ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಮ್ಲಾದಲ್ಲಿ ನದಿಗೆ ಬಸ್ ಬಿದ್ದು 44 ಮಂದಿ ಸಾವು

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನದಿಗೆ ಬುಧವಾರ ಬೆಳಗ್ಗೆ ಬಸ್ ಉರುಳಿ ನಲವತ್ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲಿಸರು ತಿಳಿಸಿದ್ದಾರೆ

|
Google Oneindia Kannada News

ಶಿಮ್ಲಾ, ಏಪ್ರಿಲ್ 19: ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ಬುಧವಾರ ನದಿಗೆ ಖಾಸಗಿ ಬಸ್ ಬಿದ್ದು 44 ಮಂದಿ ಮೃತಪಟ್ಟಿದ್ದಾರೆ. ಸಿರ್ಮೌರ್ ಜಿಲ್ಲೆಯ ಗಡಿ ಪ್ರದೇಶದ ನರ್ವಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಸ್ ನಲ್ಲಿ 56 ಮಂದಿ ಪ್ರಯಾಣಿಕರಿದ್ದರು. ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗ್ಗೆ ವೇಳೆ ಅಪಘಾತ ಸಂಭವಿಸಿದೆ. ಉತ್ತರಾಖಂಡದ ಟಿಯುನಿ ಕಡೆಗೆ ಬಸ್ ತೆರಳುತ್ತಿತ್ತು. ಮಾಹಿತಿ ರವಾನೆ ಆಗುತ್ತಿದ್ದಂತೆ ಸಿರ್ಮೌರ್ ಪೊಲೀಸ್ ತಂಡ ರಕ್ಷಣಾ ಕಾರ್ಯದ ಸಲುವಾಗಿ ಸ್ಥಳಕ್ಕೆ ತೆರಳಿತು. ಶಿಮ್ಲಾ ಎಸ್ ಪಿ ಡಿಡಬ್ಲ್ಯು ನೇಗಿ ಮಾತನಾಡಿ, ಬಸ್ಸಿನಲ್ಲಿ 56 ಮಂದಿ ಪ್ರಯಾಣಿಕರಿದ್ದರು. ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.[ಸಾಗರದಲ್ಲಿ ಭೀಕರ ಅಪಘಾತ: ಐವರ ದುರ್ಮರಣ]

Bus Accident

ಎರಡು ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿವೆ. ಅದರಲ್ಲಿ ಇಪ್ಪತ್ತು ಮಂದಿಯವರೆಗೆ ಇದ್ದಾರೆ. ಎಲ್ಲ ಅಗತ್ಯ ಸಲಕರಣೆಯೊಂದಿಗೆ ರಕ್ಷಣಾ ಕಾರ್ಯದಲ್ಲಿ ತಂಡಗಳು ತೊಡಗಿಕೊಂಡಿವೆ. ಅಗತ್ಯ ಕಂಡುಬಂದಲ್ಲಿ ಇನ್ನೂ ಹೆಚ್ಚಿನ ಮಂದಿಯನ್ನು ಕರೆಸಲಾಗುವುದು ಎಂದು ಎಸ್ ಡಿಆರ್ ಎಫ್ ಕಮ್ಯಾಂಡೆಂಟ್ ಜಗತ್ ರಾಮ್ ಜೋಶಿ ತಿಳಿಸಿದ್ದಾರೆ.

English summary
In a major accident, 44 people were killed when a private bus rolled off the road and fell into Tons river in remote Nerwa area of Shimla district along the border of Sirmaur district in Himachal Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X