ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್ಐಎಸ್ ಸೇರಲು ಮುಂದಾಗಿದ್ದ 21 ಯುವಕರಿಗೆ ತಡೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ. 6: ಐಎಸ್ಐಎಸ್ ಉಗ್ರ ಸಂಘಟನೆಯನ್ನು ಸೇರಲು 21 ಜನ ಭಾರತೀಯ ಯುವಕರು ಮುಂದಾಗಿದ್ದರು. ತೆಲಂಗಾಣದ 15 ಮತ್ತು ಮಧ್ಯ ಪ್ರದೇಶದ 6 ಜನ ಸಂಘಟನೆಗೆ ಸೇರಲು ಮುಂದಾಗದ್ದರು ಎಂದು ಗುಪ್ತಚರದಳ ಮಾಹಿತಿ ನೀಡಿದೆ.

ತೆಲಂಗಾಣದ ಯುವಕರಿಗೆ ದೇಶದಿಂದ ಹೊರಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಪೊಲೀಸರು ಮತ್ತು ಗುಪ್ತಚರದಳದ ಕಾರ್ಯಾಚರಣೆ ಇವರಿಗೆ ತಡೆ ಹಾಕಿದೆ.[ಹುಷಾರ್... ಬೆಂಗಳೂರು, ಕೊಲ್ಕತ್ತಾ ಉಗ್ರರ ತಾಣ]

intelligence

ತೆಲಂಗಾಣದಲ್ಲಿ ಏನಾಗುತ್ತಿದೆ?
ತೆಲಂಗಾಣ ವಿಮಾನ ನಿಲ್ದಾಣಗಳಲ್ಲಿ ಅನೇಕ ಜನರು ಅನುಮಾನಾಸ್ಪದ ಪ್ರಯಾಣಕ್ಕೆ ಮುಂದಾಗಿರುವುದು ಕಂಡುಬಂದಿದೆ. ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಇರಿಸಿಕೊಂಡಿರುವ ಬಗ್ಗೆ ಮಾಹಿತಿಯೂ ದೊರೆಯುತ್ತಿದೆ.

ಈ ಎಲ್ಲ 15 ಪ್ರಕರಣಗಳನ್ನು ಅವಲೋಕಿಸಿದಾಗ ಒಂದು ಸಂಗತಿ ಬಹಿರಂಗವಾಗುತ್ತಿದೆ. ಇವರೆಲ್ಲ ಯುನೈಟೆಡ್ ಕಿಂಗ್ ಡಮ್ ಅಥವಾ ಗಲ್ಫ್ ರಾಷ್ಟ್ರಗಳಿಗೆ ತೆರಳಿ ಅಲ್ಲಿಂದ ಇರಾಕ್ ಅಥವಾ ಸಿರಿಯಾಕ್ಕೆ ತೆರಳಿ ಸಂಘಟನೆಗಳೊಂದಿಗೆ ಕೈ ಜೋಡಿಸಬೇಕು ಎಂದುಕೊಂಡಿದ್ದರು. ಅಲ್ಲದೇ ಇವರು ದೇಶದ ಗಡಿಯನ್ನು ದಾಟಲು ಪರವಾನಗಿಯನ್ನು ಪಡೆದುಕೊಂಡಿದ್ದರು. ಗುಪ್ತಚರದಳಕ್ಕೆ ಮತ್ತಷ್ಟು ಮಾಹಿತಿಯೂ ಲಭ್ಯವಾಗಿದ್ದು ಇವರು ಅಂತರ್ಜಾಲಕ್ಕೆ ಸಂಬಂಧಿಸಿ ಅಪಾರ ತಿಳಿವಳಿಕೆ ಹೊಂದಿದ್ದರು.[ಐಎಸ್ಐಎಸ್ ಸೇರಲು ಹೊರಟವರು ಭಾರತಕ್ಕೆ ಗಡೀಪಾರು]

ಮಧ್ಯಪ್ರದೇಶದ ಯುವಕರ ಕತೆ ಏನು?
ಮಧ್ಯ ಪ್ರದೇಶದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದ ಆರು ಜನ ಯುವಕರು ಉಗ್ರರೊಂದಿಗೆ ಕೈ ಜೋಡಿಸಲು ಮುಂದಾಗಿದ್ದರು. ಸಿರಿಯಾದಲ್ಲಿ ಉತ್ತೀಚೆಗೆ ಎನ್ ಕೌಂಟರ್ ಗೆ ಬಲಿಯಾದ ಸುಲ್ತಾನ್ ಅರ್ಮರ್ ಎಂಬಾತನ ಜತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದರು. ಈತ ಭಾರತೀಯ ಯುವಕರನ್ನು ಸೇರಿಸಿಕೊಳ್ಳುವ ಕೆಲಸ ಮಾಡುತ್ತಿದ್ದ.

