ಕಾಶ್ಮೀರದಲ್ಲಿ ಮೂವರು ಹಿಜ್ಬುಲ್ ಉಗ್ರರ ಹತ್ಯೆ

Subscribe to Oneindia Kannada

ಬುದ್ಗಾಮ್, ಜುಲೈ 12: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಮೂವರು ಹಿಜ್ಬುಲ್ಲಾ ಮುಜಾಹಿದ್ದೀನ್ ಉಗ್ರರನ್ನು ಹತ್ಯೆ ಮಾಡಲಾಗಿದೆ.

ಗುಪ್ತಚರ ಮಾಹಿತಿ ಇದ್ದೂ ಅಮರನಾಥ ದಾಳಿ ನಡೆದಿದ್ದು ಹೇಗೆ?

3 Hizbul Mujahideen terrorists killed in Budgam, Jammu and Kashmir

ಮಂಗಳವಾರ ಸಂಜೆ ಪೊಲೀಸರು ಮತ್ತು ಉಗ್ರರ ನಡುವೆ ನಡೆದ ಎನ್ಕೌಂಟರ್ ನಲ್ಲಿ ಈ ಮೂವರು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಉಗ್ರರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನೂ ವಶಕ್ಕೆ ಪಡೆಯಲಾಗಿದೆ.

3 Hizbul Mujahideen terrorists killed in Budgam, Jammu and Kashmir

ಗುಪ್ತಚರ ಇಲಾಖೆಯ ಖಚಿತ ವರದಿ ಆಧರಿಸಿ ಬುದ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಉಗ್ರರಿಗಾಗಿ ಹುಡುಕಾಟ ಆರಂಭಿಸಲಾಗಿತ್ತು. ಈ ವೇಳೆ ಉಗ್ರರು ಪತ್ತೆಯಾಗಿದ್ದು ನಿರಂತರ ಗುಂಡಿನ ದಾಳಿಯ ನಂತರ ಉಗ್ರರನ್ನು ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ.

English summary
Three Hizbul Mujahideen terrorists killed by security forces near Budgam, Jammu and Kashmir.
Please Wait while comments are loading...