ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದಲ್ಲಿ ಮತ್ತೆ ಮರುಕಳಿಸಿದ 1990ರ ಪರಿಸ್ಥಿತಿ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ನವದೆಹಲಿ, ಅಕ್ಟೋಬರ್, 28: ಜಮ್ಮು ಕಾಶ್ಮೀರದ ಶಾಲೆ ಮತ್ತು ಬ್ಯಾಂಕ್ ಗಳು ಉಗ್ರರ ಪ್ರಮುಖ ಟಾರ್ಗೆಟ್ ಆಗುತ್ತಿದ್ದು, ಉಗ್ರರು ಶಾಲೆ ಮತ್ತು ಬ್ಯಂಕ್ ಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಮುಖ ಉಗ್ರ ಸಂಘಟನೆ ಲಷ್ಕರ್-ಎ-ತಯ್ಯಾಬಾ "ಹುರಿತ್ ಕಾನ್ಫರೆನ್ಸ್ ನಿಗದಿಗೊಳಿಸಿರುವ ಕ್ಯಾಲೆಂಡರ್ ನಿಯಮಗಳನ್ನು ಅನುಸರಿಸಿದ ಶಾಲೆ ಮತ್ತು ಬ್ಯಂಕ್ ಗಳ ಮೇಲೆ ದಾಳಿಮಾಡಿರುವುದಾಗಿ ಪ್ರಕಟಿಸಿದೆ.

ಸಂಜೆ 5 ಗಂಟೆ ನಂತರ ಬ್ಯಾಂಕ್ ಗಳು ಕಾರ್ಯನಿರ್ವಹಿಸುವಂತೆ ಹುರಿಯತ್ ಕಾನ್ಫರೆನ್ಸ್ ಸೂಚನೆ ನೀಡಿತ್ತು. ಆದರೆ ಹುರಿಯತ್ ಮುಖಂಡರ ಸೂಚನೆಯನ್ನು ಈ ಬ್ಯಾಂಕ್ ಗಳು ನಿರ್ಲಕ್ಷಿಸಿದ್ದವು. ಆದ್ದರಿಂದಲೇ ದಾಳಿ ಮಾಡಿರುವುದಾಗಿ ಲಷ್ಕರ್ ಉಗ್ರರು ತಿಳಿಸಿದ್ದಾರೆ.

1990s are back J and K as terrorists go on rampage targeting schools

1990ರಲ್ಲೂ ಕಾಶ್ಮೀರದಲ್ಲಿ ಇಂತಹುದೇ ಘಟನೆ ಸಂಭವಿಸಿತ್ತು. ಶಾಲೆ ಮತ್ತು ಬ್ಯಾಂಕ್ ಗಳ ಮೇಲಿನ ದಾಳಿ ತಡೆಯಲು
ಮಿಲಿಟರಿ ಕಾರ್ಯಚರಣೆಯೂ ತೀವ್ರಗತಿಯಲ್ಲಿ ನಡೆದಿತ್ತು.

ಕಳೆದ ಜುಲೈ 9ರಿಂದ ನಡೆಯುತ್ತಿರುವ ದಾಳಿಗಳು 1990ರ ಪರಿಸ್ಥಿತಿಯನ್ನು ಮರುಕಳಿಸಿವೆ. ಎಂದು ಹೇಳಲಾಗುತ್ತಿದೆ.

ಜುಲೈ 2016ರಿಂದ 23 ಶಾಲೆಗಳ ಮೇಲೆ ದಾಳಿ:

* ಕಳೆದ ಮೂರುವರೆ ತಿಂಗಳಲ್ಲಿ ಕಾಶ್ಮೀರ ಕಣಿವೆಯ 10 ಜಿಲ್ಲೆಗಳಲ್ಲಿ ಕನಿಷ್ಠ ಒಂದು ಶಾಲೆಯಾದರೂ ಗುಂಡಿನ ದಾಳಿಗೆ ತುತ್ತಾಗಿದೆ.

* ಕಳೆದ ಐದು ದಿನಗಳಲ್ಲಿ ಐದು ಶಾಲೆಗಳನ್ನು ಸುಟ್ಟುಹಾಕಲಾಗಿದೆ.

