ನಾಪತ್ತೆಯಾಗಿರುವ 39 ಭಾರತೀಯರು ಬದುಕಿದ್ದಾರೆ - ಇರಾಕ್ ಸರ್ಕಾರ

Subscribe to Oneindia Kannada

ಬಾಗ್ದಾದ್, ಜುಲೈ 24: ಇರಾಕಿನಲ್ಲಿ ಐಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿರಬಹುದು ಎಂದುಕೊಳ್ಳಲಾಗಿರುವ 39 ಭಾರತೀಯರು ಬದುಕಿದ್ದಾರೆ ಎಂದು ಇರಾಕ್ ವಿದೇಶಾಂಗ ಸಚಿವ ಇಬ್ರಾಹಿಂ ಅಲ್ ಜಫಾರಿ ಹೇಳಿದ್ದಾರೆ.

ಇರಾಕಿಗೆ ತೆರಳಿದ್ದ 39 ಭಾರತೀಯರು ನಾಪತ್ತೆಯಾಗಿದ್ದಾರೆ. ಅವರ ಇರುವಿಕೆ ಬಗ್ಗೆ ಯಾವುದೇ ಸೂಚನೆಗಳು ಈ ವರೆಗೆ ಸಿಕ್ಕಿಲ್ಲ. ನಾಪತ್ತೆಯಾಗಿರುವ ಈ ಭಾರತೀಯರನ್ನು ಹುಡುಕಿ ಕೊಡುವಂತೆ ಭಾರತ ಸರ್ಕಾರ ಅದರಲ್ಲೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇರಾಕ್ ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಬಂದಿದ್ದರು.

 39 missing Indians are alive – Iraq governement

ಈ ಹಿನ್ನಲೆಯಲ್ಲಿ ಮಾತನಾಡಿರುವ ಇಬ್ರಾಹಿಂ ಅಲ್ ಜಫಾರಿ, "ನಾವು ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯನ್ನೇ ಸತ್ಯ ಎಂದು ಒಪ್ಪಿಕೊಳ್ಳಲು ನಿರ್ಧರಿಸಿದ್ದೇವೆ. ಹಾಗಾಗಿ ನಾವು ಎಲ್ಲಾ ಭಾರತೀಯರು ಬದುಕಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದ್ದೇವೆ," ಎಂದು ಹೇಳಿದ್ದಾರೆ.

ನಾಪತ್ತೆಯಾಗಿರುವ ಈ ಭಾರತೀಯರ ಬಗ್ಗೆ ಸುಳಿವು ನೀಡಿದವರಿಗೆ ಇರಾಕ್ ಸರಕಾರ ನಗದು ಪುರಸ್ಕಾರ ನೀಡಲಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಬಾಗ್ದಾದಿ ಸಾವಿನ ಬಗ್ಗೆ ಗಟ್ಟಿ ಸಾಕ್ಷ್ಯಗಳಿಲ್ಲ

"ಇದೇ ವೇಳೆ ಅವರು ಐಸಿಸ್ ಕಮಾಂಡರ್ ಅಬುಬಕರ್ ಅಲ್ ಬಗ್ದಾದಿ ಸಾವಿನ ಬಗ್ಗೆ ನಮ್ಮ ಬಳಿ ನಿಖರವಾದ ಸಾಕ್ಷ್ಯಗಳಿಲ್ಲ. ಡಿಎನ್ಎ ಮಾಹಿತಿ ಮೂಲಕ ಖಚಿತಪಟ್ಟರೆ ಆಗ ನಾವು ಸದ್ದಾಂ ರೀತಿಯಲ್ಲಿ ಬಾಗ್ದಾದಿ ಸತ್ತಿದ್ದಾನೆ ಎನ್ನಬಹುದು," ಎಂದು ಜಫಾರಿ ಹೇಳಿದ್ದಾರೆ.

Pakistanis Not Allowed Says Kuwait

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
39 missing Indians in Iraq: "We are trying to follow news gained through intelligence sources. And we consider that all the Indians are alive," said foreign minister of Iraq Ibrahim al-Jaafari.
Please Wait while comments are loading...