ್ಇಂಡಿಯಾ ಸಿಬ್ಬಂದಿ
Subscribe to Oneindia Kannada

ಬೆಂಗಳೂರು, ಜನವರಿ 07 : "ಪಾಕಿಸ್ತಾನದಲ್ಲಿರುವ ಎಲ್ಲಾ ಭಯೋತ್ಪಾದಕ ಕ್ಯಾಂಪ್ ಗಳನ್ನು ಧ್ವಂಸ ಮಾಡಿ!"

ಇದು, ಭಾರತದ ಸರಕಾರಕ್ಕೆ ಟ್ವಿಟ್ಟಗರು ವ್ಯಕ್ತಪಡಿಸಿರುವ ಅಭಿಪ್ರಾಯ. ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಪರ್ಕ ಕಡಿತಗೊಳಿಸುವುದೂ ಬೇಡ, ಬಾಲೋಚ್ ಚಳವಳಿ ಬೆಂಬಲಿಸುವುದೂ ಬೇಡ, ಪಾಕ್ ಆಕ್ರಮಿತ ಕಾಶ್ಮೀರಕ್ಕಾಗಿ ಮಾತ್ರ ಹೋರಾಡುವುದೂ ಬೇಡ, ಪಾಕಿಸ್ತಾನದಲ್ಲಿನ ಉಗ್ರರ ತಾಣಗಳನ್ನು ಸರ್ವನಾಶ ಮಾಡಿ ಸಾಕು ಎಂಬುದು ಅವರ ತಾಕೀತು.

ಟ್ವಿಟ್ಟರ್ ನಲ್ಲಿ MyVote.Today (@myvote_today) 'ಭಾರತದಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಗೆ ಭಾರತ ಸರಕಾರ/ಪ್ರಧಾನಿ ನರೇಂದ್ರ ಮೋದಿ ಯಾವ ರೀತಿಯ ಪ್ರತಿಸ್ಪಂದನೆ ವ್ಯಕ್ತಪಡಿಸಬೇಕು, ಅಭಿಪ್ರಾಯ ತಿಳಿಸಿ' ಎಂದು ಕೇಳಿದ ಪ್ರಶ್ನೆಗೆ ಟ್ವಿಟ್ಟರು ಒಕ್ಕೊರಲಿನಿಂದ ಉಗ್ರರ ನೆಲೆಗಳನ್ನೇ ನಾಶಪಡಿಸಿ ಎಂದು ಅಭಿಪ್ರಾಯ ತಿಳಿಸಿದ್ದಾರೆ. [ಮೋದಿ ವಿರುದ್ದ ವಿಪಕ್ಷಗಳ ಕೇಕೆ!]


ಈ ಮತಗಟ್ಟೆಯಲ್ಲಿ ಕೇಳಲಾದ ಪ್ರಶ್ನೆಗೆ ಆಯ್ಕೆಗಳು ಈ ರೀತಿಯಿದ್ದವು - 1) ಉಗ್ರರ ನೆಲೆಗಳ ಸರ್ವನಾಶ, 2) ಪಾಕ್ ಆಕ್ರಮಿತ ಕಾಶ್ಮೀರಕ್ಕಾಗಿ ಹೋರಾಟ, 3) ಬಾಲೋಚ್ (ಪ್ರತ್ಯೇಕತಾವಾದಿ) ಚಳವಳಿಗೆ ಬೆಂಬಲ, 4) ರಾಜತಾಂತ್ರಿಕ ಸಂಪರ್ಕ ಕಡಿತ.

