ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳವಾರ ಮಧ್ಯಾಹ್ನ ನಡುಗಿದ ಈಶಾನ್ಯ ಭಾರತ

|
Google Oneindia Kannada News

ನವದೆಹಲಿ, ಏಪ್ರಿಲ್, 5: ಈಶಾನ್ಯ ರಾಜ್ಯಗಳಲ್ಲಿ ಭೂಕಂಪನವಾಗಿದೆ. ಮೇಘಾಲಯ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಂಗಳವಾರ ಮಧ್ಯಾಹ್ನ ಭೂಕಂಪನದ ಅನುಭವವಾಗಿದೆ.

ರಿಕ್ಟರ್‌ ಮಾಪಕದಲ್ಲಿ 5.4 ರಷ್ಟು ತೀವ್ರತೆ ದಾಖಲಾಗಿದ್ದು ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಮೇಘಾಲಯದ ಪರ್ವತ ಪ್ರದೇಶದಲ್ಲಿ ಭೂಕಂಪನದ ಕೇಂದ್ರ ಕಂಡುಬಂದಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ.[ಮಹಿಳೆಯರು ಜೀನ್ಸ್ ಧರಿಸುವುದು ಭೂಕಂಪಕ್ಕೆ ಕಾರಣ!]

earthquake

ನಾಸಾ-ಇಸ್ರೋ ಜಂಟಿ ಕಾರ್ಯಾಚರಣೆ
ಅಮೆರಿಕ ಬಾಹ್ಯಾಕಾಶ ಸಂಸ್ಥೆ ಮತ್ತು ನಾಸಾ ಭೂಕಂಪನದ ಬಗ್ಗೆ ಅಧ್ಯಯನ ನಡೆಸಲು ಒಟ್ಟಾಗಿ ಕೈ ಜೋಡಿಸಿವೆ.

ನಿಸಾರ್ ಎಂಬ ರಾಡಾರ್ ಮೂಲಕ ಭೂಕಂಪ, ಸುನಾಮಿ ಸೇರಿದಂತೆ ವಿವಿಧ ನೈಸರ್ಗಿಕ ವಿಕೋಪಗಳ ಅಧ್ಯಯನಕ್ಕೆ ಮುಂದಾಗಿವೆ. 2020-21 ರ ವೇಳೆಗೆ ಇದಕ್ಕೆ ಸಂಬಂಧಿಸಿದ ಉಪಗ್ರಹ ಉಡಾವಣೆ ಮಾಡಲು ತಾರ್ಕಿಕ ಒಪ್ಪಿಗೆ ಸಿಕ್ಕಿದೆ.[ಅಬ್ಬಬ್ಬಾ ಇಸ್ರೋ, ಒಂದೇ ಬಾರಿಗೆ 22 ಉಪಗ್ರಹ ಉಡಾವಣೆ]

ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್, ಉಪಗ್ರಹ ಕೇವಲ ನಿಸರ್ಗದ ವಿಕೋಪಗಳ ಮಾಹಿತಿ ನೀಡುವುದಲ್ಲದೇ ಕೃಷಿ ಚಟುವಟಿಕೆಗಳ ಅಭಿವೃದ್ಧಿಗೂ ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಎಲ್ ಮತ್ತು ಎಸ್ ಬ್ಯಾಂಡ್ ಗಳ ಮುಖೇನ ಕಾರ್ಯ ನಿರ್ವಹಿಸಲಿದ್ದು ನಾಸಾ ನೆರವಿನಲ್ಲಿ ಇಸ್ರೋ ಉಪಗ್ರಹ ಉಡಾವಣೆ ಮಾಡಲಿದೆ ಎಂದು ತಿಳಿಸಿದ್ದಾರೆ.

English summary
An earthquake of moderate intensity rocked parts of Meghalaya, Assam and other North Eastern states on Tuesday, April 5. The epicentre of the quake, measuring 5.4 on the Richter scale, was located in the East Garo Hills in Meghalaya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X