ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

33 ಜನರನ್ನು ಆಪೋಶನ ತೆಗೆದುಕೊಂಡ 500, 1000 ನೋಟು!

ಐನೂರು ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಮೋದಿ ಸರಕಾರ ನಿಷೇಧಿಸಿ ಒಂದು ವಾರ ಕಳೆದರೂ, ಬ್ಯಾಂಕ್ ಮುಂದೆ ಜನಜಂಗುಳಿ ಕಮ್ಮಿಯಾಗಿಲ್ಲ. ನೋಟು ನಿಷೇಧಕ್ಕೆ ಸಂಬಂಧ ಪಟ್ಟಂತೆ ಮೃತ ಪಟ್ಟವರ ಸಂಖ್ಯೆ 33ಕ್ಕೆ ಏರಿದೆ.

|
Google Oneindia Kannada News

ನವದೆಹಲಿ, ನ 16: ಐನೂರು ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಮೋದಿ ಸರಕಾರ ನಿಷೇಧಿಸಿ ಒಂದು ವಾರ ಕಳೆದರೂ, ಬ್ಯಾಂಕ್ ಮುಂದೆ ಜನಜಂಗುಳಿ ಕಮ್ಮಿಯಾಗಿಲ್ಲ. ನೋಟು ನಿಷೇಧಕ್ಕೆ ಸಂಬಂಧ ಪಟ್ಟಂತೆ ಮೃತ ಪಟ್ಟವರ ಸಂಖ್ಯೆ 33ಕ್ಕೆ ಏರಿದೆ.

ಮಧ್ಯಪ್ರದೇಶದ ಭೋಪಾಲ್ ನಗರದ ಎಸ್ಬಿಐ ನೀಲಾಬಾದ್ ಶಾಖೆಯ ಕ್ಯಾಷಿಯರ್ ದುಡ್ಡು ಎಣಿಸಿ..ಎಣಿಸಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. (ಮೋದಿ ನಡೆಗೆ ಜೈ ಅಂದಿದ್ದಾರೆ ದೇಶದ ಶೇ 82ರಷ್ಟು ಜನ)

ಒಂದೆಡೆ ಜನರು ತಮ್ಮ ದುಡ್ಡನ್ನು ವಿನಿಮಯ ಮಾಡಿಕೊಳ್ಳಲು ಪರದಾಡುತ್ತಿದ್ದರೆ, ಪ್ರಭಾವಿಗಳು ಬ್ಯಾಂಕ್ ಅಧಿಕಾರಿಗಳ ಸಹಕಾರದಿಂದ ಲಕ್ಷ ಲಕ್ಷ ರೂಪಾಯಿ ದುಡ್ಡನ್ನು ಕೂತಲ್ಲೇ ವೈಟ್ ಮಾಡಿಕೊಳ್ಳುತ್ತಿದ್ದಾರೆ.

ನೋಟು ನಿಷೇಧಿಸುವ ಮೋದಿ ಸರಕಾರದ ನಿರ್ಧಾರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದರೂ, ಪೂರ್ವತಯಾರಿ ಇಲ್ಲದೇ ಸರಕಾರ ಈ ಮಹತ್ವದ ಕ್ರಮಕ್ಕೆ ಮುಂದಾಗಬಾರದಿತ್ತು ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ.

ನೋಟು ನಿಷೇಧ ಸಂಬಂಧ ಉತ್ತರಪ್ರದೇಶ ರಾಜ್ಯವೊಂದರಲ್ಲೇ 10 ಜನ ಸಾವನ್ನಪ್ಪಿದ್ದಾರೆ. ಇದುವರೆಗೆ 500, 1000 ನೋಟು 33 ಜನರನ್ನು ಆಪೋಶನ ತೆಗೆದುಕೊಂಡಿದೆ. ವಿವರ, ಮುಂದೆ ಓದಿ..

ಉತ್ತರಪ್ರದೇಶ

ಉತ್ತರಪ್ರದೇಶ

> 20 ಮತ್ತು 24 ವರ್ಷದ ಮಹಿಳೆಯರಿಬ್ಬರು ದುಡ್ಡು ವಿನಿಮಯ ಆಗಲಿಲ್ಲವೆಂದು ಆತ್ಮಹತ್ಯೆ.
> ಹೊಸ ನೋಟು ಇಲ್ಲದೇ ಆಸ್ಪತ್ರೆಗೆ ದುಡ್ಡು ಪಾವತಿಸಲಾಗದೇ ಮಗು ಸಾವು.
> 2.69 ಲಕ್ಷ ಹಳೇ ನೋಟು ಇಟ್ಟುಕೊಂಡಿದ್ದ ಮಹಿಳೆ ಹೃದಯಾಘಾತದಿಂದ ಸಾವು.
> ಜಮೀನು ಮಾರಿ ಬಂದ 70 ಲಕ್ಷ ರೂಪಾಯಿಯನ್ನು ವಿನಿಮಯ ಮಾಡಿಕೊಳ್ಳುವುದು ಹೇಗೆ ಎಂದು ತೋಚದೇ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವು.
> ನೂರು ರೂಪಾಯಿ ನೋಟು ಇಲ್ಲದ್ದಕ್ಕೆ ವೈದ್ಯರು ತಪಾಸಣೆ ನಡೆಸದೇ ಇದ್ದದ್ದರಿಂದ ಮಗು ಸಾವು.
> ಎರಡು ಸಾವಿರ ರೂಪಾಯಿ ನೋಟನ್ನು ಬದಲಾಯಿಸಲು ಬ್ಯಾಂಕಿಗೆ ಬಂದ ಮಹಿಳೆ ಹೃದಯಾಘಾತದಿಂದ ಸಾವು.
> ಮೋದಿ ನೋಟು ನಿಷೇಧದ ಬಗ್ಗೆ ಘೋಷಣೆ ಮಾಡುತ್ತಿದ್ದಂತೇ ವ್ಯಾಪಾರಸ್ಥರೊಬ್ಬರು ಹೃದಯಾಘಾತದಿಂದ ಸಾವು.

