ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಪ್ರ: ಹತ್ತನೇ ತರಗತಿ ಪಾಸಾದ ಒಂದು ಲಕ್ಷ ಬಾಲಕಿಯರಿಗೆ ತಲಾ 10 ಸಾವಿರ

|
Google Oneindia Kannada News

ಲಖನೌ, ಜೂನ್ 6: ಉತ್ತರ ಪ್ರದೇಶ ಸರಕಾರ ಮಹತ್ತರವಾದ ನಿರ್ಧಾರವೊಂದನ್ನು ಕೈಗೊಂಡಿದೆ. ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಯೋಜನೆಯೊಂದನ್ನು ಘೋಷಿಸಿದೆ. ಅದರ ಅಡಿಯಲ್ಲಿ ಹತ್ತನೇ ತರಗತಿ ಉತ್ತೀರ್ಣರಾದ ಒಂದು ಲಕ್ಷ ಹೆಣ್ಣುಮಕ್ಕಳಿಗೆ ತಲಾ ಹತ್ತು ಸಾವಿರ ರುಪಾಯಿಯನ್ನು ವಿತರಣೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಕನ್ಯಾ ವಿದ್ಯಾದಾನ ಯೋಜನೆ ಅಡಿಯಲ್ಲಿ ಹತ್ತು ಸಾವಿರ ರುಪಾಯಿಯನ್ನು ನೀಡಲಾಗುವುದು ಎಂದು ಅಲ್ಲಿನ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಮಂಗಳವಾರ ಘೋಷಿಸಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನ ಸಿಬಿಎಸ್ ಇ ಹಾಗೂ ಐಸಿಎಸ್ ಇ ಹತ್ತನೇ ತರಗತಿಯ ಫಲಿತಾಂಶ ಪ್ರಕಟವಾಗಿದೆ.

10 thousand rupees to class 10th passed girls by UP government

ಇನ್ನೂ ಉತ್ತರಪ್ರದೇಶ ಪ್ರೌಢಶಿಕ್ಷಣ ಮಂಡಳಿಯ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಬೇಕಿದೆ. ಬಡ ಮುಸ್ಲಿಂ ಹೆಣ್ಣುಮಕ್ಕಳ ಮದುವೆಗೆ ಅನುಕೂಲ ಕಲ್ಪಿಸಲು ಸಾಮೂಹಿಕ ವಿವಾಹ ಆಯೋಜನೆಗೆ ಮುಖ್ಯಮಂತ್ರಿ ಆದಿತ್ಯನಾಥ್ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಸರಕಾರದ ನೂರು ದಿನಗಳ ಕಾರ್ಯಕ್ರಮದಲ್ಲಿ ಇದನ್ನು ಕೂಡ ಸೇರಿಸಲಾಗಿದೆ ಎಂದು ಅಲ್ಲಿನ ಸಚಿವ ಮೊಹ್ಸಿನ್ ರಾಜಾ ಮಾಹಿತಿ ನೀಡಿದ್ದಾರೆ.

English summary
UP deputy CM Dinesh Sharma announces Rs 10,000 each to one lakh schoolgirls who have passed class 10th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X