ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಇಬ್ಬರು ಸಾಧಕರಿಗೆ ಮ್ಯಾಗ್ಸೆಸ್ಸೆ ಪುರಸ್ಕಾರ

|
Google Oneindia Kannada News

ನವದೆಹಲಿ, ಜು. 29: ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಭಾರತದ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ. ಬಡವರ ಪರ ಹೋರಾಟದಲ್ಲಿ ನಿರತರಾಗಿರುವ ಅಂಶು ಗುಪ್ತಾ ಮತ್ತು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ನ ಮಾಜಿ ಅಧಿಕಾರಿ, ಸಾಮಾಜಿಕ ಕಾರ್ಯಕರ್ತ ಸಂಜೀವ್ ಚತುರ್ವೇದಿ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಡವರಿಗೆ ಮೂಲ ಸೌಕರ್ಯ ಒದಗಿಸುವ ಕೆಲಸದಲ್ಲಿ ಸದಾ ತಲ್ಲೀನರಾಗಿರುವ ಗುಪ್ತಾ ಅವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮ್ಯಾಗ್ಸೆಸ್ಸೆ ಪ್ರಶಸ್ತಿ ಸಮಿತಿ ಬುಧವಾರ ತಿಳಿಸಿದೆ. ನಾಯಕತ್ವ ಮತ್ತು ಸಾಮಾಜಿಕ ಬದಲಾವಣೆ ಆಧಾರಲ್ಲಿ ಪುರಸ್ಕಾರ ಲಭಿಸಿದೆ.[ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ]

award

ಗುಪ್ತಾ ಅವರು ಬಡ ಜನರ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಬಟ್ಟೆಯ ಅಗತ್ಯ ಮತ್ತು ಅದರ ಉದ್ದಿಮೆ ಸ್ಥಾಪನೆಗಾಗಿ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಸಮಾಜ ಸೇವೆಯನ್ನು ಮಾನದಂಡವಾಗಿರಿಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.[ಪಿಟಿಐ ಚಿತ್ರಗಳು]

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಮಾಜಿ ಅಧಿಕಾರಿ ಚತುರ್ವೇದಿ ಸಹ ಗೌರವಕ್ಕೆ ಪಾತ್ರರಾಗಿದ್ದಾರೆ. ಚತುರ್ವೇದಿ ಸರ್ಕಾರಿ ಕಚೇರಿಗಳಲ್ಲಿನ ಅನೇಕ ಭ್ರಷ್ಟಾಚಾರದ ಪ್ರಕರಣಗಳನ್ನು ಬಯಲಿಗೆ ಎಳೆದಿದ್ದಾರೆ. ಅವರ ಧೈರ್ಯ ಮತ್ತು ಸುಧಾರಣೆ ಸಂಕಲ್ಪಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಆಯ್ಕೆ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.[ಕನ್ನಡಿಗ ಹರೀಶ್ ಹಂದೆಗೆ ಪ್ರತಿಷ್ಠಿತ ಮ್ಯಾಗ್ಸೇಸೆ ಪ್ರಶಸ್ತಿ]

ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪ್ರಶಸ್ತಿಯನ್ನು ಏಷ್ಯಾ ಖಂಡದ ಸಾಧಕರಿಗೆ ಅಥವಾ ಸಂಘ ಸಂಸ್ಥೆಗಳಿಗೆ ಕೊಡಮಾಡಲಾಗುತ್ತದೆ. ಸರಕಾರೀ ಸೇವೆ, ಜನ ಸೇವೆ, ಸಂಘೀಯ ನಾಯಕತ್ವ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಕಲೆ, ಶಾಂತಿ ಮತ್ತು ಅಂತರ್ರಾಷ್ಟ್ರೀಯ ತಿಳಿವಳಿಕೆ, ಬೆಳೆಯುತ್ತಿರುವ ನಾಯಕತ್ವ ಆಧಾರದಲ್ಲಿ ಪುರಸ್ಕಾರವನ್ನು ನೀಡಲಾಗುತ್ತದೆ.

award

ಪ್ರಶಸ್ತಿಯ ಬಗ್ಗೆ ಒಂದಿಷ್ಟು
ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು 1957 ರಲ್ಲಿ ಸ್ಥಾಪನೆ ಮಾಡಲಾಯಿತು. ಫಿಲಿಪ್ಪೀನ್ಸ್ ಸರ್ಕಾರದ ಅನುಮತಿಯೊಂದಿಗೆ ಈ ಪ್ರಶಸ್ತಿಗೆ ರಾಮೋನ್ ಮ್ಯಾಗ್ಸೆಸ್ಸೆ ಇವರ ಹೆಸರನ್ನಿಡಲು ನಿರ್ಧರಿಸಲಾಯಿತು. ಫಿಲಿಪೈನ್ಸ್ ನ ಅಧ್ಯಕ್ಷರಾಗಿದ್ದ ರಾಮೋನ್ ಮ್ಯಾಗ್ಸೆಸ್ಸೆ ಇವರ ಗಣತಂತ್ರ ವ್ಯವಸ್ಥೆಯಲ್ಲಿ ತಂದ ಬದಲಾವಣೆಗಳ ಆಧಾರವನ್ನಿಟ್ಟುಕೊಂಡು ಪ್ರಶಸ್ತಿಗೆ ಅವರ ಹೆಸರನ್ನು ಇಡಲಾಯಿತು. ಇದನ್ನು ಏಷ್ಯಾ ಖಂಡದ ನೊಬೆಲ್ ಪ್ರಶಸ್ತಿಯೆಂದು ಪರಿಗಣಿಸಲಾಗುತ್ತದೆ.

ರಾಮೋನ್ ಮ್ಯಾಗ್ಸೆಸ್ಸೆ ಪಡೆದ ಪ್ರಮುಖರು
ಕರ್ನಾಟಕಕ್ಕೆ ಸಂಬಂಧಿಸಿದ ಮೂವರು ಸಾಧಕರು ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕ್ರತರಿದ್ದಾರೆ. ರಂಗಕರ್ಮಿ ಕೆ.ವಿ.ಸುಬ್ಬಣ್ಣ , ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್, ಸೌರ ಶಕ್ತಿಯಿಂದ ಗ್ರಾಮೀಣ ಭಾಗದಲ್ಲಿ ಕ್ರಾಂತಿ ಹುಟ್ಟು ಹಾಕಿದ ಡಾ. ಹರೀಶ್ ಹಂದೆ ಅವರಿಗೆ ಪುರಸ್ಕಾರ ದೊರೆತಿದೆ.

English summary
Social worker Anshu Gupta and former AIIMS official Sanjiv Chaturvedi on Wednesday won the Ramon Magsaysay awards for "enterprising leadership" and for exposing corruption respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X