>ತಾಯಿ ಸಣ್ಣ ಮೊತ್ತದ ದುಡ್ಡ ನೀಡಲಿಲ್ಲವೆಂದು ಬಿಎಸ್ಎಫ್ ಯೋಧ ನೇಣಿಗೆ ಶರಣು.

>ಮೀರಟ್ ನಲ್ಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಅರವತ್ತು ವರ್ಷದ ನೌಕರರೊಬ್ಬರು ಕ್ಯೂನಲ್ಲಿ ನಿಂತಿದ್ದಾಗ ಹೃದಯಾಘಾತದಿಂದ ಸಾವು.

ಕರ್ನಾಟಕ

ಕರ್ನಾಟಕ

> ವಿನಿಮಯ ಮಾಡಿಕೊಳ್ಳಲು ಬಂದಿದ್ದ ಮಹಿಳೆ ತನ್ನಲ್ಲಿದ್ದ ಹಣ ಕಳವಾದಾಗ ನೊಂದು ಆತ್ಮಹತ್ಯೆಗೆ ಶರಣು.(ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ)
> 96 ವರ್ಷದ ವೃದ್ದರೂಬ್ಬರು ಕ್ಯೂನಲ್ಲಿ ನಿಂತಿದ್ದಾಗ ಸಾವು.(ಉಡುಪಿಯಲ್ಲಿ ನಡೆದ ಘಟನೆ)
> 45ವರ್ಷದ ರೈತ ತನ್ನಲ್ಲಿದ್ದ ಮೂರು ಸಾವಿರ ಹಣವನ್ನು ಮೂರು ಬಾರಿ ಹಣ ವಿನಿಮಯ ಮಾಡಿಕೊಳ್ಳಲು ಬ್ಯಾಂಕಿಗೆ ಕಳುಹಿಸಿದರೂ ಆಗದಿದ್ದಾಗ ಆತ್ಮಹತ್ಯೆಗೆ ಶರಣಾದ ಘಟನೆ ಛತ್ತೀಸಗಢದಲ್ಲಿ ವರದಿಯಾಗಿದೆ.

ನೋಟು ತಂದ ಆವಾಂತರ -ಗುಜರಾತ್

ನೋಟು ತಂದ ಆವಾಂತರ -ಗುಜರಾತ್

> ಹಳೇ ನೋಟು ಇದ್ದರೂ, ಹೊಸ ನೋಟು ಇಲ್ಲದೇ ರೇಶನ್ ತರಲು ದುಡ್ಡಿಲ್ಲದೇ ಐವತ್ತು ವರ್ಷದ ಮಹಿಳೆ ಆತ್ಮಹತ್ಯೆ
> 69ವರ್ಷದ ವ್ಯಕ್ತಿ ಕ್ಯೂನಲ್ಲಿ ನಿಂತಿದ್ದಾಗ ಸಾವು.
> 47 ವರ್ಷದ ರೈತ ಕ್ಯೂನಲ್ಲಿ ನಿಂತಿದ್ದಾಗ ಸಾವು.

ಮಧ್ಯಪ್ರದೇಶ, ಮುಂಬೈ

ಮಧ್ಯಪ್ರದೇಶ, ಮುಂಬೈ

> 69ವರ್ಷದ ವ್ಯಕ್ತಿ ವಿನಯ್ ಕುಮಾರ್ ಕ್ಯೂನಲ್ಲಿ ನಿಂತಿದ್ದಾಗ ಹೃದಯಾಘಾತದಿಂದ ಸಾವು (ಮಧ್ಯಪ್ರದೇಶ)
> ಭೋಪಾಲ್ ನಲ್ಲಿ ಸ್ಟೇಟ್ ಬ್ಯಾಂಕ್ ಉದ್ಯೋಗಿ ದುಡ್ಡು ಎಣಿಸುತ್ತಾ ಹೃದಯಾಘಾತದಿಂದ ಸಾವು (ಮಧ್ಯಪ್ರದೇಶ)
> ಹೊಸ ನೋಟು ಇಲ್ಲದ ಕಾರಣ ಆಸ್ಪತ್ರೆಯ ಒಳಗೆ ಬಿಡದ ಸಿಬ್ಬಂದಿ, ನವಜಾತ ಶಿಶು ಸಾವು (ಮುಂಬೈ)
> 72ವರ್ಷದ ವ್ಯಕ್ತಿ ವಿನಯ್ ಕುಮಾರ್ ಕ್ಯೂನಲ್ಲಿ ನಿಂತಿದ್ದಾಗ ಹೃದಯಾಘಾತದಿಂದ ಸಾವು (ಮುಂಬೈ)

