ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರಾವತಿಗೆ 'ವಾಸ್ತುಪ್ರಕಾರ' ಮೋದಿಯಿಂದ ಶಂಕುಸ್ಥಾಪನೆ

By Mahesh
|
Google Oneindia Kannada News

ಅಮರಾವತಿ, ಅ.22: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಕನಸಿನ ರಾಜಧಾನಿಅ 'ಆಮರಾವತಿ' ನಿರ್ಮಾಣಕ್ಕೆ ವಾಸ್ತು ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಧ್ಯಾಹ್ನ ಶಂಕುಸ್ಥಾಪನೆ ನೆರವೇರಿಸಿದರು.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ರಾಜಧಾನಿ 'ಅಮರಾವತಿ' ಸಂಪೂರ್ಣವಾಗಿ ವಾಸ್ತುಶಾಸ್ತ್ರ ಹಾಗೂ ಫೆಂಗ್ ಶ್ಯೂಯಿಯನ್ನು ಆಧಾರಿಸಿದೆ.

ಶಿಲನ್ಯಾಸ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರ ಜೊತೆಗೆ ಕೇಂದ್ರ ಸಚಿವರಾದ ಎಂ ವೆಂಕಯ್ಯ ನಾಯ್ಡು, ಅಶೋಕ್ ಗಜಪತಿ ರಾಜು, ನಿರ್ಮಲಾ ಸೀತಾರಾಮನ್, ತೆಲಂಗಾಣ ರಾಜ್ಯಪಾಲ ಸಿಎಸ್ಎಲ್ ನರಸಿಂಹನ್, ತೆಲಂಗಾಣ ಕೆ ಚಂದ್ರಶೇಖರ ರಾವ್ ಅವರು ಆಗಮಿಸಿದ್ದರು.

ತೆಲುಗಿನ ಸೂಪರ್ ಸ್ಟಾರ್ ಗಳಾದ ಬಾಲಕೃಷ್ಣ, ವೆಂಕಟೇಶ್ ಅವರು ಕೂಡಾ ಉಪಸ್ಥಿತರಿದ್ದರು. ಆದರೆ, ಪವರ್ ಸ್ಟಾರ್ ಪವನ್ ಕಲ್ಯಾಣ್ ಮಾತ್ರ ಗೈರು ಹಾಜರಾಗಿದ್ದರು. ನಟ ಸಾಯಿಕುಮಾರ್ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಸಾಂಗವಾಗಿ ನಡೆಯಿತು.

ಸುಮಾರು 1,20,000 ಕೋಟಿ ರು ವೆಚ್ಚದ ಹೊಸ ನಗರಿ ನಿರ್ಮಾಣಕ್ಕೆ ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರ, ಕೇಂದ್ರ ಸರ್ಕಾರದಿಂದ 50 ಸಾವಿರ ಕೋಟಿ ರು ನೆರವು ಕೋರಿದೆ.

ರಾಜಧಾನಿಗೆ ಪವಿತ್ರ ಮಣ್ಣು ಹಾಗೂ ಜಲ ಸಂಗ್ರಹ

ರಾಜಧಾನಿಗೆ ಪವಿತ್ರ ಮಣ್ಣು ಹಾಗೂ ಜಲ ಸಂಗ್ರಹ

ಅಮರಾವತಿ ನಿರ್ಮಾಣಕ್ಕಾಗಿ ಸುಮಾರು 16,000 ಗ್ರಾಮಗಳಿಂದ ಪವಿತ್ರ ಮಣ್ಣು ಹಾಗೂ ನದಿಗಳಿಂದ ಜಲ ಸಂಗ್ರಹಣೆ ಮಾಡಿಕೊಂಡು ಅಮರಾವತಿಯ ನಿರ್ಮಾಣ ಕಾರ್ಯಕ್ಕೆ ಬಳಸಲಾಗುತ್ತಿದೆ.

ಸುಮಾರು 1,20,000 ಕೋಟಿ ರು ವೆಚ್ಚ

ಸುಮಾರು 1,20,000 ಕೋಟಿ ರು ವೆಚ್ಚ

ಸುಮಾರು 1,20,000 ಕೋಟಿ ರು ವೆಚ್ಚದ ಹೊಸ ನಗರಿ ನಿರ್ಮಾಣಕ್ಕೆ ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರ, ಕೇಂದ್ರ ಸರ್ಕಾರದಿಂದ 50 ಸಾವಿರ ಕೋಟಿ ರು ನೆರವು ಕೋರಿದೆ.

ಅಮರಾವತಿಯಲ್ಲಿ ಏನೇನು ಇರಲಿದೆ

ಅಮರಾವತಿಯಲ್ಲಿ ಏನೇನು ಇರಲಿದೆ

16.9 ಚದರ ಕಿ.ಮೀ ವಿಸ್ತೀರ್ಣ, 11.5 ಮಿಲಿಯನ್ ಜನಸಂಖ್ಯೆ, 2035ರ ಹೊತ್ತಿಗೆ 3.3 ಮಿಲಿಯನ್ ಉದ್ಯೋಗ ಅವಕಾಶ. ರಾಜಧಾನಿಯಲ್ಲಿ ಶೇ 40ರಷ್ಟು ಹಸಿರು ಹೊದಿಕೆ. ಕೈಗಾರಿಕಾ ಹಬ್ ಗಳ ಜೊತೆಗೆ ರಾಜಧಾನಿಗೆ ನೇರ ಸಂಪರ್ಕ ಸಿಗಲಿದೆ.

ಐತಿಹಾಸಿಕ ನಗರಿಯಾಗಿ ಅಮರಾವತಿ

ಐತಿಹಾಸಿಕ ನಗರಿಯಾಗಿ ಅಮರಾವತಿ

ಇಂದ್ರನ ರಾಜಧಾನಿ ಅಮರಾವತಿ ಹೆಸರನ್ನು ಬಳಸಿಕೊಂಡು ನಿರ್ಮಾಣವಾಗುತ್ತಿರುವ ಈ ನಗರ ಇರುವ ಪ್ರದೇಶವನ್ನು ಶಾತವಾಹನರು ಮೊದಲಿಗೆ ಆಳಿದ್ದರು. ಕ್ರಿ.ಪೂ 2ನೇ ಶತಮಾನ ಹಾಗೂ ನಂತರ ಮೌರ್ಯರ ಆಳ್ವಿಕೆ ಪಡೆಯಿತು. ಗುಂಟೂರು ಹಾಗೂ ವಿಜಯವಾಡ ನಡುವೆ ಕೃಷ್ಣಾ ನದಿ ತೀರದಲ್ಲಿದೆ ಪುಣ್ಯಕ್ಷೇತ್ರ ಅಮರೇಶ್ವರ ಕ್ಷೇತ್ರವಾಗಿ ಜನಪ್ರಿಯವಾಗಿದೆ.

English summary
Prime Minister Narendra Modi laid the foundation stone for Amravati, the new capital city of Andhra Pradesh, at a village not far from Guntur. The capital city is a dream project of Chief Minister Chandrababu Naidu, whose TDP-BJP government was hoisted to power in state elections last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X