ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣ ನಂತರವೂ ತಿರುಮಲ ತಿಮ್ಮಪ್ಪನ ಹುಂಡಿಗೆ ಭರ್ಜರಿ ಕಾಣಿಕೆ

ಅಪನಗದೀಕರಣ ಜಾರಿಗೊಂಡು ಹಳೆ ನೋಟುಗಳು ಬ್ಯಾನ್ ಆದ ನಂತರವೂ ತಿರುಮಲ ತಿಮ್ಮಪ್ಪನ ಹುಂಡಿಗೆ ಭರ್ಜರಿ ಕಾಣಿಕೆ ಬರುತ್ತಿದೆ. ಯಾತ್ರಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದರೂ, ಕೋಟ್ಯಂತರ ನಗದು ಹಣ ಕಾಣಿಕೆ ಹುಂಡಿಗೆ ಬೀಳುತ್ತಿದೆ.

By Mahesh
|
Google Oneindia Kannada News

ತಿರುಮಲ, ಮಾರ್ಚ್ 28: ಅಪನಗದೀಕರಣ ಜಾರಿಗೊಂಡು ಹಳೆ ನೋಟುಗಳು ಬ್ಯಾನ್ ಆದ ನಂತರವೂ ತಿರುಮಲ ತಿಮ್ಮಪ್ಪನ ಹುಂಡಿಗೆ ಭರ್ಜರಿ ಕಾಣಿಕೆ ಬರುತ್ತಿದೆ. ಯಾತ್ರಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದರೂ, ಕೋಟ್ಯಂತರ ನಗದು ಹಣ ಕಾಣಿಕೆ ಹುಂಡಿಗೆ ಬೀಳುತ್ತಿದೆ.

ಸೋಮವಾರ(ಮಾರ್ಚ್ 27) ಒಂದೇ ದಿನದಂದು 5 ಕೋಟಿ ರು ಹುಂಡಿಗೆ ಕಾಣಿಕೆ ಮೊತ್ತ ಬಂದಿದೆ.ಕಳೆದ ಶನಿವಾರದಂದು ಹುಂಡಿ ಕಲೆಕ್ಷನ್ 2.5 ಕೋಟಿ ರು ಹಾಗೂ ಭಾನುವಾರದಂದು 2.64 ಕೋಟಿ ರು ಬಂದಿದೆ.

ದಿನದಿಂದ ದಿನಕ್ಕೆ ಸರಾಸರಿ ಆದಾಯ ಸಮತೋಲನ ಕಾಣುತ್ತಿದೆ ಎಂದು ಟಿಟಿಡಿ ಹೇಳಿದೆ. ಕಳೆದ 5 ತಿಂಗಳಲ್ಲಿ ದಿನವೂ ಚಿನ್ನ, ಬೆಳ್ಳಿ ಹೊರತು ಪಡಿಸಿ 2.5 ರಿಂದ 3 ಕೋಟಿ ರು ಗಳು ಕಾಣಿಕೆ ರೂಪದಲ್ಲಿ ಏಳು ಮಲೆ ಒಡೆಯನಿಗೆ ಅರ್ಪಣೆಯಾಗುತ್ತಿತ್ತು.

TTD received record collection of Rs 5 crore at Tirumala on Monday after demonetisation

2012ರಲ್ಲಿ ಶ್ರೀರಾಮನವಮಿ ದಿನ 5.73 ರೂ ಹುಂಡಿ ಹಣ ಸಂಗ್ರಹವಾಗಿತ್ತು. ಆದಾದ ಬಳಿಕ ಈಗ 5 ಕೋಟಿ ಸಂಗ್ರಹವಾಗಿದೆ. ಟಿಟಿಡಿ ಅಧಿಕಾರಿಗಳ ಪ್ರಕಾರ, ಅಪನಗದೀಕರಣ ಜಾರಿಗೊಂಡು 500 ಹಾಗೂ 1000 ರುಪಾಯಿ ನೋಟುಗಳ ಬಳಕೆ ನಿಂತ ಬಳಿಕವೂ ಹುಂಡಿ ಕಲೆಕ್ಷನ್ ಏರುತ್ತಲಿದೆ.

ಆದರೆ, ಯಾತ್ರಾರ್ಥಿಗಳ ಸಂಖ್ಯೆ ಕೊಂಚ ಇಳಿಮುಖವಾಗುತ್ತಿದ್ದು, ಯುಗಾದಿ ಹಾಗೂ ಶ್ರೀರಾಮನವಮಿ ಶುಭ ದಿನಗಳಂದು ಅಧಿಕ ಪ್ರಯಾಣದಲ್ಲಿ ಭಕ್ತಾದಿಗಳನ್ನು ನಿರೀಕ್ಷಿಸಲಾಗಿದೆ.

English summary
Tirumala TTD received record collection of Rs 5 crore at Tirumala on Monday after demonetisation.According to TTD officials, despite the pilgrim rush decreasing due to demonetisation, the hundi collections are increasing day by day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X