ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್‌ಐಎಸ್‌ಗೆ ಹೈದರಾಬಾದ್‌ನಲ್ಲಿ ಹೆಚ್ಚು ಬೆಂಬಲಿಗರು!

By ವಿಕಾಸ್ ನಂಜಪ್ಪ
|
Google Oneindia Kannada News

ಹೈದರಾಬಾದ್, ಡಿಸೆಂಬರ್ 15 : ಹೈದರಾಬಾದ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್-ಇರಾಕ್ ಮತ್ತು ಸಿರಿಯಾ (ಐಎಸ್‌ಐಎಸ್) ಉಗ್ರ ಸಂಘಟನೆಗೆ ಹೆಚ್ಚು ಬೆಂಬಲಿಗರಿದ್ದಾರೆ ಎಂದು ಭದ್ರತಾ ಸಂಸ್ಥೆ ಮಾಹಿತಿ ಸಂಗ್ರಹಣೆ ಮಾಡಿದೆ. ತೆಲಂಗಾಣ ಹೊರತುಪಡಿಸಿದರೆ ಕರ್ನಾಟಕದಲ್ಲಿ 50 ಜನರು ಸಂಘಟನೆಗೆ ಬೆಂಬಲ ನೀಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಐಎಸ್‌ಐಎಸ್ ಪರವಾಗಿ ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ಕಲಬುರಗಿ ಮೂಲದ ವ್ಯಕ್ತಿಯನ್ನು ರಾಜಸ್ಥಾನದ ಜೈಪುರದಲ್ಲಿ ಕಳೆದ ವಾರ ಬಂಧಿಸಲಾಗಿತ್ತು. ಈತನ ವಿಚಾರಣೆ ನಂತರ ದೇಶದಲ್ಲಿ ಐಎಸ್‌ಐಎಸ್‌ಗೆ ಬೆಂಬಲ ನೀಡುವ ವ್ಯಕ್ತಿಗಳ ಬಗ್ಗೆ ಭದ್ರತಾ ಸಂಸ್ಥೆಗಳು ಮಾಹಿತಿ ಸಂಗ್ರಹಿಸುತ್ತಿವೆ. [ಸಿರಾಜುದ್ದೀನ್ ಬಳಿ ಇತ್ತು 12 ಸಾವಿರ ಪುಟದ ದಾಖಲೆ!]

isis

ದೇಶದಲ್ಲಿ 200 ಜನರು ಐಎಸ್‌ಐಎಸ್‌ಗೆ ಬೆಂಬಲ ನೀಡುತ್ತಿದ್ದು, ಅವರ ಮೇಲೆ ಭದ್ರತಾ ಸಂಸ್ಥೆ ಕಣ್ಣಿಟ್ಟಿದೆ. 200 ಜನರ ಪೈಕಿ 65 ಜನರು ಹೈದರಾಬಾದ್‌ನಲ್ಲಿದ್ದಾರೆ. ಕರ್ನಾಟಕದ 50, ತಮಿಳುನಾಡಿನ 48 ಮತ್ತು ಕೇರಳದ 45 ಜನರು ಬೆಂಬಲ ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. [ಉಗ್ರರ ಸರ್ವನಾಶಕ್ಕೆ ಪಣತೊಟ್ಟ ವೀರ ಯೋಧ ಅಬು]

ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಸಂಪರ್ಕಿಸುತ್ತಿದ್ದ ಮೊಹಮದ್ ಸಿರಾಜುದ್ದೀನ್ ಅನ್ನು ಕಳೆದ ವಾರ ಜೈಪುರದಲ್ಲಿ ಬಂಧಿಸಲಾಗಿತ್ತು. ಹೀಗೆ ವಿವಿಧ ರೀತಿಯಲ್ಲಿ ಸಂಘಟನೆಗೆ ಬೆಂಬಲ ನೀಡುತ್ತಿರುವವರ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿದೆ. [ಉಗ್ರರಿಗೆ ತಿರುಗೇಟು, ಕರ್ನಾಟಕ ಮಸೀದಿಗಳು ಗ್ರೇಟು]

ಐಎಸ್‌ಐಎಸ್‌ಗೆ ಸಂಬಂಧಪಟ್ಟ ವರದಿ, ದಾಖಲೆಗಳನ್ನು ಹೈದರಾಬದ್‌ನ ಕೆಲವು ಯುವಕರು ಕುತೂಹಲಕ್ಕಾಗಿ ಓದುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಂಘಟನೆಗೆ ಬೆಂಬಲ ಸೂಚಿಸುತ್ತಿರುವವರು ಸಕ್ರಿಯವಾದ ಚಟುವಟಿಕೆಗಳಲ್ಲಿ ತೊಡಗಿದರೆ ಅವರನ್ನು ಬಂಧಿಸಲಾಗುತ್ತದೆ ಅಧಿಕಾರಿಗಳು ತಿಳಿಸಿದ್ದಾರೆ.

English summary
Telangana and its capital Hyderabad in particular has been identified as a problem area for security agencies as the number of fanboys of the ISIS. Across the country the Intelligence Bureau are watching nearly 200 persons alleged to be sympathetic towards the ISIS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X