ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಕ್ಸ್ ಜೀವನಕ್ಕಾಗಿ ಪತ್ನಿಗೆ ಲಾಯರ್ ನೋಟೀಸ್ ನೀಡಿದ ಪತಿ!

|
Google Oneindia Kannada News

ಹೈದರಾಬಾದ್, ಜನವರಿ 12: ಹತ್ತನೇ ತರಗತಿ ಓದುತ್ತಿರುವಾಗಲೇ ಬಲವಂತದಿಂದ ಮದುವೆಯಾಗಿದ್ದ 16 ವರ್ಷದ ಬಾಲೆಯೊಬ್ಬಳು, ಗಂಡ ನೀಡುತ್ತಿದ್ದ ಲೈಂಗಿಕ ಹಿಂಸೆ ತಡೆಯಲಾರದೆ ತವರಿಗೆ ಓಡಿ ಬಂದಿದ್ದರಿಂದ ಕುಪಿತಗೊಂಡಿರುವ ಆಕೆಯ ಪತಿ ತನ್ನೊಂದಿಗೆ ಲೈಂಗಿಕ ಜೀವನ ನಡೆಸಬೇಕೆಂದು ಲಾಯರ್ ನೋಟೀಸು ಕಳುಹಿಸಿರುವ ವಿಲಕ್ಷಣ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಹಾಗಾಗಿ, ಆ ಹುಡುಗಿಯೀಗ ಮಕ್ಕಳ ಹಕ್ಕುಗಳ ಆಯೋಗದ ಮೊರೆ ಹೋಗಿದ್ದು, ಆಯೋಗವು ಪತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದೆ.

ಏನಿದು ಪ್ರಕರಣ: ಕಳೆದ ವರ್ಷ ಫೆಬ್ರವರಿಯಲ್ಲಿ, 10ನೇ ಇಯತ್ತೆಯಲ್ಲಿ ಓದುತ್ತಿದ್ದ ಈ ಬಾಲಕಿಯನ್ನು (ಹೆಸರು ಬಹಿರಂಗಗೊಂಡಿಲ್ಲ) ಅವರ ಸಂಬಂಧಿಯೊಬ್ಬರಿಗೆ ಮದುವೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಆಕೆಗೆ ಈ ಮದುವೆ ಇಷ್ಟವಿರಲಿಲ್ಲ. ಅದಕ್ಕೆ ಕಾರಣ, ಹುಡುಗ ಆಕೆಗಿಂತ 20 ವರ್ಷ ದೊಡ್ಡವನಾಗಿದ್ದ.

16-Year-Old 'Bride' In Hyderabad Served Legal Notice On Sexual Duties

ಆದರೆ, ಹುಡುಗಿಯ ತಂದೆ, ತಾಯಿ ಹಾಗೂ ಸಂಬಂಧಿಕರು ಆಕೆಯ ಗಂಡನಾಗಬೇಕಿದ್ದ ಹುಡುಗನ ತಾಯಿ ಕಾಯಿಲೆ ಮಲಗಿದ್ದು, ಮಗನ ಮದುವೆ ನೋಡಿ ಸಾಯಬೇಕೆಂದು ಆಸೆ ಪಟ್ಟಿರುವುದಾಗಿ ಹೇಳಿ ಆಕೆಯನ್ನು ಭಾವುಕತೆಯ ಕೂಪಕ್ಕೆ ತಳ್ಳಿ ಮದುವೆ ಮಾಡಿದ್ದರು.

ಆದರೂ, ಮದುವೆಯಾಗಲು ತನ್ನನ್ನು 10ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂಬ ಷರತ್ತನ್ನು ಇಟ್ಟಿದ್ದಳು. ಇದಕ್ಕೆ ಒಪ್ಪಿದ ಆಕೆಯ ಅತ್ತೆಯ ಮನೆಯವರು, ಆಕೆಯನ್ನು ತಮ್ಮ ಮಗನಿಗೆ ತಂದುಕೊಂಡು ಆನಂತರ ಪರೀಕ್ಷೆ ಮುಗಿಯುವವರೆಗೆ ತವರು ಮನೆಯಲ್ಲೇ ಇರಲು ಅವಕಾಶ ಕೊಟ್ಟಿದ್ದರು.

ಪರೀಕ್ಷೆ ಮುಗಿದ ನಂತರ ಗಂಡನ ಮನೆಗೆ ತೆರಳಿದ್ದ ಬಾಲಕಿಗೆ ಗಂಡ ಸಹಜವಾಗಿ ಲೈಂಗಿಕತೆ ಆಹ್ವಾನಿಸಿದಾಗ ಆಕೆ ಒಲ್ಲೆ ಎನ್ನುತ್ತಿದ್ದಳು. ಇದರಿಂದ ಕುಪಿತನಾದ ಆತನಿಂದ ಬೈಗುಳ, ಕೆಲವೊಮ್ಮೆ ಹೊಡೆತಗಳನ್ನೂ ತಿನ್ನಬೇಕಾಯಿತು. ಹೀಗಾಗಿ, ಆಕೆ ಮನೆಯಿಂದ ಓಡಿ ಬಂದು ತವರು ಸೇರಿಕೊಂಡಿದ್ದಾಳೆ.

ಇದು ಎರಡೂ ಕುಟುಂಬಗಳ ಜಗಳಕ್ಕೆ ಕಾರಣವಾಗಿ ಪಂಚಾಯ್ತಿಯೂ ಆಗಿದೆ. ಆದರೆ, ಪಂಚಾಯ್ತಿಯಲ್ಲಿ ಮಗಳ ಪರ ನಿಂತ ಆಕೆಯ ತಂದೆ, ತಾಯಿ ಮಗಳನ್ನು ಕಳುಹಿಸುವುದಿಲ್ಲ ಎಂದಿದ್ದಾರಲ್ಲದೆ, ಮದುವೆಯ ವೇಳೆ ತಾವು ನೀಡಿದ್ದ ವರದಕ್ಷಿಣ 1 ಲಕ್ಷ ರು. ಹಾಗೂ ಒಡವೆಗಳನ್ನು ಹಿಂದಿರುಗಿಸಬೇಕೆಂದು ಹಠ ಹಿಡಿದಿದ್ದಾರೆ.

ಇದರಿಂದ ಕುಪಿತಗೊಂಡಿರುವ ಹುಡುಗ ಇದೀಗ ತನ್ನ ಪತ್ನಿಗೆ ವಕೀಲರಿಂದ ನೋಟಿಸ್ ಕೊಡಿಸಿದ್ದಾನೆ. ಹಾಗಾಗಿ, ಇದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.

English summary
A 16-year-old schoolgirl in Hyderabad, who returned home after being forced to marry a man more than double her age, has been served legal notice reminding her of her "conjugal duties".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X