ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪವಾಸ ನಿರತ ಜಗನ್, ಬಲವಂತವಾಗಿ ಆಸ್ಪತ್ರೆಗೆ ಶಿಫ್ಟ್

By Mahesh
|
Google Oneindia Kannada News

ಹೈದರಾಬಾದ್, ಅ. 13: ತೆಲಂಗಾಣ ಮಾದರಿಯಲ್ಲೇ ಆಂಧ್ರಪ್ರದೇಶಕ್ಕೂ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಬಲವಂತವಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.['ತೆಲಂಗಾಣದ ಬಗ್ಗೆ ಸೊಲ್ಲೆತ್ತಿದರೆ ಹೂತುಬಿಡ್ತೀನಿ']

ಸತತ ಆರು ದಿನಗಳಿಂದ ಉಪವಾಸ ನಿರತರಾಗಿದ್ದ ಜಗನ್ ಅವರು ಮಂಗಳವಾರ ಬೆಳ್ಳಂಬೆಳ್ಳಗೆ ಅಸ್ವಸ್ಥಗೊಂಡರು. ತಕ್ಷಣ ಅವರನ್ನು ಸಮೀಪದ ಸರ್ಕಾರಿ ಅಸ್ಪತ್ರೆಗೆ ಕರೆದೊಯ್ಯಲಾಯಿತು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ವೈದ್ಯರ ಬಲವಂತದ ನಂತರ ದ್ರವಾಹಾರವನ್ನು ನೀಡಲಾಗುತ್ತಿದೆ.[ಜಗನ್ ರೆಡ್ಡಿ ವಿರುದ್ಧ 11ನೇ ಚಾರ್ಜ್ ಶೀಟ್ ಸಲ್ಲಿಕೆ]

Police foil Jaganmohan's fast

ಜಗನ್ ಅವರ ತಾಯಿ ವಿಜಯಮ್ಮ, ಪತ್ನಿ ಭಾರತಿ ಹಾಗೂ ಕುಟುಂಬ ಸದಸ್ಯರು ಆಸ್ಪತ್ರೆಗೆ ಬಂದಿದ್ದು, ಮತ್ತೊಮ್ಮೆ ಆಸ್ಪತ್ರೆ ಬಳಿ ಜನರ ಕೋಲಾಹಲ ಶುರುವಾಗಿದೆ. ಹಿಂದೊಮ್ಮೆ ಇದೇ ರೀತಿ ಆಸ್ಪತ್ರೆ ಸೇರಿದ್ದ ಜಗನ್ ಅವರನ್ನು ಕಾಣಲು ಬಂದಿದ್ದ ನೂರಾರು ಮಂದಿ ಅಭಿಮಾನಿಗಳು ಭಾರಿ ಗದ್ದಲ ಉಂಟು ಮಾಡಿದ್ದರು. ['ರಾಜ್ಯ ಪಕ್ಷಿ' ಹಂಚಿಕೊಂಡ ಕರ್ನಾಟಕ, ತೆಲಂಗಾಣ]

Police foil Jaganmohan's fast

ಕೇಂದ್ರ ಸರ್ಕಾರದಿಂದ ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಸಿಗುವ ತನಕ ನನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದುವಿಪಕ್ಷ ನಾಯಕ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ. ಅದರೆ, ಮತ್ತೊಮ್ಮೆ ಜಗನ್ ಅವರು ಉಪವಾಸ ನಿರತರಾದರೆ ಅವರ ಮೂತ್ರದಲ್ಲಿ ಕೆಟೋನೆಸ್ ಪ್ರಮಾಣ ಆಧಿಕವಾಗಲಿದೆ, ಕಿಡ್ನಿ ವೈಫಲ್ಯ ಎದುರಿಸಬೇಕಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. (ಐಎಎನ್ಎಸ್)

English summary
Hyderabad Police foiled YSR Congress party president Y.S. Jaganmohan Reddy's fast early on Tuesday by shifting him to a hospital, where he was forcibly administered fluids.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X