ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಪತ್ನಿಯ ಮೊಬೈಲ್ ನೋಡಿದ್ದಕ್ಕೆ ಪತಿಗೆ 50,000 ರೂ. ದಂಡ!

ಪರಿತ್ಯಕ್ತ ಪತ್ನಿಯ ಅನುಮತಿಯಿಲ್ಲದೆ ಆಕೆಯ ಮೊಬೈಲ್ ಫೋನ್ ಕದ್ದು ನೋಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ರೂ. 50,000 ದಂಡ ವಿಧಿಸಲಾಗಿದೆ!

By ವಿಕಾಸ್ ನಂಜಪ್ಪ
|
Google Oneindia Kannada News

ಪಶ್ಚಿಮ ಬಂಗಾಳ, ಏಪ್ರಿಲ್ 22: ಪರಿತ್ಯಕ್ತ ಪತ್ನಿಯ ಅನುಮತಿಯಿಲ್ಲದೆ ಆಕೆಯ ಮೊಬೈಲ್ ಫೋನ್ ಕದ್ದು ನೋಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ರೂ. 50,000 ದಂಡ ವಿಧಿಸಲಾಗಿದೆ. ಪಶ್ಚಿಮ ಬಂಗಾಳದ ಸೈಬರ್ ನ್ಯಾಯಾಧೀಶರೊಬ್ಬರು ಈ ತೀರ್ಪು ನೀಡಿದ್ದಾರೆ.

2013 ರಲ್ಲಿ ಮದುವೆಯಾದ ದಂಪತಿ ಒಂದೇ ವರ್ಷದಲ್ಲಿ, ಅಂದರೆ 2014 ರಲ್ಲೇ ವಿಚ್ಛೇದನ ಪಡೆದಿದ್ದರು.[ಅಶ್ಲೀಲ ವೆಬ್ ಸೈಟ್ ನಲ್ಲಿ ಮೈಸೂರು ವಿದ್ಯಾರ್ಥಿನಿಯರ ಚಿತ್ರ!]

50,000 fine for spying his ex-wife's phone!

ಈ ಸಂದರ್ಭದಲ್ಲಿ ಹೆಂಡತಿಗೆ ತಿಳಿಯದಂತೆ ಆಕೆಯ ಮೊಬೈಲ್ ಫೋನಿನಲ್ಲಿ ಸಾಫ್ಟ್ ವೇರ್ ವೊಂದನ್ನು ಇನ್ ಸ್ಟಾಲ್ ಮಾಡಿದ್ದ ಪತಿ, ಆಕೆಗೆ ಯಾರ್ಯೃ ಫೋನ್ ಕರೆ ಬರುತ್ತದೆ, ಆಕೆ ಯಾರ್ಯಾರಿಗೆ ಫೋನ್ ಮಾಡುತ್ತಾಳೆ, ಜೊತೆಗೆ ಮೆಸೇಜ್ ಗಳ ವಿವರವನ್ನು ಸಂಗ್ರಹಿಸುತ್ತಿದ್ದ. ಮೊದಲಿನಿಂದಲೂ ಪತ್ನಿಯ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದ ಪತಿ ವಿಚ್ಛೇದನದ ನಂತರವೂ ಆಕೆಯ ಖಾಸಗೀತನದ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದ.[ಪತ್ನಿ ಜತೆಗಿನ ಸರಸ ಆನ್ ಲೈನ್ ನಲ್ಲಿ LIVE ನೀಡಿದ್ದ ಪತಿ ಬಂಧನ]

ಈ ವಿಷಯ ತಿಳಿಯುತ್ತಿದ್ದಂತೆಯೇ ಆತನ ಮಾಜಿ ಪತ್ನಿ ಆತನ ವಿರುದ್ಧ ದೂರು ದಾಖಲಿಸಿದ್ದರು. ದೂರಿನನ್ವಯ ವಿಚಾರಣೆ ನಡೆಸಿದ ಪಶ್ಚಿಮ ಬಂಗಾಳದ ಸೈಬರ್ ಅಪರಾಧ ನ್ಯಾಯಾಧೀಶರೊಬ್ಬರು ಮಾಹಿತಿ ತಂತ್ರಜ್ಞಾನ ಕಾಯಿದೆ- 200೦ ದ 43(a), (b), 66(C) ಮತ್ತು 72 ಅಡಿಯಲ್ಲಿ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಿದ್ದಾರೆ.

English summary
He spied on his ex-wive's phone and for this he was fined Rs 50,000. The cyber adjudicator at West Bengal ordered the man to pay the fine for snooping into his estranged wife's mobile calls and messages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X