ಪೊಲೀಸಪ್ಪನ ಹೊಟ್ಟೆಯಿಂದ 40 ಚಾಕು ಹೊರತೆಗೆದ ವೈದ್ಯರು!

Written By:
Subscribe to Oneindia Kannada

ನವದೆಹಲಿ, ಆಗಸ್ಟ್, 24: ಶಸ್ತ್ರಚಿಕಿತ್ಸೆ ಮಾಡಿ ವೈದ್ಯರು ಹೊಟ್ಟೆಯಿಂದ ಒಂದು ಕೆಜಿ ಗಾತ್ರದ ಗಡ್ಡೆ ಹೊರಕ್ಕೆ ತೆಗೆದರು ಎಂಬ ಸುದ್ದಿ ಸಾಮಾನ್ಯವಾಗಿ ಹೋಗಿದೆ. ಆದರೆ ಇಲ್ಲಿಯ ಪ್ರಕರಣ ಕೊಂಚ ವಿಚಿತ್ರ.

ಶಸ್ತ್ರಚಿಕಿತ್ಸೆ ಮಾಡಿದ ಪಂಜಾಬ್ ನ ವೈದ್ಯರು ಪೊಲೀಸ್ ಕಾನ್ ಸ್ಟೇಬಲ್ ಹೊಟ್ಟೆಯಲ್ಲಿದ್ದ ಬರೋಬ್ಬರಿ 40 ಚಾಕುಗಳನ್ನು ಹೊರಕ್ಕೆ ತೆಗೆದಿದ್ದಾರೆ. ಅಮೃತಸರದ ಪೊಲೀಸ್‌ ಸುರ್ಜೀತ್‌ ಸಿಂಗ್‌ ಹೊಟ್ಟೆಯಲ್ಲಿ 40 ಚಾಕುಗಳು ಸಿಕ್ಕಿದ್ದು ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ. ನಿರಂತರ 5 ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿ 40 ಚಾಕು ಹೊರಕ್ಕೆ ತೆಗೆಯಲಾಗಿದೆ.[ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿ ಟವಲ್ ಬಿಟ್ಟ ವೈದ್ಯರು]

police

ಚಾಕು ಹೊಟ್ಟೆ ಸೇರಿದ್ದು ಹೇಗೆ?
ಪೇದೆ ಸುರ್ಜೀತ್‌ಗೆ ಹಲವು ವರ್ಷಗಳಿಂದ ಚಾಕು ತನ್ನುವ ಚಟ ಇದೆ. ಇವರು 2 ತಿಂಗಳಲ್ಲಿ ಇವರು ಸುಮಾರು 28 ಚಾಕುಗಳು ತಿಂದಿದ್ದರು. ಈ ಮೊದಲು ತಿಂದಿದ್ದ ಎಲ್ಲಾ ಚಾಕುಗಳನ್ನು ಸೇರಿ ಒಟ್ಟು 40 ಚಾಕುಗಳು ಆತನ ಹೊಟ್ಟೆಯೊಳಗೆ ಬೆಚ್ಚಗೆ ಮಲಗಿದ್ದವು. ಈ ರೀತಿ ಕಬ್ಬಿಣ ತಿನ್ನುವ ಮಾನಸಿಕ ಕಾಯಿಲೆ ಪೇದೆಗೆ ಇರುವುದು ಗೊತ್ತಾದಾಗ ವೈದ್ಯರು ಅದಕ್ಕೂ ಚಿಕಿತ್ಸೆ ಹುಡುಕುಗವ ಯತ್ನ ಮಾಡಿದ್ದಾರೆ.[ಅಮಲುದಾರ ಪೊಲೀಸಪ್ಪನ ತೂರಾಟ ನೋಡಿ, ಮಜಾ ಮಾಡಿ]

police

ತೀವ್ರ ಹೊಟ್ಟೆ ನೋವಿನಿಂದ ಬಳಲಿದ ಸುರ್ಜೀತ್‌ ಆಸ್ಪತ್ರೆಗೆ ಬಂದಿದ್ದರು. ಆಗ ಅಲ್ಟ್ರಾಸೌಂಡ್‌ ಸ್ಕಾನ್‌ ಮಾಡಿದಾಗ ಹೊಟ್ಟೆಯಲ್ಲಿ ಲೋಹ ಇರುವುದು ಪತ್ತೆಯಾಯಿತು. ಒಟ್ಟು ಲೆಕ್ಕ ಹೇಳಬೇಕು ಎಂದರೆ 42 ವರ್ಷದ ಸುರ್ಜೀತ್‌ ಸಿಂಗ್‌ ಹೊಟ್ಟೆಯಲ್ಲಿ 40 ಚಾಕುಗಳು ಪತ್ತೆಯಾದವು.

English summary
In an unusual case, as many as 40 knives were surgically removed from the stomach of a policeman in Amritsar who claimed that he used to feel an "urge" to eat them. Doctors carried out a five-hour long surgery on Surjeet Singh (40), who is employed with Punjab Police and is posted at Tarn Taran district, at a hospital.
Please Wait while comments are loading...