ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐ.ಟಿ ಉದ್ಯೋಗಿಗಳಿಗೆ ಶಾಕ್ ನೀಡಿದ ಹೆಡ್‌ ಹಂಟರ್ಸ್ ಸಂಸ್ಥೆ

ಹೆಡ್‌ ಹಂಟರ್ಸ್ ಇಂಡಿಯಾ ಸಂಸ್ಥೆಯಿಂದ ಐ.ಟಿ ಉದ್ಯೋಗಿಗಳಿಗೆ ಮುಂದಿನ ಮೂರು ವರ್ಷಗಳಲ್ಲಿ ಗಂಡಾಂತರವೊಂದು ಕಾದಿದೆ. ಹಾಗೂ 35ವರ್ಷಕ್ಕಿಂತ ಮೇಲ್ಪಟ್ಟ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.

|
Google Oneindia Kannada News

ಬೆಂಗಳೂರು, ಮೇ 15 : ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ (ಐ.ಟಿ) ವಲಯದಿಂದ ಐ.ಟಿ ಉದ್ಯೋಗಿಗಳಿಗೆ ನಡುಕ ಹುಟ್ಟಿಸುವಂತ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಮುಂದಿನ ಮೂರು ವರ್ಷಗಳಲ್ಲಿ 1.75 ಲಕ್ಷದಿಂದ 2 ಲಕ್ಷ ಐ.ಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಹೆಡ್‌ ಹಂಟರ್ಸ್ ಇಂಡಿಯಾ ಸಂಸ್ಥೆ ಹೇಳುವ ಮೂಲಕ ಐಟಿ ಉದ್ಯೋಗಿಗಳಿಗೆ ಶಾಕ್ ನೀಡಿದೆ.

ಕ್ಲೌಡ್‌ನಂತಹ ಹೊಸ ತಂತ್ರಜ್ಞಾನಗಳಿಗೆ ಒಗ್ಗಿಕೊಳ್ಳಲು 35 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಸಿಬ್ಬಂದಿಗೆ ಸಾಧ್ಯವಾಗದ ಕಾರಣ ಅಂಥ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ. ಲಕ್ಷ್ಮೀಕಾಂತ್ ತಿಳಿಸಿದ್ದಾರೆ.[ಟ್ರಂಪ್ ನೀತಿಗೆ ಭಾರತೀಯ ಐಟಿ ಕ್ಷೇತ್ರ ತತ್ತರ]

2 lakh jobs would be cut in IT sector in next 3 months: Reort

56,000 ಐ.ಟಿ ಉದ್ಯೋಗಿಗಳು ಈ ವರ್ಷ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ವಾಸ್ತವವಾಗಿ ಪ್ರತಿ ವರ್ಷ 1.75 ಲಕ್ಷದಿಂದ 2 ಲಕ್ಷ ಐ.ಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜಾಗತಿಕ ಸಮೀಕ್ಷಾ ಸಂಸ್ಥೆ ಮ್ಯಾಕ್‌ ಕಿನ್ಸ್ ಆಂಡ್‌ ಕಂಪೆನಿಯು ಫೆಬ್ರುವರಿಯಲ್ಲಿ ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟದ (ನಾಸ್ಕಾಂ) ಲೀಡರ್‌ಶಿಪ್‌ ಫೋರಂಗೆ ಸಲ್ಲಿಸಿದ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ.

ಮುಂದಿನ ಮೂರು ನಾಲ್ಕು ವರ್ಷದಲ್ಲಿ ಭಾರತದ ಐ.ಟಿ ಕ್ಷೇತ್ರದ ಅರ್ಧಕ್ಕಿಂತ ಹೆಚ್ಚು ಉದ್ಯೋಗಿಗಳು 'ಅಪ್ರಸ್ತುತ'ವಾಗಲಿದ್ದಾರೆ ಎಂದು ಮ್ಯಾಕ್‌ ಕಿನ್ಸ್ ಆಂಡ್‌ ಕಂಪೆನಿ ತನ್ನ ವರದಿಯಲ್ಲಿ ಹೇಳಿದೆ.

ಐ.ಟಿ ಕ್ಷೇತ್ರದಲ್ಲಿ ಅಂದಾಜು 39 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆ ಪೈಕಿ ಹೆಚ್ಚಿನವರಿಗೆ ಹೊಸ ತಂತ್ರಜ್ಞಾನದ ತರಬೇತಿ ಅಗತ್ಯವಿದೆ. ಆದರೂ, ಶೇ 30-40ರಷ್ಟು ಸಿಬ್ಬಂದಿಯನ್ನು ಕೆಲಸದಲ್ಲಿ ಮುಂದುವರಿಸುವುದು ಅಸಾಧ್ಯವಾಗಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನೋಶಿರ್ ಕಾಕಾ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ಕೊಯಮಂತ್ತೂರ್ ಮತ್ತು ಮುಂಬೈನಂತಹ ಮಹಾನಗರಗಳಲ್ಲಿಯ ಐ.ಟಿ ಉದ್ಯೋಗಿಗಳಿಗಿಂತ ಕೊಯಮತ್ತೂರು ಹಾಗೂ ಇನ್ನಿತರ ಎರಡನೇ ಹಂತದ ನಗರಗಳಲ್ಲಿಯ ಸಿಬ್ಬಂದಿ ಉದ್ಯೋಗ ಕಳೆದು ಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

English summary
Executive search firm Head Hunters India today said the job cuts in IT sector will be between 1.75 lakh and 2 lakh annually for next three years due to under-preparedness in adapting to newer technologies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X