ಇದಕ್ಕೆ ಶೇ.57ರಷ್ಟು ಟ್ವಿಟ್ಟಿಗರು ಉಗ್ರರ ನೆಲೆಗಳನ್ನು ಸರ್ವನಾಶ ಮಾಡಿ ಎಂದಿದ್ದರೆ, ಶೇ.14ರಷ್ಟು ಪಾಕ್ ಆಕ್ರಮಿತ ಕಾಶ್ಮೀರಕ್ಕಾಗಿ ಹೋರಾಡಿ ಎಂದಿದ್ದಾರೆ. ಬಾಲೋಚ್ ಚಳವಳಿ ಬೆಂಬಲಕ್ಕೆ ಶೇ.19ರಷ್ಟು ಮತ ಬಿದ್ದಿದ್ದರೆ, ರಾಜತಾಂತ್ರಿಕ ಸಂಪರ್ಕವನ್ನು ಕಟ್ ಮಾಡಿ ಎಂದವರು ಶೇ.10ರಷ್ಟು ಟ್ವಿಟ್ಟಗರು.

24 ಗಂಟೆಗಳಲ್ಲಿ 3,310 ಮತಗಳು ಬಿದ್ದಿದ್ದವು. ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಪಾಕಿಸ್ತಾನ ಪರ ಮೃದು ಧೋರಣೆ ತಾಳಿದವರ ಸಂಖ್ಯೆ ತೀರಾ ಕಡಿಮೆ. ಯುದ್ಧಕ್ಕೆ ಯುದ್ಧ, ಅವರ ದಾಳಿಗೆ ನಾವೂ ಪ್ರತಿದಾಳಿ ನಡೆಸಬೇಕು, ಪ್ರಧಾನಿ ನರೇಂದ್ರ ಮೋದಿ ಪಾಕ್ ಉಗ್ರರನ್ನು ಸದೆಬಡಿಯಬೇಕು ಎಂದವರೇ ಹೆಚ್ಚು. [ಹುತಾತ್ಮ ನಿರಂಜನ್ ಸ್ನೇಹಿತನ ಕೊರಳುಬ್ಬಿದ ಮಾತುಗಳು]

57% of people want Indian Government to destroy terror camps inside Pakistan

ಇದಕ್ಕೂ ಮೊದಲು MyVote.Today, ಭಾರತ-ಪಾಕಿಸ್ತಾನದ ಗಡಿಯಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಹಿಂದೆ ಯಾರ ಕೈವಾಡವಿದೆ ಎಂಬ ಪ್ರಶ್ನೆಯನ್ನು ಟ್ವಿಟ್ಟಿಗರ ಮುಂದಿಟ್ಟಿತ್ತು. ಶೇ.6ರಷ್ಟು ಪಾಕ್ ಸರಕಾರದ ಕೈವಾಡ, ಶೇ.11ರಷ್ಟು ಎಲ್ಇಟಿ, ಜೆಇಎಂ, ಜೆಡಿಯು, ಯುಜೆಸಿ ಕೈವಾಡ, ಶೇ.41ರಷ್ಟು ಪಾಕ್ ಸೇನೆಯ ಕೈವಾಡ ಮತ್ತು ಶೇ.42ರಷ್ಟು ಎಲ್ಲ ಮೂವರ ಕೈವಾಡವಿದೆ ಎಂದು ಉತ್ತರ ನೀಡಿದ್ದರು.

ನಂತರ, ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಯನ್ನು ಭಾರತ ಸರಕಾರ ಯಾವ ರೀತಿ ಧ್ವಂಸ ಮಾಡಬೇಕು ಎಂಬ ಪ್ರಶ್ನೆ ಕೇಳಿತ್ತು. ಇದೀಗ, ಪಠಾಣ್ ಕೋಟ್ ದಾಳಿಗೆ ಪ್ರತಿಯಾಗಿ ಸೂಕ್ತವಾಗಿ ಸ್ಪಂದಿಸದಿರುವುದಕ್ಕೆ ಯಾರು ಹೊಣೆ ಹೊರಬೇಕು ಎಂಬ ಪ್ರಶ್ನೆಯನ್ನು ಕೇಳಿದೆ. ಆಸಕ್ತರು ಉತ್ತರಿಸಬಹುದು. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

English summary
57% of people want Indian Government or Prime Minister Narendra Modi to destroy terror camps inside Pakistan. MyVote_Today had asked, In your opinion, how should the Government of India / PM Narendra Modi respond to Pakistan supported terrorism in India?
Please Wait while comments are loading...