ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮಾರಿ ಅಧಿಕಾರಿಗಳ ದೆವ್ವ ಬಿಡಿಸುತ್ತಿರುವ ಸಿಎಂ ಯೋಗಿ

ಸತತವಾಗಿ ದುಡಿಯುವ ಯೋಗಿಯ ಸ್ಪೀಡ್ ಗೆ ಅಲ್ಲಿನ ಸರ್ಕಾರಿ ಸಿಬ್ಬಂದಿ ಹೊಂದಾಣಿಕೆ ಮಾಡಿಕೊಳ್ಳಲು ಏದುಸಿರು ಬಿಡುವಂತಾಗಿದೆಯಂತೆ.

By ವಿಕಾಸ್ ನಂಜಪ್ಪ
|
Google Oneindia Kannada News

ಲಕ್ನೋ, ಏಪ್ರಿಲ್ 8: ನಿದ್ರೆ ಕೇವಲ 4 ಗಂಟೆ, ದುಡಿಮೆ ಸತತ 20 ಗಂಟೆ! ಇದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಿನಚರಿಯ ಒನ್ ಲೈನ್ ಒಕ್ಕಣೆ.

ಆದರೆ, ವಿಚಾರ ಏನಪ್ಪಾ ಅಂದ್ರೆ, ಹೀಗೆ ಸತತವಾಗಿ ದುಡಿಯುವ ಯೋಗಿಯ ಸ್ಪೀಡ್ ಗೆ ಅಲ್ಲಿನ ಸರ್ಕಾರಿ ಸಿಬ್ಬಂದಿ ಹೊಂದಾಣಿಕೆ ಮಾಡಿಕೊಳ್ಳಲು ಏದುಸಿರು ಬಿಡುವಂತಾಗಿದೆಯಂತೆ.

4 Hours sleep, 20 hours work:officials in Uttar Pradesh finding hard to cope With CM Yogi

ಬುಧವಾರ ಹಾಗೂ ಗುರುವಾರ ನಡೆದಿರುವ ಎರಡು ಮೀಟಿಂಗ್ ಗಳೇ ಅದಕ್ಕೆ ಸಾಕ್ಷಿ. ಬುಧವಾರ ಸಂಜೆ ವಿವಿಧ ಇಲಾಖೆಗಳ ಮೀಟಿಂಗ್ ಕರೆದಿದ್ದ ಯೋಗಿ ಆದಿತ್ಯನಾಥ್ ಅವರು ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಕೂಲಂಕಷ ಚರ್ಚೆ ನಡೆಸಿದರು.

ಈ ಸಭೆ ಮುಗಿದಿದ್ದು ಎಷ್ಟೊತ್ತಿಗೆ ಗೊತ್ತೆ? ಮಧ್ಯರಾತ್ರಿ 12: 30ಕ್ಕೆ ! ಅದು ಒಂದು ಕಡೆಯಿರಲಿ. ಗುರುವಾರ ಸಂಜೆಯೂ ಇತರ ಇಲಾಖೆಗಳ ದೊಡ್ಡ ಮಟ್ಟದ ಅಧಿಕಾರಿಗಳ ಮೀಟಿಂಗ್ ಕರೆದಿದ್ದರು ಯೋಗಿ. ಆದರೆ, ಆ ಮೀಟಿಂಗ್ ಮುಗಿದಿದ್ದು ರಾತ್ರಿ 1 ಗಂಟೆಗೆ.