* ಒಟ್ಟು 17 ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣ ಸರ್ಕಾರಿ ಶಾಲೆಗಳನ್ನು ಉಗ್ರರು ಸುಟ್ಟುಹಾಕಿದ್ದಾರೆ ಎಂದು ಶಾಲಾ ಕಾಲೇಜು ನಿರ್ವಹಣ ಮಂಡಳಿ ತಿಳಿಸಿದೆ.

* ಕಾಶ್ಮೀರದಲ್ಲಿ ಉಗ್ರರು ನಡೆಸಿರುವ ದಾಳಿಗೆ ಎರಡು ಪ್ರಮುಖ ಖಾಸಗಿ ಶಾಲೆಗಳು ಸಹ ಸುಟ್ಟು ನಾಶವಾಗಿವೆ.

* ಅನಂತ್ ನಾಗ್ ನಲ್ಲಿ ವಕ್ಫ್ ಬೋರ್ಡ್ ನಿಂದ ನಿರ್ವಹಿಸಲ್ಪಡುತ್ತಿರುವ ಪ್ರೌಢಶಾಲೆ ಮತ್ತು ಐತಿಹಾಸಿಕ ಹನಿಫಾ ಶಾಲೆಯ ಮೇಲೂ ದಾಳಿ ನಡೆಸಲಾಗಿದೆ.

* ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ತಂದೆ ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಮತ್ತು ಎನ್ ಸಿ ಮಿರ್ಜಾ ಅಫ್ಜಲ್ ರಂತಹ ಪ್ರಮುಖರು ವಿದ್ಯಾಭ್ಯಾಸ ಮಾಡಿರುವ ವಕ್ಫ್ ಮಂಡಳಿ ಶಾಲೆಗಳ ಮೇಲೂ ದಾಳಿ ಮಾಡಲಾಗಿದೆ.

* ದಾಳಿಯಲ್ಲಿ ವಕ್ಫ್ ಮಂಡಳಿಯ 7 ಶಾಳೆಗಳನ್ನು ಉಗ್ರರು ಸಂಪೂರ್ಣವಾಗಿ ನಾಶಪಡಿಸಿದ್ದು, 10 ಶಾಲೆಗಳು ಭಾಗಶಃ ನಾಶವಾಗಿವೆ.

* ದಕ್ಷಿಣ ಕಾಶ್ಮೀರದ ಕುಲಗಂ ಪ್ರದೇಶದಲ್ಲಿ ಒಟ್ಟು ಐದು ಶಾಲೆಗಳು ದಾಳಿಗೆ ಸಿಲುಕಿ ನಾಶವಾಗಿವೆ.

* ಕೇಂದ್ರ ಕಾಶ್ಮೀರದ ಬುಡಗಂ ಪ್ರದೇಶದಲ್ಲಿ ಮೂರು ಶಾಲೆಗಳನ್ನು ಉಗ್ರರು ಸುಟ್ಟು ಹಾಕಿದ್ದಾರೆ.

* ಈ ಎಲ್ಲಾ ಪ್ರಕರಣಗಳ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರೂ ಇದುವರೆಗೂ ಯಾರೊಬ್ಬರನ್ನೂ ಬಂಧಿಸಿಲ್ಲ

1990ರಲ್ಲಿ ಶಾಲೆಗಳ ಮೇಲೆ ನಡೆದ ಪ್ರಮುಖ ದಾಳಿಗಳು:

1990ರಲ್ಲಿ ಕನಿಷ್ಠ ಐದು ಸಾವಿರ ಶಾಳೆಗಳನ್ನು ಉಗ್ರರು ನಾಶಪಡಿಸಿದ್ದರು. ವಿದ್ಯಾರ್ಥಿಗಳು ಶಾಲೆಗೆ ಹೋಗುವುದೇ ದುಸ್ತರವಾಗಿಬಿಟ್ಟಿತ್ತು. ಶಿಕ್ಷಕರು ಮತ್ತು ಮಕ್ಕಳನ್ನು ಹೊರದಬ್ಬಿ ಶಾಲೆಗಳನ್ನು ಸುಟ್ಟುಹಾಕಿದ್ದ ಘಟನೆಗಳು ಸಹ ನಡೆದಿದ್ದವು.