ದೇಶದ ವಿವಿದೆಡೆ 33 ಸಾವು

ದೇಶದ ವಿವಿದೆಡೆ 33 ಸಾವು

> ಹೊಸ ನೋಟು ಇಲ್ಲದೇ ಔಷಧಿ ನೀಡದ ಮೆಡಿಕಲ್ ಸ್ಟೋರ್ ಸಿಬ್ಬಂದಿ, ಹದಿನೆಂಟು ತಿಂಗಳ ಮಗು ಸಾವು (ಆಂಧ್ರ)
> ಹೊಸ ನೋಟು ಇಲ್ಲದೇ ಅಂಬುಲೆನ್ಸ್ ಹತ್ತಲು ಬಿಡದ ಸಿಬ್ಬಂದಿ, ನವಜಾತ ಶಿಶು ಸಾವು (ರಾಜಸ್ಥಾನ)
> ಮೋದಿ ಘೋಷಣೆಯ ನಂತರ 54 ಲಕ್ಷ ಹೊಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು ( ತೆಲಂಗಾಣ)
> ಮಗಳ ಮದುವೆಗೆ ವರದಕ್ಷಿಣೆಗಾಗಿ 35ಸಾವಿರ ಇಟ್ಟುಕೊಂಡಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು (ಬಿಹಾರ)
> ಹಣ ವಿನಿಮಯ ಮಾಡಿಕೊಳ್ಳಲು ಬಂದಿದ್ದ 45 ವರ್ಷದ ವ್ಯಕ್ತಿ ಎರಡನೇ ಮಹಡಿಯಿಂದ ಆಯತಪ್ಪಿ ಬಿದ್ದು ಸಾವು (ಕೇರಳ)
> 75 ವರ್ಷದ ವ್ಯಕ್ತಿ ಕ್ಯೂನಲ್ಲಿ ನಿಂತಿದ್ದಾಗ ಹೃದಯಾಘಾತದಿಂದ ಸಾವು (ಕೇರಳ)

> ಪಂಜಾಬ್ ನಲ್ಲಿ ಮದುವೆಗಾಗಿ ಕೂಡಿಟ್ಟಿದ್ದ ಹಣವನ್ನು ತೆಗೆದುಕೊಳ್ಳಲು ಯಾರೂ ಮುಂದೆ ಬರದೇ ಇದ್ದಾಗ ಹೃದಯಾಘಾತವಾಗಿ ಸಾವು.
> ಒರಿಸ್ಸಾದಲ್ಲಿ ಐನೂರು ರೂಪಾಯಿಗೆ ಚಿಲ್ಲರೆ ಸರಿಯಾದ ಸಮಯದಲ್ಲಿ ಸಿಗದೇ ಇದ್ದಾಗ ಎರಡು ವರ್ಷದ ಮಗು ಸಾವು.
> ಹೌರಾದಲ್ಲಿ ನೋಟು ಬದಲಾವಣೆ ಮಾಡದೇ ಬರೀಗೈಯಲ್ಲಿ ವಾಪಸ್ ಬಂದಿದ್ದಕ್ಕೆ ಗಂಡನಿಂದ ಹೆಂಡತಿಯ ಕೊಲೆ.
> ಮೂರು ದಿನದಿಂದ ಕರೆನ್ಸಿ ಬದಲಾಯಿಸಲು ಆಗಲಿಲ್ಲವೆಂದು ಬೇಸತ್ತು ಪೂರ್ವ ದೆಹಲಿಯಲ್ಲಿ ವ್ಯಕ್ತಿ ಆತ್ಮಹತ್ಯೆ.
> ಔರಂಗಾಬಾದ್ ನಲ್ಲಿ ಬ್ಯಾಂಕ್ ಕ್ಯೂ ನಲ್ಲಿ ನಿಂತಿದ್ದಾಗ ಹೃದಯಾಘಾತದಿಂದ ಸಾವು.
> ಮಧ್ಯಪ್ರದೇಶದ ಚತ್ತಾರಪುರದಲ್ಲಿ ರಸಗೊಬ್ಬರ ಕೊಳ್ಳಲು ಐನೂರು ರೂಪಾಯಿ ನೋಟು ತೆಗೆದುಕೊಳ್ಳಲು ಅಂಗಡಿಯವನು ನಿರಾಕರಿಸಿದಾಗ ರೈತನೊಬ್ಬ ಆತ್ಮಹತ್ಯೆ

English summary
The Modi government’s decision to launch 'surgical strike' on ₹500 and ₹1,000 hailed as revolutionary step to clean black money. But, the chaos and confusion, shock, despair, frustration, has claimed 33 lives across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X