ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ: ಕಾಂಗ್ರೆಸ್-ಎಸ್ಪಿ ನಡುವೆ ಸೀಟು ಹಂಚಿಕೆ ಕಾದಾಟ

By ವಿಕಾಸ್ ನಂಜಪ್ಪ
|
Google Oneindia Kannada News

ಲಕ್ನೊ, ಜನವರಿ 19: ಅಪ್ಪ ಮಗನ ಸೈಕಲ್ ಜಗಳದ ನಂತರ ಇದೀಗ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಚರ್ಚೆ ತಾರಕಕ್ಕೇರಿದೆ. 403 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 100 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದರೆ, ಎಸ್ಪಿ ಕೇವಲ 85 ಸ್ಥಾನ ನೀಡಲು ಮುಂದಾಗಿದ್ದು ಕೊಡುಕೊಳ್ಳುವಿಕೆ ಮುಂದುವರಿದಿದೆ.

ಪ್ರತಿಷ್ಠಿತ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಮೈತ್ರಿಯೇನೋ ನಡೆದಿದೆ. ಆದರೆ ಸೀಟು ಹಂಚಿಕೆಯದ್ದೇ ಸಮಸ್ಯೆಯಾಗಿ ಪರಿಣಮಿಸಿದೆ. ಆಡಳಿತರೂಡ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ತಮಗೆ ಹೆಚ್ಚಿನ ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದು ಅಂತಿಮ ನಿರ್ಧಾರಕ್ಕೆ ಬರಲು ವಿಫಲವಾಗಿವೆ.

UP elections: SP tells Cong, 290 seats non-negotiable, rest is your call

ಸಮಾಜವಾದಿ ಪಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ 85 ಕ್ಷೇತ್ರಗಳನ್ನಷ್ಟೇ ಬಿಟ್ಟುಕೊಡಲು ಸಿದ್ಧವಾಗಿದೆ. ಆದರೆ ಕಾಂಗ್ರೆಸ್ 100 ಕ್ಷೇತ್ರಗಳು ಬೇಕು ಎಂದು ಪಟ್ಟು ಹಿಡಿದಿದೆ. ಸದ್ಯ ಮಾತುಕತೆಗಳು ಚಾಲ್ತಿಯಲ್ಲಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಇಲ್ಲಿವರೆಗಿನ ಚರ್ಚೆಯಲ್ಲಿ ಸಮಾಜವಾದಿ ಪಕ್ಷ 90 ಸ್ಥಾನಗಳನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡಲು ಒಪ್ಪಿಕೊಂಡಿದ್ದು, 100 ಸ್ಥಾನ ನೀಡಲು ಸಾಧ್ಯವೇ ಇಲ್ಲ ಎಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಮತಗಳು ಹೆಚ್ಚಿರುವ ಪ್ರದೇಶಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲು ಮುಂದಾಗಿದೆ. ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ಕ್ಕೆ ಹೋಗದಂತೆ ತಡೆಯುವುದು ಎರಡೂ ಪಕ್ಷಗಳಿಗೆ ಪ್ರಮುಖವಾಗಿದ್ದು, ಮೈತ್ರಿಕೂಟದ ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಒಂದೊಮ್ಮೆ ಅಲ್ಪಸಂಖ್ಯಾತ ಮತಗಳು ಒಡೆದು ಬಿಎಸ್ಪಿ ಕಡೆಗೆ ಹೋಗಿದ್ದೇ ಆದಲ್ಲಿ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಕ್ಷಕ್ಕೆ ಸೋಲುಕಟ್ಟಿ್ಟ್ಟ ಬುತ್ತಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಸದ್ಯ ಎರಡೂ ಪಕ್ಷಗಳ ನಡುವೆ ಮಾತುಕತೆಗಳು ಮುಂದುವರಿದಿದ್ದು ಎರಡು ಮೂರು ದಿನದಲ್ಲಿ ಸೀಟು ಹಂಚಿಕೆ ಅಂತಿಮವಾಗಬಹುದು ಎಂದುಕೊಳ್ಳಲಾಗಿದೆ.

(ಒನ್ ಇಂಡಿಯಾ ಸುದ್ದಿ)

English summary
The Congress and the Samajwadi Party are busy in the seat sharing process of upcoming Utatr Pradesh assembly election. The Congress is bargaining for 100 seats where as the SP is trying to strike the deal by giving 85 only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X