ಮಧ್ಯ ಪ್ರದೇಶದಲ್ಲಿ ಇರ್ಫಾನ್ ಖಾನ್ ಎಂಬಾತ ಯುವಕರ ಗುಂಪಿನ ನಾಯಕತ್ವ ವಹಿಸಿಕೊಂಡಿದ್ದ. ಇವರು ಕೇವಲ ಸಂಘಟನೆ ಸೇರುವುದು ಮಾತ್ರವಲ್ಲ, ಭಾರತದಲ್ಲಿ ದಾಳಿ ಮಾಡಲು ಮುಂದಾಗಿದ್ದರು ಎಂದು ಗುಪ್ತಚರ ದಳ ಮಾಹಿತಿ ನೀಡಿದೆ.['ಜಾಣ' ಮೆಹದಿ ಗುಪ್ತದಳದ ಕಣ್ಣು ತಪ್ಪಿಸಿದ್ದು ಹೇಗೆ?]

ಸಿರಿಯಾದಲ್ಲಿ ಹನೀಫ್ ವಾಸೀಂ ಸಾವು
ಸಿರಿಯಾದಲ್ಲಿ ಹೈದರಾಬಾದ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಹನೀಫ್ ವಾಸೀಂ(25ವರ್ಷ) ಸಾವನ್ನಪ್ಪಿರುವುದಾಗಿ ಗುಪ್ತಚರ ಮೂಲಗಳು ತಿಳಿಸಿವೆ. ಹನೀಫ್ ವಾಸೀಂ 2014ರ ನವೆಂಬರ್ ನಲ್ಲಿ ಇಂಜಿನಿಯರಿಂಗ್ ಕಲಿಯಲು ಲಂಡನ್ ಗೆ ತೆರಳಿದ್ದ. ಬಳಿಕ ವಾಸೀಂ ಲಂಡನ್ ನಿಂದ ಸಿರಿಯಾಕ್ಕೆ ತೆರಳಿ ಇಸಿಸ್ ಸಂಘಟನೆ ಸೇರಿದ್ದ.

ಯುವಕರ ಮನವೊಲಿಕೆ ನಿರಂತರ
ತೆಲಂಗಾಣದ ಬಹುತೇಕ ಪ್ರಕರಣಗಳಲ್ಲಿ ಅವರನ್ನು ಮನವೊಲಿಸಿ ವಿಮಾನ ನಿಲ್ದಾಣದಿಂದ ಕರೆತರಲಾಗಿದೆ. ಅಲ್ಲದೇ ನಿರಂತರವಾಗಿ ಕೌನ್ಸಲಿಂಗ್ ಮಾಡಲಾಗಿದೆ. ಮತ್ತೆ ಯುವಕರು ಭಾರತದಿಂದ ಹೊರ ಹೋಗಬಾರದು ಎಂಬುದು ಇದರ ಮುಖ್ಯ ಉದ್ದೇಶ.

ಗುಪ್ತಚರದಳ ಇಂಥ ಪ್ರಕರಣಗಳ ಕುರಿತು ನಿರಂತರ ಮಾಹಿತಿ ಕಲೆ ಹಾಕುತ್ತಿದ್ದರೂ ವಿವಿಧ ವಾಮಮಾರ್ಗಗಳ ಮೂಲಕ ಯುವಕರನ್ನು ಸೆಳೆಯುವ ಯತ್ನ ನಡೆಯುತ್ತಲೇ ಇದೆ. ಇನ್ನು ಇದೇ ಬಗೆಯಲ್ಲಿ ಅದೆಷ್ಟು ಯುವಕರು ಉಗ್ರರ ಮಾತಿಗೆ ಮರುಳಾಗಿದ್ದಾರೋ ಎಂಬ ಸಂಗತಿ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

English summary
The past couple of months have kept Intelligence Bureau officials busy and the number of persons who have been stopped from joining the ISIS from different parts of the country is 21. While 15 are from Telangana, the remaining six are from Madhya Pradesh. While in Telangana the youth trying to join the ISIS were stopped from going out of the country, in Madhya Pradesh there was a module which had been busted by the police and the intelligence bureau.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X