ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗನವಾಡಿ ಕಾರ್ಯಕರ್ತೆಯರಿಗೆ ಪಿ.ಎಫ್: ಮಹಿಳಾ ದಿನಕ್ಕೆ ಕೇಂದ್ರ ಸರ್ಕಾರದ ಗಿಫ್ಟ್

ಯೋಜನೆಗೆ ಸಂಬಂಧಿಸಿದಂತೆ ಸಚಿವಾಲಯ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಸಮಿತಿಯ ಸಲಹೆ ಮೇರೆಗೆ ಸದ್ಯದಲ್ಲೇ ಕೆಲವು ಮಹತ್ವದ ಯೋಜನೆಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ

|
Google Oneindia Kannada News

ಹೈದರಾಬಾದ್ ಮಾರ್ಚ್ 8: ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸುವ ನಿರ್ಧಾರ ಮಾಡಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ಸಚಿವಾಲಯ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಸಮಿತಿಯ ಸಲಹೆಯ ಮೇರೆಗೆ ಸದ್ಯದಲ್ಲೇ ಕೆಲವು ಮಹತ್ವದ ಯೋಜನೆಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮಾಹಿತಿ ನೀಡಿದ್ದಾರೆ.

Womens' day gift from Central government

ಕೇಂದ್ರ ಸರ್ಕಾರ ಮಹಿಳೆಯರಿಗೆ ನೀಡುತ್ತಿರುವ ಬಂಪರ್ ಕೊಡುಗೆಗಳ ಮಾಹಿತಿ ಇಲ್ಲಿದೆ.

* ಬಿಸಿಯೂಟ ಯೋಜನೆಯ ಸಿಬ್ಬಂದಿ, ಅಂಗನವಾಡಿ, ಆಶಾಕಾರ್ಯಕರ್ತೆಯರಿಗೆ ಉದ್ಯೋಗಿಗಳ ರಾಜ್ಯ ವಿಮೆ (ಇಎಸ್ ಐಸಿ) ಮತ್ತು ಉದ್ಯೋಗಿಗಳ ಭವಿ‌ಷ್ಯ ನಿಧಿ (ಇಪಿ ಎಫ್ ಒ) ಸೌಲಭ್ಯಗಳ ವಿಸ್ತರಣೆ.

* ಆಡಳಿತ ವಲಯದಲ್ಲಿ ಮಹಿಳೆಯರಿಗೆ ನೀಡಬೇಕಿರುವ ಶೇ.33 ರ‌ಷ್ಟು ಮೀಸಲಾತಿಗೆ ಸರ್ಕಾರ ಬದ್ಧ.

* ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಮಹಿಳಾ ಉದ್ಯೋಗಿಗಳಿಗೆ ಸಮಾನ ವೇತನ ಜಾರಿಗೆ ನಿರ್ಧಾರ. ಲಿಂಗದ ಆಧಾರದ ಮೇಲೆ ವೇತನ ತಾರತಮ್ಯ ಮಾಡುವವರ ವಿರುದ್ಧ ಸಮಾನ ವೇತನ ಕಾಯ್ದೆಯಡಿ ಕ್ರಮ.

* ಪ್ರತಿಗ್ರಾಮಕ್ಕೆ ಒಬ್ಬ ಆಶಾಕಾರ್ಯಕರ್ತೆ. ಗ್ರಾಮದಲ್ಲಿ ಪ್ರಥಮ ಚಿಕಿತ್ಸೆ ನೀಡುವುದು, ಆರೋಗ್ಯ ಮಾಹಿತಿ ಇವು ಆಶಾಕಾರ್ಯಕರ್ತೆಯರ ಕರ್ತವ್ಯ.

* ಮಹಿಳೆಯರಿಗೆ ವರ್ಕ್ ಫ್ರಂ ಹೋಂ ಗೆ ಅಗತ್ಯವಿರುವ ಸಾಫ್ಟವೇರ್ ಸೌಲಭ್ಯ ನೀಡುವ ಕುರಿತು ಚಿಂತನೆ.

* ಮಹಿಳಾ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ.

English summary
Central Government will soon announce some important schemes for women, Bandaru Datthatreya, Central Labour Minister said. this will be the great gift to women for international womens day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X