ನಾಶಪಡಿಸಿದ್ದ ಶಾಲೆಗಳನ್ನು ಪುನರ್ ನಿರ್ಮಿಸಲು ಹಲವು ವರ್ಷ ಬೇಕಾಯಿತು. ಈಗ ಮತ್ತೆ ಉಗ್ರರು ದಾಳಿ ನಡೆಸಿರುವುದರಿಂದ ಮತ್ತೆ ಪುನರ್ ನಿರ್ಮಿಸಿದ್ದ ಎಲ್ಲಾ ಶಾಲೆಗಳು ನಾಶವಾಗಿದ್ದು, ಕಣಿವೆ ರಾಜ್ಯದಲ್ಲಿ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ.

1989 ಮೇ 10ರಂದು ಶ್ರೀನಗರದ ಲಾಲ್ ಚೌಕ್ ನ ಬಿಸ್ಕೋ ಸ್ಮಾರಕ ವಿದ್ಯಾಕೇಂದ್ರದಲ್ಲಿ ಪ್ರಬಲ ಸ್ಫೋಟ ಸಂಭವಿಸಿ ಶಾಲೆಯು ಸಂಪೂರ್ಣ ನಾಶವಾಗಿತ್ತು.

1990 ಮಾರ್ಚ್ 17ರಂದು ಶ್ರೀನಗರದ ಸೋನವಾರ್ ನಲ್ಲಿ ಸ್ಥಳೀಯ ಕ್ಯಾಥೋಲಿಕ್ ಮಿಷನರಿ ಸಂಸ್ಥೆಯೊಂದು ನಡೆಸುತ್ತಿದ್ದ ಶಾಲೆಯನ್ನು ಉಗ್ರರು ಸುಟ್ಟು ಹಾಕಿದ್ದರು.

1990 ಮೇ 23 ರಂದು ಶ್ರೀನಗರದ ಲಾಲ್ ಚೌಕ್ ನಲ್ಲಿ ಮತ್ತೊಮ್ಮೆ ಬಿಸ್ಕೋ ಸ್ಮಾರಕ ವಿದ್ಯಾ ಕೇಂದ್ರದ ಮೇಲೆ ದಾಳಿ ಮಾಡಿದ ಉಗ್ರರು ದಾಳಿ ಮಾಡಿದ್ದರು. ಮತ್ತು ವಿದ್ಯಾರ್ಥಿಗಳ ಮೇಳೆ ಅರೇಬಿಕ್ ಮತ್ತು ಇಸ್ಲಾಂ ಶಿಕ್ಷಣವನ್ನು ಕಲಿಸುವಂತೆ ಆಗ್ರಹಿಸಿದ್ದರು.

1990 ನವೆಂಬರ್ 11ರಂದು ಮತ್ತೊಮ್ಮೆ ಬಿಸ್ಕೋ ಶಾಲಾ ಕೇಂದ್ರದ ಮೇಲೆ ದಾಳಿ ಮಾಡಿದ ಉಗ್ರರು ಕ್ರಿಸ್ತ ಸಂಘಟನೆಯ ಶಾಲೆಯೆಂದು ಮುಚ್ಚಿಸಿದ್ದರು.

1991 ಫೆಬ್ರುವರಿ 23ರಂದು ಶ್ರೀನಗರದ ಲಾಲ್ ಚೌಕ್ ನಲ್ಲಿದ್ದ ಮಿಸ್ ಮೆಲಾನ್ ಸನ್ ಬಾಲಕಿಯರ ಶಾಲೆಯ ಮೇಲೆ ದಾಳಿ ಮಾಡಿದ್ದರು.

1992 ಜುಲೈ 5ರಂದು ಮತ್ತೊಮ್ಮೆ ಬಿಸ್ಕೋ ಶಾಲೆಯ ಮೇಲೆ ಉಗ್ರರು ದಾಳಿ ಮಾಡಿದ್ದರು.

1993 ಜುಲೈ 24ರಂದು ಬಿಸ್ಕೋ ಸ್ಮಾರಕ ವಿದ್ಯಾಕೇಂದ್ರದ ವಿದ್ಯಾರ್ಥಿ ವಸತಿ ನಿಲಯದ ಮೇಲೂ ದಾಳಿ ಮಾಡಿದ್ದರು.

English summary
Schools and banks in Jammu and Kashmir have become the favourite targets for terrorist groups. The Lashkar-e-Tayiba has been claiming that it is attacking schools and colleges as the authorities are not adhering the Hurriyat Conference's calendar of protests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X