ಮೀಟಿಂಗ್ ನಲ್ಲಿ ಅಧಿಕಾರಿಗಳು ಯೋಗಿ ಜತೆ ಮಾತನಾಡುತ್ತಿದ್ದರೆ, ಇತ್ತ ಇಲಾಖೆಯ ಸೆಕ್ರೆಟರಿಯೇಟ್ ನಲ್ಲಿರುವ ಸಿಬ್ಬಂದಿ ಸುಮ್ಮನೇ ಮನೆ ಕಡೆ ಹೊರಡೋ ಹಾಗಿಲ್ಲ. ಮೀಟಿಂಗ್ ಮುಗಿಸಿ ಬರುವ ಅಧಿಕಾರಿಗಳು ನೋಟ್ಸ್ ಮಾಡಿಕೊಂಡು ತರುವ ಸಿಎಂ ಆದೇಶಗಳನ್ನು ಚಾಚೂ ತಪ್ಪದೇ ಎಲ್ಲವನ್ನೂ ಕಂಪ್ಯೂಟರ್ ನಲ್ಲಿ ಟೈಪ್ ಮಾಡಿ ಸಂಬಂಧಪಟ್ಟ ಅಧೀನ ಸಂಸ್ಥೆಗಳಿಗೆ, ಇಲಾಖೆಗಳಿಗೆ, ಜಿಲ್ಲಾ ಮಟ್ಟದ ಸಂಸ್ಥೆಗಳಿಗೆ, ಕಚೇರಿಗಳಿಗೆ ತಲುಪಿಸುವ ಜವಾಬ್ದಾರಿ ಅವರದ್ದು.

ಸರಿ, ಮೀಟಿಂಗ್ ಎಲ್ಲಾ ಆಯ್ತು. ಮನೆಗೆ ಹೋಗಿ ನೆಮ್ಮದಿಯಾಗಿ ಮಲಗಿ ಬೆಳಗ್ಗೆ ಲೇಟಾಗಿ ಆಫೀಸ್ ಬಂದರಾಯ್ತು ಬಿಡು ಅನ್ನೋ ಹಾಗೂ ಇಲ್ಲ. ಹೀಗೆ, ಮಧ್ಯರಾತ್ರಿವರೆಗೂ ಮೀಟಿಂಗ್ ಅದೂ ಇದೂ ಅಂತ ಬ್ಯುಸಿಯಾಗಿರುವ ಮುಖ್ಯಮಂತ್ರಿಗಳು ಲೇಟಾಗಿ ಮನೆಗೆ ಹೋಗಿ ನೆಮ್ಮದಿಯಾಗಿ ಮಲಗ್ತಾರಾ ಅದೂ ಇಲ್ವಂತೆ. ಕೇವಲ ನಾಲ್ಕು ಗಂಟೆ ಕಾಲ ಮಲಗಿ ಎದ್ದು, ಬೇಗನೇ ರೆಡಿಯಾಗಿ ಬೆಳಗಿನ ಜಾವವೇ ಆಫೀಸ್ ಬಂದು ಕೂತುಬಿಡುತ್ತಾರಂತೆ.

ಇನ್ನು,ಕಚೇರಿಯಲ್ಲಿ ಆಗಲೇ ಮುಖ್ಯಮಂತ್ರಿಗಳಿದ್ದಾರೆಂದು ತಿಳಿದ ಮೇಲೂ ಕಚೇರಿಗೆ ಬರುವ ಸಿಬ್ಬಂದಿ ಲೇಟಾಗಿ ಬರೋಕೆ ಆಗುತ್ತಾ? ಅಬ್ಬಬ್ಬಾ ... ಹೀಗಿದೆ ನೋಡಿ ಯೋಗಿ ಆಡಳಿತ ವೈಖರಿ.
ಈ ಹಿಂದಿನ ಸರ್ಕಾರಗಳಲ್ಲಿ ಈ ಸರ್ಕಾರಿ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ, ಈಗಂತೂ ಅವರ ಮೈಯ್ಯಲ್ಲಿ ಹೊಕ್ಕಿದ್ದ ಸೋಮಾರಿತನದ ದೆವ್ವ ಬಿಡುಗಡೆಯಾಗುತ್ತಿದೆ.

English summary
Yogi Adityanath sleeps for four hours and officials in Uttar Pradesh are finding it hard to cope. On Wednesday and Thursday Yogi held two meetings to assess various departments and their working. The Wednesday meeting began at 6 pm and ended by 12.30 am. The Thursday meeting which began at 6 pm went on till 1 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X