ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯ ಬಾಯಿಬಿಡಿಸಲು ಹುಡುಗರ ಕೈಗಳನ್ನು ಕುದಿಯುವ ಎಣ್ಣೆಯಲ್ಲಿ ಅದ್ದಿಸಿದ ದುಷ್ಟ

ಸ್ಥಳೀಯ ಮೂಢ ನಂಬಿಕೆಗಳಂತೆ ನಡೆದುಕೊಂಡ ನರಸಿಂಗಪಾಡಾ ಹಳ್ಳಿಯ ಛಗ್ಗನ್ ಎಂಬ ವ್ಯಕ್ತಿ; ತನ್ನ ಮಗನ ಮೊಬೈಲ್ ಕದ್ದವರನ್ನು ಪತ್ತೆ ಮಾಡಲು ರಾಕ್ಷಸನಂತೆ ನಡೆದುಕೊಂಡ ದುರುಳ.

|
Google Oneindia Kannada News

ರತ್ನಪುರಿ (ಮಧ್ಯಪ್ರದೇಶ), ಫೆಬ್ರವರಿ 22: ತನ್ನ ಮಗನ ಮೊಬೈಲ್ ಕದ್ದಿದ್ದಾರೆಂದು ಅನುಮಾನಿಸಿದ ವ್ಯಕ್ತಿಯೊಬ್ಬ 8ರಿಂದ 9 ವರ್ಷದೊಳಗಿನ ಐವರು ಹುಡುಗರ ಕೈಗಳನ್ನು ಕುದಿಯುವ ಎಣ್ಣೆಯಲ್ಲಿ ಅದ್ದಿಸಿದ್ದಾನೆ.

ಮಧ್ಯಪ್ರದೇಶದ ರತ್ನಪುರಿಗೆ ಸೇರಿದ ನರಸಿಂಗಪಾಡಾ ಎಂಬ ಹಳ್ಳಿಯಲ್ಲಿ ವಾಸಿಸುತ್ತಿರುವ ಛಗ್ಗನ್ ಲಾಲ್ ವಾರಿಯಾ ಎಂಬ ವ್ಯಕ್ತಿ ತನ್ನ 13 ವರ್ಷದ ಮಗನಿಗೆ ಮೊಬೈಲ್ ಕೊಡಿಸಿದ್ದ. ಆದರೆ, ಆ ಮೊಬೈಲ್ ಇತ್ತೀಚೆಗೆ ಕಳುವಾಗಿತ್ತು.['Panic button' ಉಳ್ಳ ಭಾರತದ ಮೊದಲ ಸ್ಮಾರ್ಟ್ ಫೋನ್ ಬಿಡುಗಡೆ]

5 Boys Forced To Dip Hands In Hot Oil To Prove Innocence In Madhya Pradesh

ತನ್ನ ಮಗನ ಮೊಬೈಲ್ ಕಳ್ಳತನದ ಹಿಂದೆ ಈ ಐವರು ಹುಡುಗರ ಕೈವಾಡವಿದೆಯೆಂದು ಅನುಮಾನಿಸಿದ ಛಗ್ಗನ್, ಆ ಐವರನ್ನೂ ಮಂಗಳವಾರ ಸಂಜೆ ತನ್ನ ಮನೆಗೆ ಕರೆದು ವಿಚಾರಿಸಿದ್ದಾನೆ. ಎಷ್ಟೇ ಕೇಳಿದರೂ ಆ ಹುಡುಗರು ತಾವು ಕದ್ದಿಲ್ಲವೆಂದು ಹೇಳಿರುವುದು ಆತನಿಗೆ ಕೋಪ ತರಿಸಿದೆ.

ಇದರಿಂದ ಸಿಟ್ಟಿಗೆದ್ದ ಆತ, ನೀವು ನಿರಪರಾಧಿಗಳೆಂದು ಸಾಬೀತುಪಡಿಸಬೇಕಾದಲ್ಲಿ, ಕುದಿಯುವ ಎಣ್ಣೆಯಲ್ಲಿ ಕೈಯ್ಯನ್ನು ಅದ್ದಬೇಕೆಂದು ಆದೇಶಿಸಿದ್ದಾನೆ.[ಆ್ಯಂಡ್ರಾಯ್ಡ್ ಫೋನಿನಲ್ಲಿ ಅಶ್ಲೀಲ ವೆಬ್ ಸೈಟ್ ನೋಡುವವರೇ ಎಚ್ಚರ !!!]

ಯಾರು ಸತ್ಯ ಹೇಳುತ್ತಾರೋ ಅವರು ಕುದಿಯುವ ಎಣ್ಣೆಯಲ್ಲಿ ಕೈ ಅದ್ದಿದರೂ ಅವರಿಗೆ ಏನೂ ಆಗದು ಎಂಬ ನಂಬಿಕೆ ತನ್ನ ಹಳ್ಳಿಯಲ್ಲಿ ಚಾಲ್ತಿಯಲ್ಲಿರುವುದರಿಂದ ಛಗ್ಗನ್ ಅವರಿಗೆ ಈ ಶಿಕ್ಷೆಯನ್ನು ಬಲವಂತವಾಗಿ ವಿಧಿಸಿದ್ದಾನೆ. ಹುಡುಗರನ್ನು ಬೆದರಿಸಿ ಬಲವಂತವಾಗಿ ಅವರ ಕೈಗಳನ್ನು ಎಣ್ಣೆಯಲ್ಲಿಟ್ಟಿರುವುದರಿಂದ ಅವರ ಅಂಗೈಗಳು ಬೆಂದು ಹೋಗಿವೆ.

ಕಿಟಾರನೆ ಕಿರುಚಿಕೊಂಡ ಆ ಹುಡುಗರ ನೆರವಿಗೆ ಬಂದ ಅಕ್ಕಮಕ್ಕದ ಮನೆಯ ಜನರು, ಛಗ್ಗನ್ ನನ್ನು ಬೈದು ಹುಡುಗರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯಕ್ಕೆ ರತ್ನಪುರಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಛಗ್ಗನ್ ನನ್ನು ಬಂಧಿಸಿದ್ದಾರೆ.

English summary
In a shocking incident, five boys were allegedly forced by a man to dip their hands in boiling oil to prove they had not stolen his son's mobile phone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X