ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

400 ಪಾಕ್ ಹಿಂದೂಗಳಿಂದ ಭಾರತೀಯ ಪೌರತ್ವಕ್ಕೆ ಅರ್ಜಿ

By Kiran B Hegde
|
Google Oneindia Kannada News

ಅಹ್ಮದಾಬಾದ್, ಜ. 30: ಪಾಕಿಸ್ತಾನದಲ್ಲಿ ಇಸ್ಲಾಂಯೇತರ ಧರ್ಮೀಯರು ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಹಲವು ಹಿಂದೂ ಹಾಗೂ ಸಿಖ್ ಯುವತಿಯರನ್ನು ಅಪಹರಿಸಿ ಮತಾಂತರ ಮಾಡಲಾಗಿದೆ. ವಿರೋಧಿಸಿದವರ ತಲೆ ಕತ್ತರಿಸಲಾಗುತ್ತಿದೆ.

ಇದರಿಂದ ಬೆದರಿ ಭಾರತಕ್ಕೆ ಓಡಿಬಂದು ಗುಜರಾತ್‌ನಲ್ಲಿ ನೆಲೆಸಿರುವ ಪಾಕಿಸ್ತಾನೀಯರಿಗೆ ಭಾರತೀಯ ಪೌರತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಗುಜರಾತ್‌ನ ಅಹಮದಾಬಾದ್‌ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಏರ್ಪಡಿಸಿದ್ದ ಎರಡು ದಿನಗಳ ಶಿಬಿರದಲ್ಲಿ 400ಕ್ಕೂ ಹೆಚ್ಚು ಪಾಕಿಸ್ತಾನ ಮೂಲದ ಹಿಂದೂ ಕುಟುಂಬಗಳು ಭಾರತೀಯ ಪೌರತ್ವ ಪಡೆಯಲು ಮುಂದಾಗಿವೆ. [ಕಾಶ್ಮೀರಿ ನಿರಾಶ್ರಿತರ ಸಮಸ್ಯೆ ಬಗೆಹರಿಸ್ತೇವೆ]

hindu

28 ಜನರಿಂದ ಅರ್ಜಿ : "ಭಾರತದಲ್ಲಿ ಕನಿಷ್ಠ ಏಳು ವರ್ಷಗಳಿಂದ ಬದುಕುತ್ತಿರುವವರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಭಾಗವಹಿಸಿದ್ದ ಕುಟುಂಬಗಳಲ್ಲಿ 28 ಅರ್ಹರು ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ" ಎಂದು ಜಿಲ್ಲಾಧಿಕಾರಿ ಎಂ.ಎಸ್. ಗೋಹಿಲ್ ತಿಳಿಸಿದ್ದಾರೆ. [ಮುಸ್ಲಿಂ ಜನಸಂಖ್ಯೆ ಶೇ. 24 ಹೆಚ್ಚಳ]

ಪಾಕಿಸ್ತಾನದ ಕರಾಚಿಯಿಂದ ಆರು ವರ್ಷಗಳ ಹಿಂದೆ ಗುಜರಾತ್‌ಗೆ ಓಡಿಬಂದಿರುವ ವೈದ್ಯ ರಾಜ್‌ಕುಮಾರ್ ಜೆರ್ಸಾಣಿ ಕೂಡ ಅರ್ಜಿ ಸಲ್ಲಿಸಿರುವವರಲ್ಲಿ ಓರ್ವ. "ನನಗೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕೆಂಬ ಆಸೆಯಿದೆ. ಆದರೆ, ಭಾರತೀಯ ಸರ್ಕಾರ ನನಗೆ ಆರು ವರ್ಷಗಳ ನಂತರವೂ ಭಾರತೀಯ ಪೌರತ್ವ ನೀಡಿಲ್ಲ. ಆದ್ದರಿಂದ ಭಾರತದಲ್ಲಿ ಸಂಪಾದಿಸುವುದು ಹಾಗೂ ಸೇವೆ ಸಲ್ಲಿಸುವುದು ಸಾಧ್ಯವಾಗುತ್ತಿಲ್ಲ" ಎಂದು ತಿಳಿಸಿದ್ದಾರೆ. [ಶ್ರೀಲಂಕಾ ಪಡೆಗೆ ತಮಿಳರು]

ಶಿಬಿರದಲ್ಲಿ ಭಾಗವಹಿಸಿದ್ದವರಲ್ಲಿ ಎರಡು ಮುಸ್ಲಿಂ ಕುಟುಂಬಗಳೂ ಇದ್ದವು. ಅವರೂ ಭಾರತೀಯ ಪೌರತ್ವ ಪಡೆಯಲು ಆಸಕ್ತಿ ತೋರಿದ್ದಾರೆ.

English summary
Indian Union Ministry of Home Affairs had organized a two-day camp in Ahmedabad for Pakistani families for those seeking Indian citizenship. More than 400 Hindu families have attended the camp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X