ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಅಧಿಕಾರಿಗಳಿಗೆ ಭಾರತ ಬಿಟ್ಟು ಹೋಗುವಂತೆ ಸೂಚನೆ!

By Mahesh
|
Google Oneindia Kannada News

ನವದೆಹಲಿ, ಅಕ್ಟೋಬರ್ 27: ರಕ್ಷಣಾ ಇಲಾಖೆಯ ಮಹತ್ವದ ದಾಖಲೆಗಳನ್ನು ಹೊಂದಿರುವ ಆರೋಪದ ಮೇಲೆ ಬಂಧನವಾಗಿದ್ದ ಪಾಕ್ ಹೈಕಮಿಷನರ್ ಅಧಿಕಾರಿ ಮೊಹಮ್ಮದ್ ಅಖ್ತರ್ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ, 24 ಗಂಟೆಯೊಳಗೆ ಭಾರತವನ್ನು ಬಿಟ್ಟು ತೊರೆಯುವಂತೆ ಸೂಚಿಸಲಾಗಿದೆ.

ಪಾಕ್ ಹೈಕಮಿಷನರ್ ಅಧಿಕಾರಿ ಮೊಹಮ್ಮದ್ ಅಖ್ತರ್ ಅವರು ರಾಜತಾಂತ್ರಿಕ ಕಾರ್ಯವನ್ನು ಬಿಟ್ಟು ಗೂಢಚಾರಿಕೆ ಮಾಡಿದ ಆರೋಪವನ್ನು ಹೊತ್ತುಕೊಂಡಿದ್ದಾರೆ. ರಾಜತಾಂತ್ರಿಕ ವಿನಾಯಿತಿ ಮೇರೆಗೆ ಅಖ್ತರ್ ಅವರನ್ನು ಬಿದುಗಡೆ ಮಾಡಲಾಗಿತ್ತು. [ದೆಹಲಿ ಪೊಲೀಸರಿಂದ ಪಾಕ್ ಹೈ ಕಮಿಷನ್ ಅಧಿಕಾರಿ ಬಂಧನ]

Two arrested for passing info to Pak High Commission staffer

ಪಾಕ್ ಹೈಕಮಿಷನರ್ ಅಧಿಕಾರಿ ಮೊಹಮ್ಮದ್ ಅಖ್ತರ್ ಹಾಗೂ ಐಎಸ್ ಐಗೆ ಮಾಹಿತಿ ನೀಡಿದ ಆರೋಪದ ಮೇಲೆ ಸುಭಾಷ್ ಜಹಾಂಗೀರ್ ಹಾಗೂ ಮೌಲನಾ ರಮ್ಜಾನ್ ರನ್ನು ರಾಜಸ್ಥಾನದ ಗಡಿಯಲ್ಲಿ ಬಂಧಿಸಲಾಗಿತ್ತು.

ಇವರಿಬ್ಬರು ಗಡಿ ಭಾಗದ ಬಗ್ಗೆ ಮಹತ್ವದ ಮಾಹಿತಿಯನ್ನು ಉಗ್ರರಿಗೆ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗುಪ್ತಚರ ಇಲಾಖೆ ಕಳೆದ ವಾರದಿಂದ ಈ ಬಗ್ಗೆ ಮಾಹಿತಿ ಕಲೆ ಹಾಕಿ ದೆಹಲಿ ಹಾಗೂ ರಾಜಸ್ಥಾನ ಪೊಲೀಸರಿಗೆ ಸೂಚನೆ ನೀಡಿತ್ತು.

ಪಾಕ್ ಹೈಕಮಿಷನರ್ ಬಸಿತ್ ಅವರಿಗೆ ಭಾರತದಿಂದ ಸಮನ್ಸ್ ಜಾರಿಗೊಳಿಸಲಾಗಿದ್ದು, ವಿದೇಶಾಂಗ ಸಚಿವಾಲಯದಲ್ಲಿ ಈ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

English summary
Two persons from Rajasthan have been arrested after it was found that they were leaking information to Mehmood Akthar, the staffer at the Pakistan High Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X