ಬಾರಾಮುಲ್ಲಾದಲ್ಲಿ ಉಗ್ರನ ಹೊಡೆದುರುಳಿಸಿದ ರಕ್ಷಣಾ ಸಿಬ್ಬಂದಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಶ್ರೀನಗರ, ಜನವರಿ 3: ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ರಕ್ಷಣಾ ಸಿಬ್ಬಂದಿ ಎನ್ ಕೌಂಟರ್ ನಲ್ಲಿ ಉಗ್ರನೊಬ್ಬನನ್ನು ಹೊಡೆದುರುಳಿಸಿದೆ. ಇದೇ ವೇಳೆ ರಕ್ಷಣಾ ಪಡೆಯು ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು-ಗುಂಡುಗಳನ್ನು ವಶಪಡಿಸಿಕೊಂಡಿದೆ. ಬಾರಾಮುಲ್ಲಾ ಜಿಲ್ಲೆಯ ಹರಿತರ್ ತರ್ಜೂ ಪ್ರದೇಶದಲ್ಲಿ ಮಂಗಳವಾರ ರಕ್ಷಣಾ ಪಡೆ ಹಾಗೂ ಉಗ್ರಗಾಮಿಗಳ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.

ಕಾರ್ಯಾಚರಣೆ ವೇಳೆ ಇಬ್ಬರು ಉಗ್ರಗಾಮಿಗಳು ಇದ್ದರೆಂದು ರಕ್ಷಣಾ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ. ಆ ಪೈಕಿ ಒಬ್ಬನನ್ನು ಕೊಲ್ಲಲಾಗಿದೆ. ಮತ್ತೊಬ್ಬನಿಗಾಗಿ ಶೋಧ ಮುಂದುವರಿದಿದೆ. ಉತ್ತರ ಕಾಶ್ಮೀರದ ಬಂಡಿಪೋರ್ ನಲ್ಲಿ ಎನ್ ಕೌಂಟರ್ ನಡೆದ ಐದು ದಿನಗಳ ನಂತರ ಈ ಘಟನೆ ನಡೆದಿದೆ.[ಪಾಕ್ ಗೆ ಒತ್ತಡ, ಉಗ್ರ ಹಫೀಜ್ ಗೆ ಕೈ-ಬಾಯಿ ಕಟ್ಟಲು ಸಿದ್ಧತೆ!]

Jammu and Kashmir

ಈ ಉಗ್ರರು ಯಾವ ಭಯೋತ್ಪಾದನಾ ಸಂಘಟನೆಗೆ ಸೇರಿದವರು ಎಂಬುದು ಗೊತ್ತಾಗಿಲ್ಲ. ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಕಾರ್ಯಾಚರಣೆಯು ಇನ್ನೂ ನಡೆಯುತ್ತಿದೆ. ಈಗಿನ ಸನ್ನಿವೇಶದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದು ಸಾಧ್ಯವಿಲ್ಲ. ಆದರೆ ಸದ್ಯದಲ್ಲೇ ಇನ್ನಷ್ಟು ವಿವರಗಳು ಲಭ್ಯವಾಗಲಿದೆ.

English summary
One terrorist has been killed in an encounter with security forces at Baramulla district in Jammu and Kashmir. The security forces have recovered a huge cache of arms and ammunition.
Please Wait while comments are loading...